Advertisement

ಚೀನಾ-ಪಾಕ್‌ ತಾಂತ್ರಿಕ ವಿನಿಮಯ ಕಳವಳಕಾರಿ‌: ಐಎಎಫ್ ಮುಖ್ಯಸ್ಥ

12:34 AM Oct 06, 2021 | Team Udayavani |

ನವದೆಹಲಿ: ಲಡಾಖ್‌ನಲ್ಲಿ ಚೀನಾದಿಂದ ಎದುರಾಗುವ ಸಂಭಾವ್ಯ ದಾಳಿ ತಡೆಯುವ ನಿಟ್ಟಿನಲ್ಲಿ ಮೂರು ವಾಯು ನೆಲೆಗಳಲ್ಲಿ ಪಡೆಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

Advertisement

ಚೀನಾ ಮತ್ತು ಪಾಕಿಸ್ತಾನ ಇತ್ತೀಚೆಗೆ ತಾಂತ್ರಿಕ ಮಾಹಿತಿ ವಿನಿಮಯ ವಿಚಾರದ ಬಗ್ಗೆ ಒಪ್ಪಂದ ಮಾಡಿಕೊಂಡದ್ದು ಕಳವಳಕಾರಿ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥ ಏರ್‌ಚೀಫ್ ಮಾರ್ಷಲ್‌ ವಿವೇಕ್‌ ರಾಮ್‌ ಚೌಧರಿ ಹೇಳಿದ್ದಾರೆ.

ನವದೆಹಲಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಪೂರ್ವ ಲಡಾಖ್‌ನಲ್ಲಿ ಚೀನಾ ಹೆಚ್ಚಿನ ಪ್ರಮಾಣದಲ್ಲಿ ಸೇನೆ ಸೇರಿಸಿದ್ದರಿಂದ ಅಳುಕಬೇಕಾದ ಅಗತ್ಯವಿಲ್ಲ. ಚೀನಾ ಮತ್ತು ಪಾಕಿಸ್ತಾನ ಎರಡೂ ರಾಷ್ಟ್ರಗಳು ಒಡ್ಡಬಹುದಾದ ಸವಾಲುಗಳನ್ನು ಎದುರಿಸಲು ದೇಶ ಸಮರ್ಥವಾಗಿದೆ ಎಂದರು. ಕಳವಳಕ್ಕೆ ಒಳಗಾಗ ಬೇಕಾದ ಅಂಶವೆಂದರೆ ಎರಡೂ ರಾಷ್ಟ್ರಗಳು ಪಾಶ್ಚಿಮಾತ್ಯ ಮಿಲಿಟರಿ ತಂತ್ರಜ್ಞಾನವನ್ನು ವಿನಿಮಯ ಮಾಡಿಕೊಂಡಿವೆ ಎಂದಿದ್ದಾರೆ.

ಇದನ್ನೂ ಓದಿ:ತೆರಿಗೆ ವಂಚಕರ ಸ್ವರ್ಗವಾಯಿತೆ ಲಂಡನ್‌ ?

ಡಬಲ್‌ ಫಿಂಗರ್‌ ಟೆಸ್ಟ್‌ ಮಾಡಿಲ್ಲ:
ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಭಾರತೀಯ ವಾಯುಪಡೆಯ (ಐಎಎಫ್) ತರಬೇತಿ ಕೇಂದ್ರದಲ್ಲಿ ಅತ್ಯಾಚಾರಕ್ಕೆ ಒಳಗಾಗಿರುವುದಾಗಿ ದೂರು ಸಲ್ಲಿಸಿರುವ ಮಹಿಳಾ ಐಎಎಫ್ ಅಧಿಕಾರಿಯವರ ವೈದ್ಯಕೀಯ ಪರೀಕ್ಷೆಯ ವೇಳೆ ಸುಪ್ರೀಂ ಕೋರ್ಟ್‌ನಿಂದ ನಿಷೇಧಕ್ಕೊಳಗಾಗಿರುವ “ಎರಡು ಬೆರಳುಗಳ ಪರೀಕ್ಷೆ’ಯನ್ನು ನಡೆಸಲಾಗಿಲ್ಲ ಎಂದೂ ಚೌಧರಿ ಸ್ಪಷ್ಟಪಡಿಸಿದ್ದಾರೆ. ಜೊತೆಗೆ, ಪ್ರಕರಣದಲ್ಲಿ ತಪ್ಪಿತಸ್ಥ ಅಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದೂ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next