Advertisement

ಮಲೇಷ್ಯಾ ವಾಯುಪಡೆ ಜತೆಗೆ ಐಎಎಫ್ ಸಮರಾಭ್ಯಾಸ

10:58 PM Aug 12, 2022 | Team Udayavani |

ನವದೆಹಲಿ: ಮಲೇಷ್ಯಾದಲ್ಲಿ ನಡೆಯಲಿರುವ ನಾಲ್ಕು ದಿನಗಳ ದ್ವಿಪಕ್ಷೀಯ ಸಮರಾಭ್ಯಾಸದಲ್ಲಿ ಭಾಗವಹಿಸಲೆಂದು ಭಾರತೀಯ ವಾಯುಪಡೆಯ ತಂಡವೊಂದು ಮಲೇಷಿಯಾಕ್ಕೆ ತೆರಳಿದೆ.

Advertisement

ಅಲ್ಲಿ ಐಎಎಫ್ ತಂಡ ಎಸ್‌ಯು-30 ಎಂಕೆಐ ಮತ್ತು ಸಿ-17 ಯುದ್ಧ ವಿಮಾನಗಳ ಮೂಲಕ ಸಾಹಸ ಪ್ರದರ್ಶನ ಮತ್ತು ಸಮರಭ್ಯಾಸ ನಡೆಸಲಿದೆ. ಅದೇ ರೀತಿಯಲ್ಲಿ ಮಲೇಷ್ಯಾದ ವಾಯು ಪಡೆಯು ಎಸ್‌ಯು 30 ಎಂಕೆಎಂ ಯುದ್ಧ ವಿಮಾನಗಳ ಪ್ರದರ್ಶನ ನಡೆಸಲಿದೆ.

“ಉದರಶಕ್ತಿ’ ಎಂದು ಕರೆಯಲಾಗಿರುವ ಈ ಸಮರಾಭ್ಯಾಸದಿಂದ ಎರಡೂ ರಾಷ್ಟ್ರಗಳ ವಾಯುಪಡೆಯ ಸಿಬ್ಬಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುವುದಕ್ಕೆ ಹಾಗೂ ಹೊಸ ವಿಚಾರಗಳನ್ನು ಕಲಿಯುವುದಕ್ಕೆ ಸಹಕಾರಿಯಾಗಲಿದೆ ಎಂದು ಐಎಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next