ಹೊಸದಿಲ್ಲಿ : ಭಾರತೀಯ ವಾಯುಪಡೆಯ ಚೇತಕ್ ಹೆಲಿಕಾಪ್ಟರ್ ಒಂದು ಇಂದು ಅಲಹಾಬಾದ್ ಸಮೀಪ ಬಾಮ್‌ರೋಲಿ ಎಂಬಲ್ಲಿ ತರಬೇತಿ ಕಾರ್ಯದಲ್ಲಿ ನಿರತವಾಗಿದ್ದ ವೇಳೆ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮವಾಗಿ ತುರ್ತಾಗಿ ಭೂಸ್ಪರ್ಶಮಾಡುವ ಅನಿವಾರ್ಯತೆಯಲ್ಲಿ ಮಗುಚಿ ಬಿದ್ದ ಘಟನೆ ವರದಿಯಾಗಿದೆ.
ಹೆಲಿಕಾಪ್ಟರ್‌ನಲ್ಲಿದ್ದ ಇಬ್ಬರೂ ಪೈಲಟ್‌ಗಳು ಸುರಕ್ಷಿತವಾಗಿ ಪಾರಾಗಿದ್ದಾರೆ.
ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಾಗ ಪೈಲಟ್‌ಗಳು ಅದನ್ನು ತುರ್ತಾಗಿ ಕೆಳಗಿಳಿಸಲು ಯತ್ನಿಸಿದರು. ಆಗ ಹೆಲಿಕಾಪ್ಟರ್ ಅಡಿಮೇಲಾಗಿ ನೆಲಕ್ಕುರುಳಿತು ಎಂದು ಐಎಎಫ್ ಮೂಲಗಳು ತಿಳಿಸಿವೆ.
ಆದರೆ ಈ ಅವಘಡದ ಕಾರಣಗಳನ್ನು ಖಚಿತಪಡಿಸಿಕೊಳ್ಳುವ ಸಲುವಾಗಿ ಐಎಎಫ್, ಕೋರ್ಟ್ ಆಫ್ ಎನ್‌ಕ್ವಯರಿಯನ್ನು (court of inquiry – COI) ಆದೇಶಿಸಿದೆ.
ಸಮತಟ್ಟಲ್ಲದ ಪ್ರದೇಶದಲ್ಲಿ ಹೆಲಿಕಾಪ್ಟರನ್ನು ಬಲಂತವಾಗಿ ಇಳಿಸುವ ಪೈಲಟ್‌ಗಳ ಯತ್ನದಲ್ಲಿ ಅದು ಅಡಿಮೇಲಾಗಿ ಉರುಳಿತೆಂದುಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್ ಬಾಮ್‌ರೋಲಿಯಲ್ಲಿ ತನ್ನ ನಿತ್ಯದ ಅಭ್ಯಾಸದಲ್ಲಿ ತೊಡಗಿದ್ದ ವೇಳೆ ಈ ಅವಘಡ ಸಂಭವಿಸಿದೆ.