Advertisement

ಗುಜರಾತ್‌ನಲ್ಲಿ :ವಾಯುಪಡೆ ವಿಮಾನ ಪತನ ; ಪೈಲಟ್‌ ದುರ್ಮರಣ 

12:06 PM Jun 05, 2018 | |

ಕಚ್‌ : ಭಾರತೀಯ ವಾಯುಪಡೆಗೆ ಸೇರಿದ ಜಾಗ್ವಾರ್‌ ಫೈಟರ್‌ ವಿಮಾನ ಗುಜರಾತ್‌ನಲ್ಲಿ  ಮಂಗಳವಾರ ಅವಘಡಕ್ಕಿಡಾಗಿ ಪೈಲಟ್‌ ದುರ್ಮರಣವನ್ನಪ್ಪಿದ್ದಾರೆ. 

Advertisement

ಜಾಮ್‌ನಗರದಿಂದ ದೈನಂದಿನ ತರಬೇತಿ ಹಾರಾಟಕ್ಕೆ ತೆರಳಿದ್ದ ವಿಮಾನ  ಮುಂದ್ರಾದ ಬರೇಜ್‌ ಎಂಬಲ್ಲಿ  ಪತನಗೊಂಡಿದೆ. ಪತನಗೊಂಡ ಸ್ಥಳದಲ್ಲಿ ಬೆಂಕಿ ಹೊತ್ತಿಕೊಂಡಿರುವ ಬಗ್ಗೆ ವರದಿಯಾಗಿದೆ.

ಅವಘಡ ನಡೆದ ಸ್ಥಳಕ್ಕೆ  ಪೊಲೀಸರು, ವಾಯುಪಡೆ ಅಧಿಕಾರಿಗಳು ದೌಡಾಯಿಸಿದ್ದಾರೆ. 

ಅವಘಡದ ಕುರಿತು ತನಿಖೆಗೆ ವಾಯುಪಡೆ ಆದೇಶ ನೀಡಿದೆ. 

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next