ಪಣಜಿ:ನನ್ನೆಲ್ಲಾ ಸಹೋದ್ಯೋಗಿಗಳು, ತಂತ್ರಜ್ಞರು, ನಿರ್ದೇಶಕರು, ಅಭಿಮಾನಿಗಳು ನನ್ನನ್ನು ಬೆಳೆಸಿದ್ದೀರಿ. ನಿಮ್ಮ (ಜನರ) ಋಣಭಾರ ನನ್ನ ಮೇಲಿದೆ. ಅದಕ್ಕಾಗಿ ನಾನು ನಿಮಗೆ ಅಭಾರಿಯಾಗಿದ್ದೇನೆ. ಆದರೆ ನಾನು ನಿಮ್ಮ ಋಣವನ್ನು ಯಾವತ್ತೂ ತೀರಿಸಲ್ಲ, ಯಾಕೆಂದರೆ ಅದು ನಿಮ್ಮ ಪ್ರೀತಿ, ಅದನ್ನು ನಾನು ಬಿಟ್ಟುಕೊಡಲಾರೆ ಎಂದು ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಹೇಳಿದರು.
ಅವರು ಬುಧವಾರ ಗೋವಾದಲ್ಲಿ ಆರಂಭಗೊಂಡ 50ನೇ ವರ್ಷದ ಅಂತಾರಾಷ್ಟ್ರೀಯ ಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಅಮಿತಾಬ್ ಬಚ್ಚನ್ ಅವರ ಜೀವಮಾನದ ಸಾಧನೆ ಪರಿಗಣಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು. ಸೂಪರ್ ಸ್ಟಾರ್ ರಜನಿಕಾಂತ್ ಜೀ ನನಗೆ ಪ್ರತಿದಿನವೂ ಸ್ಫೂರ್ತಿಯಾಗಿದ್ದಾರೆ. ಅವರೊಬ್ಬ ನಮ್ಮ ಕುಟುಂಬದ ಸದಸ್ಯರಾಗಿದ್ದಾರೆ. ರಜನಿ ಒಬ್ಬ ಶ್ರೇಷ್ಠ ನಟ ಎಂದು ಶ್ಲಾಘಿಸಿದರು.
ನನ್ನನ್ನು ರೂಪಿಸಿದವರಲ್ಲಿ ನಿರ್ದೆಶಕರು, ತಂತ್ರಜ್ಞರು ಎಲ್ಲರೂ ಇದ್ದಾರೆ..ಅವರಿಗಿಂತ ನೀವು (ಅಭಿಮಾನಿಗಳು, ಪ್ರೇಕ್ಷಕರು) ನನ್ನನ್ನು ಬೆಳೆಸಿದ್ದೀರಿ. ನಾನು ಗೆದ್ದಾಗ, ಸೋತಾಗ ಕ್ಯೆ ಹಿಡಿದು ನಡೆಸಿದ್ದಿರಿ. ಅ ಋನ ನನ್ನ ಮೇಲಿದೆ. ಆದರೆ ಅದನ್ನು ತೀರಿಸಲಾಗದು, ತೀರಿಸಲೂ ಮನಸ್ಸಿಲ್ಲ. ಅದು ಹಾಗೆ ಇರಲಿ. ಯಾಕೆಂದರೆ ಅದು ನಿಮ್ಮ ಪ್ರೀತಿ ಎಂದರು ಅಮಿತಾಬ್.
ರಜನೀಕಾಂತ್ ಮತ್ತು ನಾನು ಒಂದೇ ಕುಟುಂಬದ ಸದಸ್ಯರಂತೆ ಇದ್ದು ಪರಸ್ಪರ ಸಲಹೆಗಳನ್ನು ಕೊಟ್ಟುಕೊಳ್ಳುತ್ತಿರುತ್ತೇವೆ, ನಮ್ಮ ನಡುವಿನ ಸಂಬಂಧ ಅನನ್ಯವಾದುದು. ರಜನಿಕಾಂತ್ ಅವರೊಬ್ಬ ಶ್ರೇಷ್ಠ ನಟ ಎಂಬುದನ್ನು ಹೇಳಲು ಅಮಿತಾಭ್ ಮರೆಯಲಿಲ್ಲ.