Advertisement

ಅವಕಾಶವಿದ್ದರೆ ರಾಜ್ಯದಲ್ಲಿ ನಾನೇ ಮೊದಲು ಕೊರೊನಾ ಲಸಿಕೆ ಪಡೆಯುವೆ: ಡಾ.ಕೆ. ಸುಧಾಕರ್

01:07 PM Jan 10, 2021 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿ ಅವಕಾಶವಿದ್ದರೆ ರಾಜ್ಯದಲ್ಲಿ ಕೋವಿಡ್ ಲಸಿಕೆಯನ್ನು ಮೊದಲು ನಾನೇ ಪಡೆಯುತ್ತೇನೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

Advertisement

ನಗರದಲ್ಲಿರುವ ರಾಜ್ಯಮಟ್ಟದ ಲಸಿಕೆ ಸಂಗ್ರಹ ಕೇಂದ್ರದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಸೋಮವಾರ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಲಿದೆ. ಅದರಲ್ಲಿ ಯಾರಿಗೆ ಹೇಗೆ ಯಾವಾಗ ಲಸಿಕೆ ನೀಡಬೇಕು ಎಂಬ ಅಂಶವನ್ನು ತಿಳಿಸಲಾಗಿರುತ್ತದೆ. ಜನಪ್ರತಿನಿಧಿಗಳು ಪಡೆಯಬಹುದು ಎಂಬ ಅವಕಾಶವಿದ್ದರೆ ನಾನೇ ಮೊದಲ ಲಸಿಕೆ ಪಡೆದು ಆರೋಗ್ಯ ಕಾರ್ಯಕರ್ತರ, ಜನಸಾಮಾನ್ಯರ ಆತ್ಮವಿಶ್ವಾಸ ಹೆಚ್ಚಿಸುತ್ತೇನೆ. ಲಸಿಕೆ ಕುರಿತು ಯಾವುದೇ ಅನುಮಾನವಿಲ್ಲ,  ಯಾವುದೇ ಆತಂಕವೂ ಇಲ್ಲ ಎಂದರು.

ಇದನ್ನೂ ಓದಿ:ಏಳು ರಾಜ್ಯಗಳಲ್ಲಿ ಕಾಣಿಸಿಕೊಂಡ ಹಕ್ಕಿ ಜ್ವರ: ಶನಿವಾರ 1200 ಕ್ಕೂ ಹೆಚ್ಚು ಹಕ್ಕಿಗಳ ಸಾವು!

Advertisement

Udayavani is now on Telegram. Click here to join our channel and stay updated with the latest news.

Next