Advertisement

Karnataka Politics; ನಾನು ಲೋಕಸಭೆಗೆ ಹೋಗಲ್ಲ, ನನ್ನ ಮಗನೂ ರಾಜಕೀಯಕ್ಕೆ ಬರಲ್ಲ: ಸೋಮಶೇಖರ್

01:27 PM Aug 24, 2023 | Team Udayavani |

ಬೆಂಗಳೂರು: ನಾನು ಲೋಕಸಭೆಗೂ ಹೋಗಲ್ಲ, ನನ್ನ ಮಗನೂ 100% ರಾಜಕೀಯಕ್ಕೆ ಬರುವುದಿಲ್ಲ. ಒಂದು ವೇಳೆ ನಾನು ಹಾಗೆ ಮಾಡಿದರೆ ಆ ದಿನವೇ ನನ್ನ ಬಂದು ಕೇಳಿ ಎಂದು ಯಶವಂತಪುರ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.

Advertisement

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೆಹಲಿಗೆ ಹೋಗುವ ಬಗ್ಗೆ ಇಲ್ಲಿಯವರೆಗೆ ಕರೆ ಬಂದಿಲ್ಲ, ನಾನು ಕಾಯುತ್ತಿದ್ದೇನೆ. ಮೆಸೇಜ್ ಬಂದರೆ ನಾಳೆ ಹೋಗುತ್ತೇನೆ. ನಾನು ಅಮಿತ್ ಶಾ ಜೊತೆ ಚೆನ್ನಾಗಿದ್ದೇನೆ ಅಂತ ಟಾರ್ಗೆಟ್ ಏನೂ ಇಲ್ಲ. ಅವರು ಸಹಕಾರ ಮಂತ್ರಿ, ನಾನು ಸಹಕಾರ ಮಂತ್ರಿ ಆಗಿದ್ದೆ ಅಷ್ಟೇ ಎಂದರು.

ಇದನ್ನೂ ಓದಿ:Ramanagara: ವಾಹನದ ಮೇಲೆ ಮರ ಬಿದ್ದು 8 ಮಂದಿಗೆ ಗಾಯ, ವಾಹನ ಸಂಪೂರ್ಣ ಜಖಂ

ನಕಲಿ ಬಿಲ್ ಮಾಡಿದವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ ಎಂಬ  ಎಚ್ ಡಿಕೆ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕ್ಷೇತ್ರದ ಜನತೆ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಅವರ ಅಭ್ಯರ್ಥಿ ನಾಲ್ಕು ಬಾರಿ ಸೋತಿದ್ದಾರೆ? ಡಿಸಿಎಂ ಎಸ್ ಟಿಐ ಆದೇಶ ಮಾಡಿದ್ದಾರೆ. ನಮ್ಮ ಕ್ಷೇತ್ರದಲ್ಲೂ ತನಿಖೆ ನಡೆಯುತ್ತಿದೆ. ಯಾವುದೇ ಸಣ್ಣ ಪುಟ್ಟದ್ದು ನಕಲಿಯೆಂದು ಗೊತ್ತಾದರೆ ಕ್ರಮವಹಿಸಲಿ ಎಂದರು.

ಆಹ್ವಾನವಿದೆ: ಹೆಬ್ಬಾರ್

Advertisement

ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಮಾತನಾಡಿ, ಕಾಂಗ್ರೆಸ್ ಹೋಗುವ ಬಗ್ಗೆ ಅಪೇಕ್ಷೆ ಪಡುತ್ತಿದ್ದಾರೆ, ಆಹ್ವಾನ ಮಾಡುತ್ತಾರೆ. ಬೆಂಬಲಿಗರು ಅವರ ಅಭಿಪ್ರಾಯ ಹೇಳುತ್ತಾರೆ. ಯಾವುದನ್ನು ಯಾವಾಗ ಹೇಳಬೇಕೆಂದು ನಮಗೆ ಗೊತ್ತಿದೆ. ಕ್ಷೇತ್ರದಲ್ಲಿ ನನ್ನ ವಿರುದ್ಧ ಇದ್ದವರ ಬಗ್ಗೆ ಶಿಸ್ತುಕ್ರಮವನ್ನು ಬೆಂಗಳೂರಿಗೆ ಬಂದು ಗಮನಿಸಿದ್ದೇನೆ. ಈಗಲೇ ಸಂಶಯ ಯಾಕೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next