Advertisement

ನಾನು ದನದ ಮಾಂಸ ತಿನ್ನುತ್ತೇನೆ, ಆಹಾರ ಪದ್ಧತಿ ನನ್ನ ಹಕ್ಕು, ಕೇಳುವವರು ಯಾರು? ಸಿದ್ದರಾಮಯ್ಯ

06:34 PM Dec 28, 2020 | keerthan |

ಬೆಂಗಳೂರು: ನಾನು ದನದ ಮಾಂಸ ತಿನುತ್ತೇನೆ. ನನ್ನ ಆಹಾರ ಪದ್ಧತಿ ನನ್ನ ಹಕ್ಕು. ಅದನ್ನ ಕೇಳೋಕೆ ನೀನು ಯಾರು ಎಂದು ಕೇಳಿದ್ದೇನೆ, ಅಧಿವೇಶನದಲ್ಲೂ ನಾನು ಕೇಳಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಬೆಂಗಳೂರಿನ ರೇಸ್ ಕೋರ್ಸ್ ರಸ್ತೆಯ ಕಾಂಗ್ರೆಸ್ ಭವನದಲ್ಲಿ ಸೋಮವಾರ ನಡೆದ ಕಾಂಗ್ರೆಸ್ 136 ನೇ ಸಂಸ್ಥಾಪನಾ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೆಲವು ವಿಚಾರಗಳ ಬಗ್ಗೆ ನಮಗೆ ಮೊದಲು ಸ್ಪಷ್ಟತೆ ಇರಬೇಕು. ಗೋ ಮಾತೆಯನ್ನು ನಾವು ಪೂಜಿಸುತ್ತೇವೆ ಸರಿ. ಆದರೆ  ವಯಸ್ಸಾದ ಹಸು, ಗಂಡು ಕರು ಏನ್ ಮಾಡೋದು ಹೇಳಿ? ಅವುಗಳನ್ನ ಏನ್ ಮಾಡೋದು ಹೇಳಿ? ಕಾಂಗ್ರೆಸ್ ನವರು ಇದನ್ನ ಸ್ಪಷ್ಟವಾಗಿ ಹೇಳಬೇಕು. ಬೇರೆ ಜಾತಿಯವರು ಏನೆಂದುಕೊಳ್ಳುತ್ತಾರೆ ಎಂದು ನಮ್ಮವರು ಮೌನಕ್ಕೆ ಶರಣಾಗುತ್ತಾರೆ. ಇದನ್ನು ಮೊದಲು ನಾವು ಬಿಡಬೇಕು. ನಮ್ಮ ಸಿದ್ಧಾಂತವನ್ನು ನಾವು ಹೇಳಬೇಕು ಎಂದು ಸ್ವಪಕ್ಷೀಯರಿಗೆ ಹೇಳಿದರು.

1964ರಲ್ಲಿ ಗೋ ಹತ್ಯೆ ಕಾನೂನು ತಂದಿದ್ದೆವು, ಆಗ ಬಿಜೆಪಿಯವರು ಇದ್ದರಾ? ಬಿಜೆಪಿಗಿಂತ ಹೆಚ್ಚು ಕಾರ್ಯಕರ್ತರ ಬಲ ಕಾಂಗ್ರೆಸ್ ಪಕ್ಷಕ್ಕೆ ಇದೆ. ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾದರೆ, ಬಡವರಿಗೆ ರೈತರಿಗೆ, ಕಾರ್ಮಿಕರಿಗೆ, ಹಿಂದುಳಿದವರಿಗೆ, ದಲಿತರಿಗೆ ಹಿನ್ನಡೆಯಾದಂತೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next