Advertisement
ಮಾಡಾಳ್ ಗ್ರಾಮದಲ್ಲಿ ನೇತೃತ್ವದಲ್ಲಿ ಕರೆಯಲಾಗಿದ್ದ,ಸ್ವಾಭಿಮಾನಿ ಸಂಕಲ್ಪ ಯಾತ್ರೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಬಿಜೆಪಿ ನಮಗೆ ಟಿಕೆಟ್ ನೀಡದೇ ಇರುವುದು ನೋವಿನ ಸಂಗತಿ, ಪಕ್ಷದಲ್ಲಿ ನಾನೊಬ್ಬ ಪ್ರಾಮಾಣಿಕ ಕಾರ್ಯಕರ್ತನಾಗಿದ್ದು, ಪಕ್ಷವು ಅದನ್ನು ಪರಿಗಣಿಸಿ ಟಿಕೆಟ್ ಕೊಡಬೇಕಿತ್ತು, ಚನ್ನಗಿರಿಯ ಬಿಜೆಪಿ ಅಭ್ಯರ್ಥಿಯನ್ನು ಮಾಧ್ಯಮಗಳಲ್ಲಿ ಚನ್ನಗಿರಿಯ ಮೋದಿ ಎಂದು ತೋರಿಸುತಿರುವುದು ಸರಿಯಲ್ಲ. ಒಬ್ಬ ಪತ್ರಕರ್ತ ಮಾರಾಟವಾದರೆ ಸಾವಿರ ಭಯೋತ್ಪಾದಕರಿಗೆ ಸಮ ಎಂಬುದನ್ನು ಡಾ. ಬಿಆರ್ ಅಂಬೇಡ್ಕರ್ ಅವರು ಹೇಳಿದ್ದಾರೆ ಆದರಿಂದ ನಿಜಾಂಶವನ್ನು ತೋರಿಸುವ ಕೆಲಸವನ್ನು ಮಾಡಬೇಕು ಎಂದರು.
Related Articles
Advertisement
ತಾಲೂಕು ನೋಡುವುದಕ್ಕೆ ಎಷ್ಟು ಅಭಿವೃದ್ಧಿ ಹೊಂದಿದೆ ಆದರೆ ಹಿಂದೆ ಯಾರ ಶ್ರಮ ಇದೆ ಎಂಬುವುದು ತಾಲೂಕಿನ ಮತದಾರ ಬಂಧುಗಳಿಗೆ ಗೊತ್ತು. ಯಾವ ಪಕ್ಷದ ಕಾರ್ಯಕರ್ತರನ್ನು ನಾವು ಟೀಕೆ ಮಾಡುವುದಿಲ್ಲ ನಮ್ಮ ಅಭಿವೃದ್ಧಿ ನಮ್ಮ ತಂದೆಯವರ ಮೇಲೆ ಇರುವ ಪ್ರೀತಿ ನಮ್ಮನ್ನು ಗೆಲ್ಲಿಸುತ್ತದೆ ಎಂದರು.
ಸಭೆ ಒಳಗೆ ಬಂದಿರುವಂತಹ ಎಲ್ಲಾ ನನ್ನ ಆತ್ಮೀಯ ಬಂಧುಗಳಲ್ಲಿ ಕೇಳಿಕೊಳ್ಳುವುದೇನೆಂದರೆ ಇಲ್ಲಿ ನಿಮ್ಮ ಪರವಾಗಿ ಇರುತ್ತೇನೆ ಎಂದು ಕೈಯನ್ನು ಎತ್ತಿ ಹೋಗಿ ಬೇರೆಯವರ ಜತೆಗೆ ಹೊಂದಾಣಿಕೆ ಮಾಡಿಕೊಂಡು ಮತವನ್ನು ಅವರಿಗೆ ಹಾಕಿದರೆ ಮಾಡಾಳು ಕುಟುಂಬ ವಿಷ ಕುಡಿಬೇಕಾಗುತ್ತದೆ ಎಂದು ಕಣ್ಣೀರಾಗುತ್ತ ಹೇಳಿದರು.
75 ವರ್ಷಗಳ ನಮ್ಮ ತಂದೆಯವರ ರಾಜಕೀಯ ಜೀವನದಲ್ಲಿ ಯಾವ ಪಕ್ಷದವರಿಗೆ ಆಗಲಿ ಯಾವೊಬ್ಬ ಕಾರ್ಯಕರ್ತನೆಯಾಗಲಿ ಮನಸ್ಸಿಗೆ ನೋವು ಮಾಡದ ರೀತಿಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ದೀನ ದಲಿತರ ಉದ್ಧಾರವನ್ನು ಮಾಡಿದ್ದೇವೆ. ಎಲ್ಲಾ ಜಾತಿ ಜನಾಂಗಕ್ಕೆ ಸಮುದಾಯ ಭವನವನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ. ಚನ್ನಗಿರಿಯ ಪಟ್ಟಣದ ಒಳಚರಂಡಿ ವ್ಯವಸ್ಥೆಯನ್ನು 50 ವರ್ಷದ ಮುಂಜಾಗ್ರತೆ ಇಟ್ಟುಕೊಂಡು ಎಕ್ಸಲೆಂಟ್ ಮಾಡಿದ್ದೇವೆ. ಇಂತಹ ಎನ್ನುವ ಅನೇಕ ಯೋಜನೆಗಳು ಅರ್ಧದಲ್ಲೇ ಇವೆ ಅವುಗಳನ್ನು ಪೂರ್ಣ ಮಾಡುವ ಮತ್ತು ಜನರ ಸಹೋದರತೆ ಕಾಪಾಡುವ ನಿಟ್ಟಿನಲ್ಲಿ ಮತ್ತೊಮ್ಮೆ ನನ್ನನ್ನು ಆಯ್ಕೆ ಮಾಡಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇನೆ ಎಂದರು.
ಮಾಡಾಳ್ ಮಲ್ಲಿಕಾರ್ಜುನ್ ರವರ ತಾಯಿ ಲೀಲಾವತಿ ವಿರುಪಾಕ್ಷಪ್ಪ ಮಾತನಾಡಿ. ನನ್ನ ಗಂಡನನ್ನು ಎರಡು ಬಾರಿ ಆಯ್ಕೆ ಮಾಡಿದ್ದೀರಿ ನಮ್ಮ ಕುಟುಂಬ ಕಷ್ಟದಲ್ಲಿದ್ದಾಗ ಬಂದು ನನಗೆ ಧೈರ್ಯವನ್ನು ತುಂಬಿದ್ದೀರಿ ನಿಮ್ಮ ಸೇವೆ ಮಾಡಲು ನಮಗೆ ಅವಕಾಶ ಮಾಡಿಕೊಡಿ ಅದಕ್ಕೆ ನನ್ನ ಮಗನನ್ನು ಸೇವೆಗಾಗಿ ನಿಮ್ಮ ಮಡಲಿಗೆ ಹಾಕುತ್ತಿದ್ದೇನೆ. ಇನ್ಮೇಲೆ ಮಲ್ಲಿಕಾರ್ಜುನ್ ನಮ್ಮ ಮಗ ಅಲ್ಲ ನಿಮ್ಮ ಸೇವಕ ಎಂದು ಹೇಳಿದರು.
ಈ ವೇಳೆ ಪ್ರವೀಣ್ ಕುಮಾರ್ ವಿರುಪಾಕ್ಷಪ್ಪ. ರಾಣಿ ಮಲ್ಲಿಕಾರ್ಜುನ್. ಲೀಲಾವತಿ ವಿರೂಪಾಕ್ಷಪ್ಪ. ಟಿವಿ ರಾಜು ಪಟೇಲ್. ನಲ್ಲೂರು ಶಿವಪ್ಪ. ಮದಿಕೆರೆ ಸಿದ್ದೇಶ್. ಮಂಗೇನ್ಹಳ್ಳಿ ಲೋಹಿತ್. ಶ್ರೀನಿವಾಸ್. ಆರ್ ಎಂ ರವಿ. ರುದ್ರೇಶ್ ಗೌಡ್ರು. ಇಟ್ಟಿಗೆ ಹೇಮಂತ್. ದಿಗ್ಗೆನಹಳ್ಳಿ ನಾಗರಾಜ್. ರುದ್ರೇ ಗೌಡ್ರು. ಹಾಗೂ ಉಪಸ್ಥಿತರು ಹಾಜರಿದ್ದರು.