“ಲೋ, ನಾವಿನ್ನೂ ಲೈಫಲ್ಲಿ ಸೆಟಲ್ ಆಗ್ಬೇಕು . ಯಾರ ಮೇಲೂ ಡಿಪೆಂಡ್ ಆಗ್ಬಾರ್ದಲ್ವಾ? ಕೆಲಸದ ಕಡೆ ಗಮನ ಕೊಡೋ. ನಾ ನಿನ್ನ ಬಿಟ್ಟು ಎಲ್ಲೂ ಹೋಗಲ್ಲ ಕಣೋ ಚಿನ್ನಪ್ಪಿ’.. ಅಂತೆಲ್ಲ ಬದುಕಿನ ಪಾಠ ಹೇಳಿ, ವಾಸ್ತವಕ್ಕೆ ಎಳತಂದು ಭವಿಷ್ಯದ ಕನಸುಗಳಿಗೆ ಇವತ್ತಿನಿಂದಲೇ ನೀರೆರೆಯುವ ಜಾಣೆ ನೀನು.
ಹಾಯ… ಚಿಂಪ್ಲಿ , ನಿನ್ನ ಚುಮು ಚುಮು ನೆನಪು ಮುಂಜಾನೆಯೇ ನನ್ನನ್ನ ಎಬ್ಬಿಸಿತು. ನೀ ಎಂದರೆ ಹೀಗೆ ಕಣೇ, ಸಾವಿರ ಅಚ್ಚರಿಗಳ ಅಪರೂಪದ
ಗುತ್ಛ. ಅದೆಷ್ಟೋ ದಿನಗಳ ತನಕ ಸದ್ದೇ ಇಲ್ಲದೆ ಉಳಿದು ಬಿಡುತ್ತೀಯ. ಕಾಲ… ಮಾಡಿದರೆ ಮೊಬೈಲ… ಸ್ವಿಚ್ ಆಫ್. ನಿನ್ನ ಬಿಟ್ಟಿರಲಾಗದೆ ಒಳಗೊಳಗೇ ಕುದ್ದು ಹೋಗಿ , ನಿನ್ನ ಮನೆಗೇ ಬಂದುಬಿಡೋಣ ಅಂದುಕೊಂಡಾಗೆಲ್ಲ ಎಂಥ¨ªೋ ಅಹಂ ಅಡ್ಡಬಂದು, ಸುಳ್ಳೇ ನೀನೇ ಬರಲಿ ಅಂತ ಚಡಪಡಿಸುತ್ತಾ ಕಾಯೋದು. ಅದು ಸಾಧ್ಯವಾಗದೇ ಹೋದಾಗ ಖುದ್ದು ನಾನೇ ನಿನ್ನ ಹುಡುಕಿಕೊಂಡು ಅಲೆಯುತ್ತಾ, ಕದರೂ ಒಮ್ಮೆ ನೋಡಿ ಬಿಡೋಣ ಅಂದುಕೊಳ್ಳುತ್ತಾ ಕಳ್ಳ ಹೆಜ್ಜೆಗಳಲ್ಲೇ ನಿನ್ನತ್ತ ನಡೆಯೋದು. ಹೀಗೆ, ನಿನ್ನ ಹುಡುಕ ಹೊರಟಾಗೆಲ್ಲೇ ನಾನು ಸೋತು ಹೋಗಿದ್ದೇನೆ. ನೀ ಇನ್ನೇನೋ ನನ್ನ ಕೈಯಿಂದ ಜಾರಿ ಹೋದೆಯೇನೋ ಅಂದುಕೊಂಡಾಗೆಲ್ಲಾ ತಟ್ಟನೆ ಎದುರಾಗಿಬಿಡುತ್ತೀಯಲ್ಲ? ಅದೇ ನನಗೆ ಅಚ್ಚರಿ.
ನನ್ನೆಲ್ಲಾ ಕೋಪ, ನಿನ್ನ ಮುಗುಳ್ನಗೆಯ ಬೆಚ್ಚನೆಯ ಅಪ್ಪುಗೆಗೆ ಕರಗಿ ಹೋಗುತ್ತದೆ. ನಿನ್ನನ್ನ ಹೇಗೆಲ್ಲಾ ತರಾಟೆಗೆ ತಗೋಬೇಕೆಂಬ ನನ್ನ ಮನೋಲೋಕದ ತಾಲೀಮು ಠುಸ್ ಪಟಾಕಿಯಂತಾಗುತ್ತದೆ. ಮನಸು ಮಾತೆಲ್ಲಾ ಮರೆತು ನಿನ್ನ ಕಿರುಬೆರಳು ಹಿಡಿದು ಹೊಸತೊಂದು ಲೋಕದೆಡೆಗೆ ನಡೆದು ಬಿಡುತ್ತದೆ. ನನ್ನನ್ನ ಒಬ್ಬಂಟಿಯಾಗಿಸಿ, ದೂರ ಮಾಡಿ ಹೋಗಿಬಿಡುತ್ತೀಯಲ್ಲ ಅಂತೆಲ್ಲ ರೊಳ್ಳೆ ತೆಗೆದರೆ, “ಸರಿ, ನಾಳೇನೇ ನಮ್ಮಿಬ್ಬರ ಮದ್ವೆ ಕಣೋ ಓಕೆನಾ?’ ಅನ್ನುತ್ತೀಯಲ್ಲ? ಆಗಿನ ಸಂಭ್ರಮವನ್ನು ಹೇಗೆ ವಿವರಿಸಲಿ?
“ಲೋ, ನಾವಿನ್ನೂ ಲೈಫಲ್ಲಿ ಸೆಟಲ್ ಆಗ್ಬೇಕು . ಯಾರ ಮೇಲೂ ಡಿಪೆಂಡ್ ಆಗ್ಬಾರ್ದಲ್ವಾ? ಕೆಲಸದ ಕಡೆ ಗಮನ ಕೊಡೋ. ನಾ ನಿನ್ನ ಬಿಟ್ಟು ಎಲ್ಲೂ ಹೋಗಲ್ಲ ಕಣೋ ಚಿನ್ನಪ್ಪಿ’.. ಅಂತೆಲ್ಲ ಬದುಕಿನ ಪಾಠ ಹೇಳಿ, ವಾಸ್ತವಕ್ಕೆ ಎಳತಂದು ಭವಿಷ್ಯದ ಕನಸುಗಳಿಗೆ ಇವತ್ತಿನಿಂದಲೇ ನೀರೆರೆಯುವ ಜಾಣೆ ನೀನು. ಹಳೆಯ ನೆನಪುಗಳು, ಇವತ್ತಿನ ಕ್ಷಣಗಳು, ಭವಿಷ್ಯದ ಕನಸುಗಳು ಎಲ್ಲವನ್ನೂ ಸುಂದರವಾಗಿಸಿಕೊಳ್ಳುವ ಅಪರೂಪದ ಹುಡುಗಿ ನೀನು.
ನನ್ನ ಇಡೀ ಬದುಕನ್ನ ನಿನ್ನ ಕೈಗೊಪ್ಪಿಸಿ ನಾ ನಿರಾಳವಾಗಿರಬಲ್ಲೆ ಕಣೆ ಹುಡುಗಿ. ಆದರೆ ಹೀಗೆ ತುಂಬಾ ದಿನ ಕಾಯಿಸಬೇಡ. ನಿನಗಾಗಿ ಪುಟ್ಟದೊಂದು ಗೂಡು ಕಟ್ಟುತ್ತಿದ್ದೇನೆ. ಆ ಗೂಡು ಸೇರಿದ ಮೇಲೆ ನಾನೇ ನಿನ್ನ ನೆರಳು. ನನ್ನೊಳಗಿನ ಹಾಡುಗಳಿಗೆಲ್ಲ ನೀನೇ ಕೊರಳು.
-ನಿನ್ನವನು
ಜೀವ ಮುಳ್ಳೂರು