Advertisement
ಮೈಸೂರಿನ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಸೋಮಣ್ಣ, ಶ್ರೀನಿವಾಸ್ ಸಾಹೇಬ್ರೆ ನಾನು ಸೋತೆ ಇಲ್ಲ.ಕಾಂಗ್ರೆಸ್ ನಲ್ಲಿ ನಿಂತು ಗೆದ್ದಿದ್ದೇನೆ.ಸ್ವತಂತ್ರ ಅಭ್ಯರ್ಥಿಯಾಗಿ 2 ಬಾರಿ ಗೆದ್ದಿದ್ದೇನೆ, ಬಿಜೆಪಿಗೆ ಬಂದು ಸೋತೆ. ನಾನು ಏನಾಗಿ ಬಿಡುತ್ತೇನೋ ಅನ್ನುವ ಭಯದಲ್ಲಿ ಸೋಲಿಸಿದರು ಎಂದರು.
Related Articles
Advertisement
ಬಿಹಾರದಲ್ಲಿ ಜಾತಿ ಗಣತಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿ ಪ್ರತಿಕ್ರಿಯಿಸಿ, ಕರ್ನಾಟಕದಲ್ಲಿ ಜಾತಿ ಗಣತಿ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದಾರೆ.2015ರಲ್ಲಿ ಜಾತಿ ಗಣತಿ ವರದಿಯನ್ನು ನೋಡಿದರೆ ಆಶ್ಚರ್ಯ ಆಗುತ್ತದೆ. ಈ ಸಮಾಜ ಕವಲುದಾರಿಯಲ್ಲಿ ಹೋಗುವ ಸಾಧ್ಯತೆ ಇದೆ.ಬಸವ ಜಯಂತಿ ಕಾರ್ಯಕ್ರಮ ಎರಡು ದಿನ ನಡೆದಿದೆ. ಬೇರೆಯದನ್ನು ಬಿಟ್ಟು ಅರ್ಹತೆ ಇದೆ ಅಂತಹರಿಗೆ ಅವಕಾಶ ಕೊಡಿ. ನೀವುಗಳು ಒಗ್ಗಟ್ಟಾಗಬೇಕು. ಇಲ್ಲ ಅಂದರೆ ಹೇಳೋರು ಕೇಳೋರು ಇಲ್ಲದಂತಾಗುತ್ತದೆ ಎಂದರು.
ನಮ್ಮಲ್ಲಿ ಎಲ್ಲವೂ ಇದೆ ಅವಕಾಶ ಬಂದಾಗ ಕಣ್ಮುಚ್ಚಿ ಕುಳಿತುಕೊಳ್ಳುತ್ತೇವೆ.ನಾನು ನಿಷ್ಟುರವಾಗಿ ಮಾತನಾಡುತ್ತೇನೆ.ಆದರಿಂದ ಏನಾಗಿದೆ ಎಂಬ ಬಗ್ಗೆ ಚರ್ಚೆ ಬೇಡ. ಕಷ್ಟ ಪಟ್ಟು ಬೆಂಗಳೂರಿನಲ್ಲಿ ಬೆಳೆದಿದ್ದೇನೆ. ಕೆಲಸಗಾರರು ಎಂಬ ಭಾವನೆ ಇದೆ.ತಮಿಳುನಾಡಿಗೆ ಹೋಗಿದ್ದಾಗ ಅಲ್ಲಿನ ಮಂತ್ರಿ ಕೇಳಿದರು, ಗೋವಿಂದರಾಜನಗರ ಯಾಕೆ ಬಿಟ್ಟಿರಿ ಎಂದು. ನಾನು ಬಿಡಲಿಲ್ಲ, ನನ್ನನ್ನ ಬೇರೆ ಕ್ಷೇತ್ರಕ್ಕೆ ಕಳುಹಿಸಿದರು ಎಂದೆ.
ಕರುಣಾ ನಿಧಿ 9 ಭಾರಿ ಗೆದಿದ್ದಾರೆ.ಪ್ರತಿ ಭಾರಿಯೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಗೆದಿದ್ದಾರೆ. ಅದೇ ರೀತಿ ಮುಂದೆ ನೀವು ಬೇರೆ ಬೇರೆ ಕ್ಷೇತ್ರಕ್ಕೆ ಹೋಗಿ. ಸೋಲಿನಿಂದ ಧೃತಿಗೆಡಬೇಡಿ ಎಂದು ಸಲಹೆ ನೀಡಿದರು’ ಎಂದು ಹೇಳಿ ಮತ್ತೆ ಬೇರೆ ಕ್ಷೇತ್ರದಲ್ಲಿ ಚುನಾವಣೆಗೆ ನಿಲ್ಲುವ ಸುಳಿವನ್ನು ಸೋಮಣ್ಣ ನೀಡಿದರು.