ವಿಶ್ರಾಂತಿ ಪಡೆಯುತ್ತಿರುವ ಗ್ಲೆನ್ ಮ್ಯಾಕ್ಸ್‌ವೆಲ್ ಮೊದಲ ಬಾರಿಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.
Advertisement
“ನಾನು ಮಾನಸಿಕವಾಗಿ ಹಾಗೂ ದೈಹಿಕವಾಗಿ ತುಂಬಾ ಬಳಲಿದ್ದೆ. ಕಳೆದ 8 ತಿಂಗಳಿನಿಂದ ಒತ್ತಡ ಹೆಚ್ಚಾಗಿತ್ತು. ಕಳೆದ ನಾಲ್ಕಾರು ವರ್ಷಗಳಲ್ಲಿ ವಿಪರೀತ ಒತ್ತಡದಲ್ಲೇ ಇದ್ದೆ. ಕೊನೆಗೂ ನನ್ನಲ್ಲಿನ ಬದಲಾವಣೆಯನ್ನು ನನ್ನ ಗೆಳತಿ ಮೊದಲ ಬಾರಿಗೆ ಗುರುತಿಸಿ ತಿಳಿಸಿದಳು. ನಾನು ಎಚ್ಚೆತ್ತುಕೊಂಡು ವಿಶ್ರಾಂತಿಗೆ ನಿರ್ಧರಿಸಿದೆ. ಇದನ್ನು ನಾನು ಕ್ರಿಕೆಟ್ ಆಸ್ಟ್ರೇಲಿಯಕ್ಕೆ ತಿಳಿಸಿದೆ. ಅವರು ನನ್ನ ಪರಿಸ್ಥಿತಿಯನ್ನು ಅರಿತುಕೊಂಡು ರಜೆ ನೀಡಿದರು. ಅವರಿಗೆ ಆಭಾರಿಯಾಗಿದ್ದೇನೆ, ಜತೆಗೆ ನಾನು ಪ್ರತಿನಿಧಿಸುತ್ತಿರುವ ಕ್ರಿಕೆಟ್ ವಿಕ್ಟೋರಿಯ ಹಾಗೂ ಮೆಲ್ಬರ್ನ್ ಸ್ಟಾರ್ ತಂಡಕ್ಕೆ ಧನ್ಯವಾದಗಳನ್ನು ಹೇಳಲು ಬಯಸುತ್ತೇನೆ’ ಎಂದರು.