ಬೆಂಗಳೂರು: ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆಯಲ್ಲಿ ಬಂಧನವಾಗಿರುವ ನಾಗರಾಜ್ ಪೊಲೀಸರ ವಿಚಾರಣೆ ವೇಳೆ ಭವಿಷ್ಯದಲ್ಲಿ ತಾನು ಶಾಸಕನಾಗಿ ಆಗಿ ಸಾರ್ವಜನಿಕ ಸೇವೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಒಮ್ಮೆ, “ನಾನು ಎಂಎಲ್‌ಎ ಆಗುತ್ತೇನೆ. ಸಾರ್ವಜನಿಕ ಸೇವೆ ಮಾಡಬೇಕೆಂಬ ಇಚ್ಛೆಯಿದೆ. ದಯಮಾಡಿ ನನ್ನನ್ನು ಬಿಟ್ಟು ಬಿಡಿ. ನನ್ನ ಆಸ್ತಿ ಪಾಸ್ತಿ ಮಾರಾಟ ಮಾಡಿಯಾದರೂ ವಂಚಿಸಿದವರಿಗೆ ಹಣ ನೀಡುತ್ತೇನೆ’ ಎನ್ನುತ್ತಾನೆ. ಮತ್ತೂಮ್ಮೆ, “ನಾನು ಯಾರಿಗೂ ಮೋಸ ಮಾಡಿಲ್ಲ. ನನಗೆ ನಾನೇ ವಂಚನೆ ಮಾಡಿಕೊಂಡೆ ಎಂದು ಗೊಂದಲದ ಹೇಳಿಕೆ ನೀಡುತ್ತಿದ್ದಾನೆ,’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ತನ್ನ ಮನೆಯಲ್ಲಿ ಪತ್ತೆಯಾದ ಅಷ್ಟು ಹಣ ದೂರುದಾರ ಉಮೇಶ್ ಅವರದ್ದೇ. ನಾನು ಹಳೆ ನೋಟುಗಳನ್ನು ಪಡೆದು, ಹೊಸ ನೋಟುಗಳನ್ನು ಕೊಡುತ್ತಿದ್ದೆ. ಹೀಗಾಗಿ ನನಗೆ ಲಕ್ಷಾಂತರ ರುಪಾಯಿ ನಷ್ಟವಾಗಿದೆ,’ ಎಂದು ವಿಚಾರಣೆ ಸಂದರ್ಭದಲ್ಲಿ ತಿಳಿಸಿದಿದ್ದಾನೆ. ಈ ಹಿನ್ನೆಲೆಯಲ್ಲಿ ಈತನಿಂದ ವಂಚನೆಗೊಳಗಾದ ವ್ಯಕ್ತಿಗಳನ್ನು ಸಂಪರ್ಕಿಸುತ್ತಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ವಕೀಲರಿಂದಲೇ ವಿಡಿಯೋ ಬಿಡುಗಡೆ: ವೆಲ್ಲೂರಿನ ಸಂಬಂಧಿ ರಾಜೀವ್ ಅವರ ಮನೆಯಲ್ಲಿ ಕುಳಿತೇ ಎರಡು ವಿಡಿಯೋಗಳನ್ನು ಚಿತ್ರೀಕರಿಸಿದ್ದು, ಮೊದಲೇ ವಿಡಿಯೋವನ್ನು ನಾನೇ ಬೆಂಗಳೂರಿಗೆ ಬಂದು ಈ ಹಿಂದೆ ವಕಾಲತ್ತು ವಹಿಸಿದ್ದ ವಕೀಲ ಶ್ರೀರಾಮರೆಡ್ಡಿ ಅವರಿಗೆ ನೀಡಿದ್ದೆ. ಎರಡನೇ ಸಿಡಿಯನ್ನು ತಯಾರು ಮಾಡಿದ ಬಳಿಕವೂ ವಕೀಲರಿಗೆ ನೀಡಿದ್ದೆ. ಬಳಿಕ ಪ್ರಕರಣದ ತನಿಖೆ ತೀವ್ರಗೊಳ್ಳುತ್ತಿದ್ದಂತೆ ಸಿಡಿ ಬಿಡುಗಡೆ ಮಾಡದಂತೆ ವಕೀಲ ಶ್ರೀರಾಮರೆಡ್ಡಿ ಅವರಿಗೆ ಮನವಿ ಮಾಡಿದ್ದೆ. ಆದರೆ, ನಾನು ಅವರ ಸಲಹೆಗಳನ್ನು ಪಾಲಿಸಲಿಲ್ಲ ಎಂಬ ಕಾರಣಕ್ಕೆ ಎರಡನೇ ವಿಡಿಯೋವನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿದ್ದಾರೆ ಎಂದು ತನಿಖಾ ತಂಡದ ಮೂಲಗಳು ತಿಳಿಸಿವೆ.
ನಾಗರಾಜ್‌ನ ಸಂಬಂಧಿ ಬಂಧನ
ಈ ನಡುವೆ, ನಾಗರಾಜನ ಮತ್ತೂಬ್ಬ ಸಹಚರನನ್ನು ಬಾಣಸವಾಡಿ ಎಸಿಪಿ ರವಿಕುಮಾರ್ ಅವರ ನೇತೃತ್ವದ ತಂಡ ಸೋಮವಾರ ಬಂಧಿಸಿದೆ. ಶ್ರೀರಾಂಪುರ ನಿವಾಸಿ, ನಾಗರಾಜನ ಸಂಬಂಧಿ ಬೈಯ್ಯಪ್ಪ ಬಂಧಿತ. ಬೈಯಪ್ಪ ನಾಗರಾಜ್‌ನ ಪತ್ನಿ ಲಕ್ಷಿ$¾àಯ ಸಹೋದರ. ಪ್ರಕರಣ ಹೊರಬರುತ್ತಿದ್ದಂತೆ ನಾಪತ್ತೆಯಾಗಿದ್ದ ನಾಗರಾಜನಿಗೆ ಬೆಂಗಳೂರಿನಿಂದ ಸಿಮ್ ಕಾರ್ಡ್ ಪಡೆದು ಬೈಯಪ್ಪ ನೀಡುತ್ತಿದ್ದ. ಅಲ್ಲದೆ, ನಾಗನಿಗೆ 28 ದಿನಗಳ ಕಾಲ ಓಡಾಡಲು ಕಾರು ಹಾಗೂ ಹಣದ ವ್ಯವಸ್ಥೆ ಮಾಡಿದ್ದ ಎನ್ನಲಾಗಿದೆ.