ಬೆಂಗಳೂರು : ಸಚಿವರ ಭೇಟಿ ವೇಳೆ ಹಲವಾರು ವಿಚಾರಗಳ ಬಗ್ಗೆ ಚರ್ಚಿಸಿದ್ದೇನೆ. ಗಣಿ ಸಚಿವರು ಅಧಿಕಾರ ಸ್ವೀಕರಿಸಿದ ಮೊದಲ ವಾರದಲ್ಲೇ ಅಕ್ರಮ ಗಣಿಗಾರಿಕೆ ತಡೆಗೆ ಸೂಚಿಸಿದ್ದರು. ಅಕ್ರಮ ತಡಗೆ ಟಾಸ್ಕ್ ಫೋರ್ಸ್ ನ್ನ ಸಹ ರಚಿಸಿದ್ದರು. ನೂರು ಕೋಟಿ ದಂಡವನ್ನ ವಿಧಿಸಿದ್ದರು. ಶ್ರೀರಂಗಪಟ್ಟಣಕ್ಕೆ ಭೇಟಿ ಕೊಟ್ಟಾಗ ಏನೆಲ್ಲಾ ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದನ್ನ ವಿವರಿಸಿದ್ದೇನೆ ಎಂದು ಸಚಿವ ಮುರುಗೇಶ್ ನಿರಾಣಿಯನ್ನು ಭೇಟಿಯಾದ ಬಳಿಕ ಸಂಸದೆ ಸುಮಲತಾ ಅಂಬರೀಶ್ ಹೇಳಿಕೆ ನೀಡಿದ್ದಾರೆ.
ಬೇಬಿ ಬೆಟ್ಟದಲ್ಲಿ ನಡೆಯುತ್ತಿರುವ ಅಕ್ರಮದ ಕುರಿತೂ ಹೇಳಿದ್ದೇನೆ. ಯಾವುದೇ ರೀತಿಯಲ್ಲಿ ಅಕ್ರಮಕ್ಕೆ ಅವಕಾಶ ಕೊಡಬಾರದು ಅಂತಾ ಸಚಿವರಿಗೆ ಹೇಳಿದ್ದೇನೆ. ಸರ್ಕಾರಕ್ಕೆ ಸರಿಯಾಗಿ ರಾಜಧನ ನೀಡದೆ ನಷ್ಟ ಮಾಡುತ್ತಿದ್ದಾರೆ. ಅದನ್ನ ವಸೂಲಿ ಮಾಡಿ ಕಠಿಣ ಕ್ರಮಕ್ಕೆ ಒತ್ತಾಯ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮದ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದರು.
ಬೇಬಿ ಬೆಟ್ಟಕ್ಕೂ ಭೇಟಿ ನೀಡುತ್ತೇನೆ ಅಂತಾ ಸಚಿವರು ಹೇಳಿದ್ದಾರೆ. ನಾನು ಕೆ ಆರ್ ಎಸ್ ಜಲಾಶಯ ವೀಕ್ಷಣೆಗೆ ತೆರಳಲಿದ್ದೇನೆ. ಜನರಿಗಿಂತ, ರೈತರಿಗಿಂತ ಯಾರೂ ದೊಡ್ಡವರಲ್ಲಾ. ಎರಡು ದಿನಗಳ ಕಾಲ ಮಂಡ್ಯ ಜಿಲ್ಲೆಗೆ ಭೇಟಿ ನೀಡುತ್ತೇನೆ. ಅದನ್ನ ನೀವೆ ಪ್ರತ್ಯಕ್ಷವಾಗಿ ನೋಡುತ್ತೀರಿ. ಬೇಬಿ ಬೆಟ್ಟಕ್ಕೆ ಹೋಗಿ ನೋಡಿ ನಿಮಗೆ ಗೊತ್ತಾಗಲಿದೆ. ಅಲ್ಲಿ ಏನು ನಡೆಯುತ್ತಿದೆ ಎಂಬುದು ನಿಮಗೆ ಗೊತ್ತಾಗಲಿದೆ ಎಂದರು.
ಕೆ ಆರ್‌ಎಸ್ ಅಧಿಕಾರಿಗಳ ಜೊತೆ ಏಪ್ರಿಲ್ ನಲ್ಲೇ ಸಭೆ ನಿಗದಿಯಾಗಿತ್ತು. ಕೊರೊನಾ ಕಾರಣ ಲಾಕ್ ಡೌನ್ ನಿಂದ ಅದನ್ನ ಮುಂದೂಡಲಾಗಿತ್ತು. ಈಗ ಅದು ಮತ್ತೆ ಸಭೆ ನಿಗದಿಯಾಗಿದೆ. ಜುಲೈ 14 ರಂದು ಸಭೆ ನಡೆಯಲಿದೆ. ಕೆ ಆರ್ ಎಸ್ ಸುರಕ್ಷಿತೆ, ಏನು ಕ್ರಮಕೈಗೊಳ್ಳಲಾಗುತ್ತಿದೆ, ನಿರ್ವಹಣೆ ಬಗ್ಗೆ ಚರ್ಚೆ ಮಾಡಲಾಗುತ್ತೆ.
ತಾಂತ್ರಿಕ ಸಮಿತಿ ಬೇರೆನೇ ಇದೆ. ಕಾವೇರಿ ನಿಗಮ ಅಲ್ಲಿ ನಿರ್ವಹಣೆ ಮಾಡುತ್ತದೆ. ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ನಡೆಯುತ್ತಿದೆಯೋ ಇಲ್ಲವೋ ಎಂಬುದು ನಿಮಗೆ ಗೊತ್ತಾಗಲಿದೆ. ಸರ್ಕಾರ ಒಂದು ಕಡೆ ಇರಲಿ, ನಾನು ಒಂದು ಕಡೆ ಇರುತ್ತೇನೆ. ಪ್ರತಿಪಕ್ಷಗಳು ಒಂದು ಕಡೆ ಇರಲಿ. ಮಧ್ಯಮಗಳ ನೀವು ಇದ್ದೀರಾ ನಾನು ನಿಮಗೆ ಒಂದು ಸವಾಲ್ ಹಾಕುತ್ತೇನೆ ಅಲ್ಲಿ ನೀವೆ ಹೋಗಿ ಇನ್ವೆಸ್ಟಿಕೇಷನ್ ಮಾಡಿ ಎಂದರು.