ಬೆಂಗಳೂರು: ಕಾಂಗ್ರೆಸ್ ನವರು ಕೇಸರಿ ಧ್ವಜ ಹೇಳಿಕೆ ಕುರಿತು ಈಶ್ವರಪ್ಪ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದು, ಲಾಜಿಕಲ್ ಎಂಡ್ ಮಾಡುತ್ತೇವೆ ಅಂದಿದ್ದಾರೆ,ಆದರೆ ನಾನು ಇರುವುದು ಕೇವಲ ಡೆಡ್ ಎಂಡ್ ಮಾತ್ರ ಎಂದು ಹೇಳಿದ್ದೇನೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅವರ ಧೋರಣೆ ಅರ್ಥವಾಗ್ತಿಲ್ಲ.ಜನಪರ ವಿಚಾರ ರೈತ ವಿಚಾರ ರಾಜ್ಯದ ಹಿತದೃಷ್ಟಿಯಿಂದ ಧರಣಿ ಗಳು ಆಗಿರೋದನ್ನ ನೋಡಿದ್ದೆವು. ಆದರೆ ಈಗ ಯಾವುದೋ ಒಂದು ಸ್ಟೇಟ್ಮೆಂಟ್ ಇಟ್ಟಿಕೊಂಡು ಧರಣಿ ಮಾಡ್ತಿದ್ದಾರೆ. ಅದು ಈಶ್ವರಪ್ಪನವರ ಮಾತನ್ನ ತಪ್ಪಾಗಿ ಅರ್ಥೈಸಿಕೊಂಡು ಧರಣಿ ಮಾಡ್ತಿದ್ದಾರೆ. ಈಶ್ವರಪ್ಪನವರ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ ಕಾನೂನು ವಿರೋಧ ಅಂಶವಿಲ್ಲ ಎಂದರು.
ಅವರಿಗೆ ಯಾವುದೇ ಬೇರೆ ವಿಷಯಗಳು ಇಲ್ಲದೇ ಇರುವುದರಿಂದ ಈ ಧರಣಿ ಮಾಡ್ತಿದ್ದಾರೆ. ಜವಾಬ್ದಾರಿಯ ವಿರೋಧ ಪಕ್ಷದ ಮಾಡುವಂತದ್ದಲ್ಲ.ವಿರೋಧ ಪಕ್ಷ ಸಂಪೂರ್ಣವಾಗಿ ಜವಾಬ್ದಾರಿ ಮರೆತಿದೆ.ಇದು ಅವರಿಗೆ ರಾಜಕೀಯವಾಗಿ ಹೆಚ್ಚಿನು ಕ್ರೇಡಿಬಿಲಿಟಿ ಸಿಗಲ್ಲ.ಸದ್ಯ ಉದ್ಬವಿಸಿರುವ ಹಿಜಾಬ್ ಗೊಂದಲ ಬಗೆಹರಿಸಬೇಕು ಅಂತ ಸರ್ಕಾರ ಕೆಲಸ ಮಾಡುತ್ತಿದ್ದರೆ, ವಿದ್ಯಾರ್ಥಿಗಳಿಗೆ ಪರೀಕ್ಷೆ ಹತ್ತಿರ ಬರ್ತಿದೆ ಇದನ್ನ ಬಗೆಹರಿಸಬೇಕು ಅಂತ ನಾವಿದ್ದೇವೆ. ಇದಕ್ಕೆ ಸಹಕಾರಿಯಾಗಿ ಕೆಲಸ ಮಾಡಬೇಕು ಅನ್ನೋದು ಬಿಟ್ಟು ಧರಣಿ ಮಾಡುತ್ತಿದೆ ಎಂದು ಆಕ್ರೋಶ ಹೋರ ಹಾಕಿದರು.
ಇದನ್ನೂ ಓದಿ : ಮುಂದುವರಿದ ಕಾಂಗ್ರೆಸ್ ನಾಯಕರ ಧರಣಿ : ಕಲಾಪ ನಾಳೆಗೆ ಮುಂದೂಡಿಕೆ
ವಿಧಾನಸಭೆಯಿಂದ ನಾವು ಒಟ್ಟಾಗಿ ಒಂದು ಸಂದೇಶ ಕೊಡಬಹುದಿತ್ತು.ಸದನದಲ್ಲಿ ಒಟ್ಟಾಗಿ ಆ ಸಂದೇಶ ಕೊಡುವ ಕೆಲಸ ಮಾಡಬೇಕಿತ್ತು.ಕಾಂಗ್ರೆಸ್ ರಾಜಕೀಯವಾಗಿ ಬಹಳ ತಳ ಮಟ್ಟಿಗೆ ಹೋಗುತ್ತಿದೆ.ಇದು ಒಳ್ಳೆಯ ಉದಾಹರಣೆ ಅಲ್ಲ.ಕಾಂಗ್ರೆಸ್ ಪಕ್ಷ ಚಿಂತನೆ ಮಾಡಬೇಕು.ಅವರಿಗೆ ರಾಜಕಾರಣವೇ ಮುಖ್ಯವಾಗಿದೆ.ನಾನು ಜೊತೆ ಅವರ ಜೊತೆ ಮಾತನಾಡಿದ್ದೇನೆ.ಇದನ್ನ ಬೆಳಸೋದು ಬೇಡ ಎಂದು ಹೇಳಿದ್ದೇನೆ ಎಂದರು.