Advertisement

ಅಬ್ಬಾ…ಐಟಿ ಬೇಟೆ; 3200 ಕೋಟಿ ರೂ. ಟಿಡಿಎಸ್ ಹಗರಣ ಬಯಲಿಗೆ!

02:06 PM Mar 05, 2018 | Sharanya Alva |

ಮುಂಬೈ: ಆದಾಯ ತೆರಿಗೆ ಇಲಾಖೆ ಬರೋಬ್ಬರಿ 3,200 ಕೋಟಿ ರೂಪಾಯಿಯ ಟಿಡಿಎಸ್ ಹಗರಣವನ್ನು ಬಯಲಿಗೆಳೆದಿದೆ. 447 ಕಂಪನಿಗಳು ತಮ್ಮ ಉದ್ಯೋಗಿಯ ಸಂಬಳದಿಂದ ಟಿಡಿಎಸ್ ಕಡಿತಗೊಳಿಸಿದ್ದವು, ಆದರೆ ಆ ಹಣವನ್ನು ಐಟಿ ಇಲಾಖೆಯಲ್ಲಿ ಠೇವಣಿ ಇಡದೆ ತಮ್ಮ ವ್ಯವಹಾರಕ್ಕೆ ಬಳಸಿಕೊಂಡಿರುವುದು ಐಟಿ ಪತ್ತೆ ಹಚ್ಚಿದೆ.

Advertisement

ಆದಾಯ ತೆರಿಗೆ ಇಲಾಖೆಯ ಟಿಡಿಎಸ್ ಘಟಕ ಈ 447 ಕಂಪನಿಗಳ ವಿರುದ್ಧ ತನಿಖೆ ಆರಂಭಿಸಿದ್ದು, ಕೆಲವು ಕಂಪನಿಗಳಿಗೆ ವಾರಂಟ್ ಜಾರಿ ಮಾಡಿರುವುದಾಗಿ ಮೂಲಗಳು ತಿಳಿಸಿವೆ.

ಆದಾಯ ತೆರಿಗೆ ಕಾಯ್ದೆ ಪ್ರಕಾರ ಆರೋಪ ಸಾಬೀತಾದರೆ 3ರಿಂದ ಗರಿಷ್ಠ 7 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಅವಕಾಶವಿದೆ ಎಂದು ವರದಿ ವಿವರಿಸಿದೆ. ಸೆಕ್ಷನ್‌ 276 ಬಿ ಅಡಿಯಲ್ಲಿ ವಿಚಾರಣೆ ಆರಂಭಿಸಲಾಗಿದೆ.

ಉದ್ಯೋಗಿಗಳ ವಿಶ್ವಾಸದ್ರೋಹ ಹಾಗೂ ವಂಚನೆ ಎಸಗಿದ್ದಕ್ಕೆ ಆದಾಯ ತೆರಿಗೆ ಇಲಾಖೆ ಐಪಿಸಿ ಕಾಯ್ದೆ ಪ್ರಕಾರವೂ ದೂರು ದಾಖಲಿಸಲು ಮುಂದಾಗಿದೆ ಎಂದು ಹೇಳಿದೆ. ಇದರಲ್ಲಿ ರಾಜಕೀಯ ನಂಟು ಹೊಂದಿರುವ, ಪ್ರಭಾವಶಾಲಿ ಬಿಲ್ಡರ್ ವೊಬ್ಬ ಸೇರಿದ್ದು, ಆತ ಉದ್ಯೋಗಿಗಳಿಂದ ಕಡಿತಗೊಳಿಸಿದ್ದ ಸುಮಾರು 100 ಕೋಟಿ ರೂ. ಟಿಡಿಎಸ್ ಹಣವನ್ನು ತನ್ನ ಸ್ವಂತ ವ್ಯವಹಾರಕ್ಕೆ ಬಳಸಿಕೊಂಡಿರುವುದಾಗಿ ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next