Advertisement

ನೀರವ್‌ ಶೋರೂಮ್‌ನಿಂದ 6 ಕೋಟಿ ಖರೀದಿ:ಸಿಂಘ್ವಿ ಪತ್ನಿಗೆ ನೊಟೀಸ್‌

07:26 PM Feb 20, 2018 | udayavani editorial |

ಹೊಸದಿಲ್ಲಿ : ಪಿಎನ್‌ಬಿ ಬಹುಕೋಟಿ ಹಗರಣ ಕಳಂಕಿತ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್‌ ಮೋದಿ ಅವರ ಶೋರೂಮ್‌ ನಿಂದ ಆರು ಕೋಟಿ ರೂ. ಬೆಲೆಯ ವಜ್ರಾಭರಣಗಳನ್ನು ಖರೀದಿಸಿರುವ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಸೂಚಿಸಿ ಆದಾಯ ತೆರಿಗೆ ಇಲಾಖಾಧಿಕಾರಿಗಳು ಹಿರಿಯ ಕಾಂಗ್ರೆಸ್‌ ನಾಯಕ ಅಭಿಷೇಕ್‌ ಮನು ಸಿಂಘ್ವಿ ಅವರ ಪತ್ನಿ ಅನಿತಾ ಸಿಂಘ್ವಿ ಅವರಿಗೆ ನೊಟೀಸ್‌ ಜಾರಿ ಮಾಡಿದೆ.

Advertisement

ಇದಕ್ಕೆ ರಾಜಕೀಯವಾಗಿ ಪ್ರತಿಕ್ರಿಯಿಸಿರುವ ಅಭಿಷೇಕ್‌ಸಿಂಘ್ವಿ  ಅವರು “ನಾನು ರಾಜಕೀಯ ವಿರೋಧ ಪಕ್ಷದವನಾಗಿರುವುದರಿಂದ ನನಗೆ ಕಿರುಕುಳ ನೀಡುವ ಉದ್ದೇಶದಿಂದಲೇ ನನ್ನ ಪತ್ನಿಗೆ ಐಟಿ ನೊಟೀಸ್‌ ಜಾರಿಯಾಗಿದೆ; ನಮ್ಮ ಕುಟುಂಬದ ವಿರುದ್ಧದ ಆರೋಪಗಳೆಲ್ಲ ಸುಳ್ಳು’ ಎಂದು ಹೇಳಿದ್ದಾರೆ.

ಆರು ಕೋಟಿ ರೂ. ಮೌಲ್ಯದ ವಜ್ರಾಭರಣಗಳನ್ನು ಕೆಲ ವರ್ಷಗಳ ಹಿಂದೆ ನೀವು ಖರೀದಿಸುವಾಗಿ ಎಷ್ಟು ಮೊತ್ತವನ್ನು ನಗದು ರೂಪದಲ್ಲಿ ಮತ್ತು ಎಷ್ಟು ಮೊತ್ತವನ್ನು ಚೆಕ್‌ ರೂಪದಲ್ಲಿ ಪಾವತಿಸಿದ್ದೀರಿ ಎಂಬುದನ್ನು ತಿಳಿಸಿ ಎಂದು ಐಟಿ ನೊಟೀಸಿನಲ್ಲಿ ಆದೇಶಿಸಲಾಗಿರುವುದಾಗಿ ಮೂಲಗಳು ತಿಳಿಸಿವೆ. 

ಐಟಿ ಮೂಲಗಳಿಗೆ ತಿಳಿದಿರುವ ಪ್ರಕಾರ ಅನಿತಾ ಸಿಂಘ್ವಿ  ಅವರು 1.5 ಕೋಟಿ ರೂ.ಗಳನ್ನು ಚೆಕ್‌ ಮೂಲಕ ಮತ್ತು ಸುಮಾರು 4.8 ಕೋಟಿ ರೂ.ಗಳನ್ನು ನಗದು ರೂಪದಲ್ಲಿ ಪಾವತಿಸಿದ್ದಾರೆ. ಈ ಖರೀದಿಗೆ ಹಣದ ಮೂಲ ಯಾವುದೆಂದೂ ಐಟಿ ನೊಟೀಸ್‌ ಪ್ರಶ್ನಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next