Advertisement

“ಐ ಸ್ವೀಪ್‌’: ಬೆಳ್ಳಿ ಗೆದ್ದ ಇಂದ್ರಪ್ರಸ್ಥ ವಿದ್ಯಾರ್ಥಿಗಳು

10:56 AM May 09, 2017 | Harsha Rao |

ಉಪ್ಪಿನಂಗಡಿ: ಅಂತಾರಾಷ್ಟ್ರೀಯ ವಿಜ್ಞಾನ ತಂತ್ರಜ್ಞಾನಕ್ಕೆ ಸಂಬಂಧಿಸಿ ಅಮೆರಿಕದ ಟೆಕ್ಸಾಸ್‌-ಹ್ಯೂಸ್ಟನ್‌ನಲ್ಲಿ ನಡೆದ ಸಂಶೋಧನಾ ಸ್ಪರ್ಧೆ “ಐ ಸ್ವೀಪ್‌’ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಾದ ಎ.ಯು.ನಚಿಕೇತ್‌ ಕುಮಾರ್‌ ಹಾಗೂ ಅಮನ್‌ ಕೆ.ಎ. ಬೆಳ್ಳಿ ಪದಕವನ್ನು ಗಳಿಸಿದ್ದಾರೆ.

Advertisement

ರಬ್ಬರ್‌ ಶೀಟ್‌ ತಯಾರಿಕೆಯಲ್ಲಿ ಬಳಸಲ್ಪಡುವ ಅಪಾಯಕಾರಿ ಆ್ಯಸಿಡ್‌ಗೆ ಬದಲಾಗಿ ಪ್ರಾಕೃತಿಕವಾಗಿ ದೊರೆಯುವ, ಹೆಚ್ಚಿನೆಲ್ಲ ಕೃಷಿಕರ ಜಮೀನಿನಲ್ಲೂ ಬೆಳೆಸಲಾಗುವ ಬಿಂಬುಳಿ ಎಂಬ ಹಣ್ಣಿನ ರಸವನ್ನು ಬಳಸಿಯೂ ಉತ್ತಮವಾದ ರಬ್ಬರ್‌ ಶೀಟ್‌ ತಯಾರಿಸಬಹುದು ಎಂಬ ಸಂಶೋಧನೆಯನ್ನು ಈ ವಿದ್ಯಾರ್ಥಿಗಳು ಸಂಶೋಧನಾ ಮಾರ್ಗದರ್ಶಕ ಶಿಕ್ಷಕಿ ನಿಶಿತಾ ಅವರ ಸಹಕಾರದೊಂದಿಗೆ ಮಾಡಿರುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next