Advertisement

ಯೋಗಿ ವಿರೋಧಿ ಹೇಳಿಕೆ ವಿವಾದ: ದಿನೇಶ್‌ ಗುಂಡುರಾವ್‌ ವಿಷಾದ 

02:53 PM Apr 15, 2018 | Team Udayavani |

ಬೆಂಗಳೂರು: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಗೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ಹೇಳಿಕೆ ನೀಡಿ  ಬಿಜೆಪಿ ನಾಯಕರು ಸೇರಿದಂತೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡುರಾವ್‌ ಟ್ವೀಟರ್‌ನಲ್ಲಿ ತಮ್ಮ ಹೇಳಿಕೆ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. 

Advertisement

ಭಾನುವಾರ ಮಧ್ಯಾಹ್ನ ಮಾಡಿರುವ ಟ್ವೀಟ್‌ನಲ್ಲಿ ”ಆದಿತ್ಯನಾಥ ವಿವಾದಕ್ಕೆ ನನ್ನ ಪ್ರತಿಕ್ರಿಯೆ. ಅತ್ಯಾಚಾರ ಬಲಿಪಶುಗಳ ಪರವಾದ ನೋವು ಮತ್ತು  ಆದಿತ್ಯನಾಥ್ ಸರ್ಕಾರದ ಸಂಪೂರ್ಣ ನಿರಾಸಕ್ತಿ ಕುರಿತಾಗಿ ಭಾವನಾತ್ಮಕ  ಆಕ್ರೋಶವಾಗಿತ್ತು. ಅದು ಆಕ್ರಮಣಕಾರಿ ಎಂದಾದರೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ಆದರೆ ಉತ್ತರದಲ್ಲಿ ಕಾನೂನ ಸುವ್ಯವಸ್ಥೆ ವಿಚಾರ ಗಂಭೀರವಾಗಿದೆ.” ಎಂದು ಟ್ವೀಟ್‌ ಮಾಡಿದ್ದಾರೆ. 

ನಿನ್ನೆ ಮಾಡಿದ ಟ್ವೀಟ್‌ನಲ್ಲಿ ”ದಯವಿಟ್ಟು ಉತ್ತರಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಕ್ರಿಮಿನಲ್ ದಾಖಲೆಯನ್ನು ನೋಡೋಣ. ಎಷ್ಟು ಯೋಗಿಗಳು ಮತ್ತು ಸಂತರು ಇಂತಹ ದಾಖಲೆಯನ್ನು ಹೊಂದಿದ್ದಾರೆ?  ನಾವು ಇನ್ನೂ ಅವನನ್ನು ಯೋಗಿ ಎಂದು ಕರೆಯಬೇಕೇ? ಆದಿತ್ಯನಾಥ್‌ ಗೆ ಹೋಲಿಸಿ ಕರ್ನಾಟಕ ಮತ್ತು ಭಾರತದ  ನಿಜವಾದ ಪೂಜ್ಯ ಸಂತರನ್ನು ನೀವು ಏಕೆ ಅವಮಾನಿಸುತ್ತೀರಿ” ಎಂದು ಬರೆದಿದ್ದರು. 

ಮೌರ್ಯ ಸರ್ಕಲ್‌ನಲ್ಲಿ ಅತ್ಯಾಚಾರ ಘಟನೆ ಖಂಡಿಸಿ ಕಾಂಗ್ರೆಸ್‌ ನಡೆಸಿದ್ದ ಪ್ರತಿಭಟನೆಯಲ್ಲಿ ಯೋಗಿ ಆದಿತ್ಯನಾಥ್‌ ವಿರುದ್ಧ ದಿನೇಶ್‌ ಗುಂಡುರಾವ್‌ ಕಿಡಿ ಕಾರಿದ್ದರು. ಈ ಕುರಿತಾಗಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next