Advertisement

ಫಾ ಡು ಪ್ಲೆಸಿಸ್‌ಗೆ ಜೀವ ಬೆದರಿಕೆ! ದಶಕದ ಹಿಂದೆ ನಡೆದ ಘಟನೆ

10:55 PM May 18, 2021 | Team Udayavani |

ಜೊಹಾನ್ಸ್‌ಬರ್ಗ್‌ : ಭಾರತದ ಆತಿಥ್ಯದಲ್ಲಿ ನಡೆದ 2011ರ ವಿಶ್ವಕಪ್‌ ಪಂದ್ಯದ ಸೋಲಿನ ಬಳಿಕ ತನಗೆ ಹಾಗೂ ಪತ್ನಿಗೆ ಜೀವ ಬೆದರಿಕೆ ಬಂದಿತ್ತು ಎಂಬುದಾಗಿ ದ.ಆಫ್ರಿಕಾ ತಂಡದ ಮಾಜಿ ನಾಯಕ ಡು ಪ್ಲೆಸಿಸ್‌ ಹೇಳಿದ್ದಾರೆ. ಸರಿಯಾಗಿ ಒಂದು ದಶಕದ ಬಳಿಕ ಅವರು ಈ ವಿಷಯದ ಬಗ್ಗೆ ಬಾಯಿ ಬಿಟ್ಟಿದ್ದಾರೆ.

Advertisement

ಕಿವೀಸ್‌ ವಿರುದ್ಧದ ಕ್ವಾ.ಫೈನಲ್‌ ಪಂದ್ಯದ ನಿರ್ಣಾಯಕ ಹಂತದಲ್ಲಿ ಎಬಿಡಿ-ಡು ಪ್ಲೆಸಿಸ್‌ ಮಿಕ್ಸ್‌ ಅಪ್‌ ಆಗಿದ್ದರು. ಆಗ 35 ರನ್‌ ಮಾಡಿದ್ದ ಎಬಿಡಿ ರನೌಟ್‌ ಆಗಿ ನಿರ್ಗಮಿಸಿದರು. ಇಲ್ಲಿಂದ ತೀವ್ರ ಕುಸಿ ಕಾಣಲಾರಂಭಿಸಿದ ದ.ಆಫ್ರಿಕಾ 49 ರನ್‌ ಸೋಲನುಭವಿಸಿ ಕೂಟದಿಂದ ಹೊರಬಿದ್ದಿತ್ತು.

“ಈ ಸೋಲಿನ ಬೆನ್ನಲ್ಲೇ ನನಗೆ ಹಾಗೂ ಹೆಂಡತಿಗೆ ಒಂದೇ ಸಮನೆ ಬೆದರಿಕೆಯ ಕರೆಗಳು ಬರಲಾರಂಭಿಸಿದವು. ಪ್ರಾಣ ಬೆದರಿಕೆಯನ್ನೂ ಒಡ್ಡಿದರು. ಕೂಡಲೇ ನಾವಿಬ್ಬರು ಸಾಮಾಜಿಕ ಜಾಲತಾಣಗಳಿಂದ ದೂರ ಉಳಿಯಲು ನಿರ್ಧರಿಸಿದೆವು. ಇದನ್ನು ನಾವು ಬಹಿರಂಗಗೊಳಿಸದೇ ವೈಯಕ್ತಿಕವಾಗಿ ಸ್ವೀಕರಿಸಿದೆವು’ ಎಂಬುದಾಗಿ ಡು ಪ್ಲೆಸಿಸ್‌ ಹೇಳಿದ್ದಾರೆ.

ಇದನ್ನೂ ಓದಿ :ಪರಂ ಬೀರ್‌ ಸಿಂಗ್‌ ಕೇಸು: ವಿಚಾರಣೆಯಿಂದ ಹಿಂದೆ ಸರಿದ ನ್ಯಾ.ಗವಾಯ್‌

Advertisement

Udayavani is now on Telegram. Click here to join our channel and stay updated with the latest news.

Next