Advertisement

ಸಂಪುಟ ವಿಚಾರವನ್ನು ಮಾಧ್ಯವದವರೇ ಸೃಷ್ಟಿ ಮಾಡುತ್ತೀರಿ: ಸಿಎಂ ಬೊಮ್ಮಾಯಿ

11:43 AM May 05, 2022 | Team Udayavani |

ಬೆಂಗಳೂರು: ಸಚಿವ ಸಂಪುಟ ವಿಚಾರ ಮಾಧ್ಯಮದವರೇ ಸೃಷ್ಟಿ ಮಾಡುತ್ತೀರಿ.  ನಂತರ ನೀವೇ ಕ್ಲಾರಿಟಿ ಕೇಳುತ್ತೀರಿ. ಇವೆಲ್ಲ  ಸೆಲ್ಫ್ ಮೇಡ್ ಸ್ಟೋರಿ. ಸಂಪುಟ ವಿಚಾರದಲ್ಲಿ ನಾನು ಹೇಳುವುದು ಮಾತ್ರ ಅಧಿಕೃತ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಹೇಳಿದನ್ನು ನೀವು ಅಧಿಕೃತವಾಗಿ ತೆಗೆದುಕೊಳ್ಳಬೇಕು. ಈ ವಿಚಾರವಾಗಿ ಅಮಿತ್‌ ಶಾ ದೆಹಲಿಗೆ ಹೋಗಿ ಎಲ್ಲರ ಬಳಿ ಮಾತನಾಡಿ ತಿಳಿಸುತ್ತೇನೆ ಎಂದು ಹೇಳಿದ್ದಾರೆ. ಅವರು ಕರೆದ ತಕ್ಷಣ ನಾನು ಹೋಗುವುದಕ್ಕೆ ಸಿದ್ಧನಿದ್ದೇನೆ ಎಂದರು.

ಇಂದು ಕೂಡ ಬಜೆಟ್ ಅನುಷ್ಠಾನದ ಸಭೆ ನಡೆಯುತ್ತಿದೆ. ಬಜೆಟ್‌ ಅನ್ನು ಕಟ್ಟನಿಟ್ಟಾಗಿ ಅನುಷ್ಠಾನಕ್ಕೆ ತರಲು ಸೂಚಿಸಿದ್ದೇವೆ ಎಂದರು.

ಪಿಎಸ್ಐ ಅಕ್ರಮದ ತನಿಖೆಯಲ್ಲಿ ಸರ್ಕಾರದ ಪ್ರಭಾವಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್ ನವರ ಹಿಟ್ ಅಂಡ್ ರನ್ ಆರೋಪವನ್ನು ನಾವು ಒಪ್ಪುವುದಿಲ್ಲ. ಕಾಂಗ್ರೆಸ್ ನವರ ಕಾಲದಲ್ಲಿ ಸಾಕಷ್ಟು ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ, ಆದರೆ ಅದಕ್ಕೆ ಸೂಕ್ತ ತನಿಖೆಯನ್ನುಮಾಡಿಲ್ಲ. ಕಾಂಗ್ರೆಸ್ ನ ಆರೋಪಗಳಿಗೆ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳಿಲ್ಲ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ಲೋಕಸಭಾ ಸ್ಪೀಕರ್ ಬಿರ್ಲಾ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿ; ಮೂವರ ಬಂಧನ

Advertisement

ಅವರ ಆಡಳಿತ ಕಾಲದಲ್ಲಿ ಸಾಕಷ್ಟು ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿವೆ. ಆದರೆ ಯಾವುದೇ ತನಿಖೆಯನ್ನು ಅವರು ಮಾಡಲಿಲ್ಲ. ರಾಜಕೀಯ ಕಾರಣಕ್ಕಾಗಿ ಈಗ ದೊಡ್ಡ ಸುದ್ದಿ ಮಾಡಲು ಹೊರಟಿದ್ದಾರೆ ಎಂದರು.

ಸಚಿವ ಅಶ್ವತ್ಥ ನಾರಾಯಣ್ ವಿರುದ್ದದ ಆರೋಪವನ್ನು ನಾವು ಒಪ್ಪುವುದಿಲ್ಲ. ಅದಕ್ಕೆ ಯಾವ ದಾಖಲೆಯೂ ಇಲ್ಲ. ಕಾಂಗ್ರೆಸ್‌ ನಾಯಕರು ಕೂಡ ಪಿಎಸ್ಐ ಅಕ್ರಮದಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಅದರಲ್ಲಿ ತಾವು ಸಿಕ್ಕಿ ಹಾಕಿಕೊಳ್ಳುತ್ತೇವೆ ಎಂಬ ಭಯದಿಂದ ನಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ನಂಜನಗೂಡಿನ ಕವಲಂದೆಯಲ್ಲಿ ಛೋಟಾ ಪಾಕಿಸ್ತಾನ ಘೋಷಣೆ ಪ್ರಕರಣ ಕುರಿತು ಮಾತನಾಡಿ, ಈ ಪ್ರಕರಣದ ಬಗ್ಗೆ ಮೈಸೂರು ಎಸ್ ಪಿ ಜತೆ ಮಾತನಾಡುತ್ತೇನೆ. ಅದರ ಬಗ್ಗೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

ಸಿಎಂ ಭೇಟಿ ವೇಳೆ ಕುಸಿದು ಬಿದ್ದ ಮಹಿಳೆ

ಸಿಎಂ ಬಳಿ ಸಮಸ್ಯೆ ಹೇಳಿಕೊಳ್ಳಲು ಬೆಳಗ್ಗೆಯಿಂದಲೂ ಸಿಎಂ‌ ನಿವಾಸದ ಬಳಿ ಕಾಯುತ್ತಿದ್ದ ತುಮಕೂರಿನ ಗುಬ್ಬಿ ಮೂಲದ ಮಹಿಳೆಯೋರ್ವರು ಕುಸಿದು ಬಿದ್ದಿದ್ದಾರೆ. ಕೂಡಲೇ ಮಹಿಳೆಯನ್ನು ಆಸ್ಪತ್ರೆಗೆ ಕರೆದೊಯ್ಯುವಂತೆ ಸಿಎಂ ಸೂಚನೆ ನೀಡಿದ್ದು, ಆಕೆಯನ್ನು ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next