Advertisement
ಅರಮನೆ ಮೈದಾನದಲ್ಲಿ ಆಯೋಜಿಸ ಲಾಗಿದ್ದ ಕಾರ್ಯಕ್ರಮದಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಅಭ್ಯರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನನ್ನ ಆರೋಗ್ಯ ಸರಿಯಿಲ್ಲ. ಆದರೂ ಬಂದಿದ್ದೇನೆ. ಪಕ್ಷದ ಆರೋಗ್ಯ ಸರಿ ಮಾಡುವುದು ನನ್ನ ಕೆಲಸ ಎಂದು ತಿಳಿಸಿದರು.
Related Articles
Advertisement
ಇದನ್ನು ಕಾರ್ಯಕರ್ತರು ಹಾಗೂ ಮುಖಂಡರು ತಿಳಿದುಕೊಳ್ಳಬೇಕು. ನಮ್ಮ ಪಕ್ಷ ಯಾರಿಂ ದಲೂ ಮುಗಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ಪಕ್ಷದಲ್ಲಿರುವವರು ಯಾರೇ ಆಗಿರಲಿ, ಕುರುಬ, ಒಕ್ಕಲಿಗರ, ಲಿಂಗಾಯಿತ ಸೇರಿ ಯಾವುದೇ ಸಮುದಾಯಕ್ಕೆ ಸೇರಿದ್ದರೂ ಪಕ್ಷಕ್ಕೆ ನಿಷ್ಠರಾಗಿರಿ. ಲಿಂಗಾಯಿತ ಸಮುದಾಯಕ್ಕೆ ನಾನು ಕೊಟ್ಟಷ್ಟು ಅವಕಾಶ ಯಾರೂ ಕೊಟ್ಟಿಲ್ಲ. ಇಷ್ಟಾದರೂ ಪಕ್ಷಕ್ಕೆ ಭವಿಷ್ಯವಿದೆ. ರಾಜ್ಯ ಸರ್ಕಾರದಿಂದ ಎಲ್ಲ ವರ್ಗಗಳಿಗೂ 10 ರಿಂದ 15 ಕೋಟಿ ರೂ. ಅನುದಾನ ಕೊಡಿ ಎಂದು ಹೇಳಿದರು. 17 ರಾಜ್ಯಗಳಲ್ಲಿ ಕಾಂಗ್ರೆಸ್ ಇಲ್ಲ. ಮೈತ್ರಿ ಸರ್ಕಾರ ಮಾಡಿದ್ದರಿಂದ ಒಂದು ಸ್ಥಾನ ಬಂದಿದೆ ಅಂತಾರೆ. ಕಾಂಗ್ರೆಸ್‌ನವರು ಅನ್ಯಾಯ ಆಗಿದೆ ಅಂತಾರೆ, ವಿಶ್ಲೇಷಣೆ ಮಾಡಲಿ ಬಿಡಿ ನಾನು ಆ ಬಗ್ಗೆ ಏನೂ ಮಾತನಾಡುವುದಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು. ನಾನು ಪಕ್ಷ ಕಟ್ಟುವ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಸರ್ಕಾರದ ಜವಾಬ್ದಾರಿ ನಿಭಾಯಿಸಲಿದ್ದಾರೆ. ಪಕ್ಷ ಕಟ್ಟುವುದು ನನ್ನ ಜವಾಬ್ದಾರಿ, ಸರ್ಕಾರ ಉಳಿಸಿಕೊಳ್ಳುವುದು ನಿನ್ನ ಜವಾಬ್ದಾರಿ ಎಂದು ವೇದಿಕೆಯಲ್ಲಿದ್ದ ಕುಮಾರಸ್ವಾಮಿಯವರತ್ತ ನೋಡಿ ಹೇಳಿದರು. ನಿಖೀಲ್ ಚುನಾವಣೆಗೆ ಸಿದ್ದರಾಗಿ ಅಂತ ಹೇಳಿಲ್ಲ. ಸರ್ಕಾರ ಸುಭದ್ರವಾಗಿ ನಡೆಯುತ್ತದೆ. ಪಕ್ಷ ಸಂಘಟನೆ ಬಗ್ಗೆಯಷ್ಟೇ ಹೇಳಿದ್ದು. ಮಾಧ್ಯಮದವರು ಸರ್ಕಾರ ಎಷ್ಟು ದಿನ ಉಳಿಯಲು ಬಿಡ್ತಾರೆ ನೋಡೋಣ ಎಂದು ಹೇಳಿದರು.
ಸಿಎಂಗೆ ಹಿಂಸೆ
ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಬಂದ ದಿನದಿಂದ ಕುಮಾರಸ್ವಾಮಿಯವರಿಗೆ ಎಷ್ಟೊಂದು ಹಿಂಸೆ ಕೊಡುತ್ತಿದ್ದಾರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ವಿರುದ್ಧವೂ ಬೇಸರ ಹೊರ ಹಾಕಿದರು. ನಮ್ಮ ಪಕ್ಷದಲ್ಲಿ ತಿಂದು ಬೆಳೆದವರೇ ನಮಗೆ ಉಪದೇಶ ಮಾಡ್ತಾರೆ ಎಂದು ಪರೋಕ್ಷವಾಗಿ ಜೆಡಿಎಸ್ ಬಿಟ್ಟು ಕಾಂಗ್ರೆಸ್ ಸೇರಿ ಟೀಕೆ ಮಾಡುತ್ತಿರುವವರ ವಿರುದ್ಧ ಹರಿಹಾಯ್ದರು.
ವಿಶ್ವನಾಥ್ ಗೈರು
ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್. ವಿಶ್ವನಾಥ್ ಅಭಿನಂದನಾ ಸಮಾರಂಭಕ್ಕೆ ಬಂದಿರಲಿಲ್ಲ. ಆದರೆ, ನಿಖೀಲ್ಕುಮಾರಸ್ವಾಮಿ ಬಂದಿದ್ದರು. ವೇದಿಕೆ ಮೇಲೆ ಕೂರದೆ ಮುಂಭಾಗದಲ್ಲಿ ಕಾರ್ಯಕರ್ತರ ನಡುವೆ ಕುರ್ಚಿಯಲ್ಲಿ ಕುಳಿತರು. ವೇದಿಕೆಗೆ ಬರುವಂತೆ ಮುಖಂಡರು ಹೇಳಿದರೂ ಬರಲಿಲ್ಲ.