ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರಾಷ್ಟ್ರಭಾಷೆಗೆ ವಿಶೇಷ ಆದ್ಯತೆ ನೀಡುತ್ತಿದೆ ಎಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ, ನಾನು ಗುಜರಾತಿ ಭಾಷೆಗಿಂತ ಹೆಚ್ಚಾಗಿ ಹಿಂದಿ ಭಾಷೆಯನ್ನು ಹೆಚ್ಚು ಪ್ರೀತಿಸುವುದಾಗಿ ಶನಿವಾರ(ನವೆಂಬರ್ 13) ಹೇಳಿದರು.
ಇದನ್ನೂ ಓದಿ:ಸಿನಿಪ್ರಿಯರಿಗೆ ರಸದೌತಣ: ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿದೆ ಸಾಲು ಸಾಲು ಚಿತ್ರಗಳು
ವಾರಣಾಸಿಯಲ್ಲಿ ಅಖಿಲ ಭಾರತೀಯ ರಾಜ್ ಭಾಷಾ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಗುಜರಾತಿ ಭಾಷೆಗಿಂತ ಹಿಂದಿ ಭಾಷೆಯನ್ನು ಹೆಚ್ಚಾಗಿ ಪ್ರೀತಿಸುತ್ತೇನೆ. ನಮ್ಮ ರಾಷ್ಟ್ರಭಾಷೆಯನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕಾದ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
ಸ್ವಾತಂತ್ರ್ಯ ಚಳವಳಿಯನ್ನು ಗಾಂಧೀಜಿ ಜನರ ಚಳವಳಿಯನ್ನಾಗಿ ಪರಿವರ್ತಿಸಿದ್ದರು. ಇದು ಮೂರು ಅಂಶಗಳನ್ನು ಒಳಗೊಂಡಿತ್ತು, ಸ್ವರಾಜ್, ಸ್ವದೇಶಿ ಮತ್ತು ಸ್ವಭಾಷಾ. ಸ್ವರಾಜ್ ಅನ್ನು ನಾವು ಸಾಧಿಸಿದೆವು. ಆದರೆ ಸ್ವದೇಶಿ ಮತ್ತು ಸ್ವಭಾಷಾದ ವಿಚಾರದಲ್ಲಿ ಹಿಂದುಳಿದಿದ್ದೇವೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ರಾಷ್ಟ್ರಭಾಷೆಗೆ ವಿಶೇಷ ಆದ್ಯತೆ ನೀಡಿದ್ದೇವೆ. ಈ ಸಮ್ಮೇಳನದಲ್ಲಿ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಹಾಜರಿದ್ದರು. ಸಮ್ಮೇಳನದಲ್ಲಿ ಭಾಗವಹಿಸುವ ಮೊದಲು ಅಮಿತ್ ಶಾ ಅವರು ವಾರಣಾಸಿಯಲ್ಲಿ ಕಾಲ ಭೈರವ್ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು.