ಚಿಕ್ಕಬಳ್ಳಾಪುರ: ರಾಜ್ಯದಲ್ಲಿ 2013 ರಿಂದ 2018ರ ವರೆಗೂ ನಡೆದಿರುವ ಅನೇಕ ಭ್ರಷ್ಟಾಚಾರಗಳು ನನಗೇನು ಗೊತ್ತಿಲ್ಲವಾ? ಬಾಯಿ ಬಿಡುವ ಸಂದರ್ಭ ಬಂದಾಗ ಬಿಡುವೆ ಎಂದು ಮಾಜಿ ಆರೋಗ್ಯ ಸಚಿವ ಡಾಕೆ.ಸುಧಾಕರ್ ಹೇಳಿದರು.
ನಗರದ ತಮ್ಮ ಗೃಹ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠೀಯನ್ನು ಉದ್ದೇಶಿಸಿ ಮಾತನಾಡಿ, ಅವರು ಏನೇನು ಮಾಡತಾರೆ ಮಾಡಲಿ. ನಾನು ಕಾಯುತ್ತಿದ್ದೇನೆಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಮಾತು ಎತ್ತಿದೆರೆ ನ್ಯಾಯಾಂಗ ತನಿಖೆ, ಎಸ್‌ಐಟಿ ತನಿಖೆ ಅಂತ ಹೇಳಿ ಮುಖಂಡರನ್ನು ಹಾಗೂ ನಾಯಕರನ್ನು ಹೆದರಿಸುವ ಕೆಲಸ ಮಾಡುತ್ತಿದೆಯೆಂದು ಮಾಜಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇದೇ ವೇಳೆ ಟೀಕಿಸಿದರು.
ಜಿಲ್ಲೆಯ ಸರ್ಕಾರಿ ವೈದ್ಯಕೀಯ ಕಾಲೇಜ್ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ. ಅದನ್ನು ಎಸ್‌ಐಟಿ ತನಿಖೆ ನಡೆಸುತ್ತೇವೆಂಬ ಸ್ಥಳೀಯ ಶಾಸಕ ಪ್ರದೀಪ್ ಈಶ್ವರ್ ಹೇಳಿಕೆಗೆ ತೀಕ್ಷಣ ಪ್ರತಿಕ್ರಿಯೆ ನೀಡಿದ ಸುಧಾಕರ್, ಶಾಸಕರಿಗೆ ಅರಿವಿನ ಕೊರತೆ ಇದೆ. ಯಾವುದೇ ತನಿಖೆ ಮಾಡಲಿ. ತಪ್ಪು ಮಾಡಿದ್ದವರಿಗೆ ಶಿಕ್ಷೆ ಆಗಲಿಯೆಂದರು.
ಆ ರೀತಿ ಮಾಡುವುದಾದರೆ ಮಾಡಲಿ. ನಮ್ಮದು ಕೇಂದ್ರ ಸರ್ಕಾರ ಇದೆ. ಈ ರೀತಿ ದ್ವೇಷದ ರಾಜಕಾರಣ ಮಾಡುವುದು ಬೇಡ ಎಂದರು. ಇವರೆಲ್ಲಾ, ಶಾಸಕ ಪ್ರದೀಪ್ ಈಶ್ವರ್‌ಗೆ ಕನಸಿನಲ್ಲೂ ನಾನೇ ಬರುತ್ತೇನೆಂದ ವ್ಯಂಗ್ಯವಾಡಿದ ಸುಧಾಕರ್, ವಿಶ್ವದಲ್ಲಿ ಲಾಟರಿ ಹೊಡೆದು ಶಾಸಕರಾಗಿದ್ದೇನೆಂದು ಹೇಳಿಕೊಂಡವರಲ್ಲಿ ಇವರು ಮೊದಲಿಗರು ಇರಬೇಕೆಂದು ಪ್ರದೀಪ್ ಈಶ್ವರ್‌ಗೆ ಸುಧಾಕರ್ ಟಾಂಗ್ ನೀಡಿದರು.
ನಾನು ಎಲ್ಲಿ ಕಾಂಗ್ರೆಸ್ ಹೋದರೆ ಅವರಿಗೆ ಬೆಂಬಲ ಕಡಿಮೆ ಆಗುತ್ತದೆ. ಅಭದ್ರತೆ ಕಾಡುತ್ತಿದೆ. ಆ ರೀತಿ ಅವರಿಗೆ ಹೆದರಿಕೆ ಬೇಡ. ನಾನು ಇರುವ ಕಡೆ ಚೆನ್ನಾಗಿದ್ದೇನೆ. ನಮ್ಮ ಪಕ್ಷ ಚೆನ್ನಾಗಿ ನೋಡಿಕೊಳ್ಳುತ್ತಿದೆ. ನನ್ನ ಪಕ್ಷವನ್ನು ಇಲ್ಲಿಯೆ ಇದ್ದು ಬೆಳೆಸುವ ಕೆಲಸ ಮಾಡುತ್ತೇನೆ. ನೀವು ಅಲ್ಲಿಯೆ ಇರಲಿ. ಮುಂದಿನ ದಿನಗಳಲ್ಲಿ ನಿಮ್ಮನ್ನು ಅಲ್ಲಿಯೆ ಮಣಿಸುವ ಕೆಲಸ ಮಾಡುತ್ತೇನೆಂದರು.