Advertisement

ಕಿಮ್‌ ಕುರಿತು ಗೊತ್ತು, ಆದರೆ ಹೇಳುವುದಿಲ್ಲ: ಡೊನಾಲ್ಡ್‌ ಟ್ರಂಪ್‌

02:48 AM Apr 29, 2020 | Hari Prasad |

ಸಿಯೋಲ್‌/ವಾಷಿಂಗ್ಟನ್‌: ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆರೋಗ್ಯ ಸ್ಥಿತಿಯ ಬಗ್ಗೆ ವದಂತಿಗಳು, ಗೊಂದಲಗಳು ಹುಟ್ಟಿಕೊಂಡಿರುವಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ.

Advertisement

ಮಂಗಳವಾರ ಕೋವಿಡ್ 19 ವೈರಸ್ ಕುರಿತು ಸುದ್ದಿಗೋಷ್ಠಿ ವೇಳೆ ಕಿಮ್‌ ಜಾಂಗ್‌ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ ಟ್ರಂಪ್‌, ಹೌದು, ಅವರ ಆರೋಗ್ಯ ಸ್ಥಿತಿಯ ಬಗ್ಗೆ ನನಗೆ ಗೊತ್ತು. ಆದರೆ, ನಾನು ಅದರ ಬಗ್ಗೆ ಈಗ ಹೇಳಲು ಇಚ್ಛಿಸುವುದಿಲ್ಲ. ಅವರಿಗೆ ಒಳ್ಳೆಯದಾಗಲಿ ಎಂದಷ್ಟೇ ಹೇಳುತ್ತೇನೆ ಎಂದಿದ್ದಾರೆ.

ಅಲ್ಲದೆ, ಅವರು ಚೆನ್ನಾಗಿದ್ದಾರೆ ಎಂದು ಭಾವಿಸುತ್ತೇನೆ. ಅವರು ಹೇಗಿದ್ದಾರೆ ಎಂಬುದನ್ನು ನಾನು ನಿಖರವಾಗಿ ಬಲ್ಲೆ’ ಎಂದೂ ಹೇಳುವ ಮೂಲಕ ಟ್ರಂಪ್‌ ಎಲ್ಲರನ್ನೂ ಮತ್ತಷ್ಟು ಗೊಂದಲಕ್ಕೆ ನೂಕಿದ್ದಾರೆ.

ಬೆದರಿದರೇ ಕಿಮ್?
ಕಿಮ್‌ ಜಾಂಗ್‌ ಉನ್‌ ಅನಾರೋಗ್ಯ ಹಿನ್ನೆಲೆಯಲ್ಲಿ ಕಾಣಿಸುತ್ತಿಲ್ಲ ಎಂಬ ಸುದ್ದಿಯನ್ನು ದಕ್ಷಿಣ ಕೊರಿಯಾದ ಸಚಿವರೊಬ್ಬರು ತಳ್ಳಿಹಾಕಿದ್ದಾರೆ.

ಕೋವಿಡ್ 19 ವೈರಸ್ ಹರಡಬಹುದೆಂಬ ಭೀತಿಯಿಂದ ಕಿಮ್‌ ಕಾಣಿಸದೇ, ಸುರಕ್ಷಿತ ಪ್ರದೇಶದಲ್ಲಿ ತಂಗಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

Advertisement

ಆದರೆ, ಕೋವಿಡ್ 19 ವೈರಸ್ ಭೀತಿಯೇ ನಿಜವಾಗಿದ್ದರೆ, ಅವರ ಕುರಿತು ಇಷ್ಟೊಂದು ವದಂತಿಗಳು ಹಬ್ಬುತ್ತಿರುವಾಗ ತಾನು ಆರೋಗ್ಯವಾಗಿದ್ದೇನೆ ಎಂಬ ಫೋಟೋವನ್ನಾದರೂ ಬಿಡುಗಡೆ ಮಾಡಬಹುದಿತ್ತಲ್ಲವೇ ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಒಟ್ಟಾರೆ, ಕಿಮ್‌ ಎಲ್ಲಿದ್ದಾರೆ, ಹೇಗಿದ್ದಾರೆ ಎಂಬ ನಿಖರ ಮಾಹಿತಿ ಯಾರಿಗೂ ಸಿಗುತ್ತಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next