Advertisement

ನಾನು ಪ್ರೊಫೆಸರ್‌ ಎಂದು ಹೇಳುತ್ತಿದ್ದರೂ ಥಳಿಸಿದರು

06:45 AM Sep 28, 2017 | |

ಗೋರಖ್‌ಪುರ/ವಾರಾಣಸಿ: “ನಾನು ಪ್ರಾಧ್ಯಾಪಕಿ. ದಯವಿಟ್ಟು ಹೊಡೆಯಬೇಡಿ. ಆದರೆ ಪೊಲೀಸರು ಕೇಳಲೇ ಇಲ್ಲ’ ಹೀಗೆಂದು ಕಳೆದ ಶನಿವಾರ ಬನಾರಸ್‌ ಹಿಂದೂ ವಿವಿ ಆವರಣದಲ್ಲಿ ನಡೆದಿದ್ದ ಗಲಾಟೆಯ ವೇಳೆ ಉಂಟಾದ ಬೆಳವಣಿಗೆ ಬಗ್ಗೆ ಸಮಾಜಶಾಸ್ತ್ರ ವಿಭಾಗದ ಪ್ರೊಫೆಸರ್‌ ಪ್ರತಿಮಾ ಗೊಂಡ್‌ ಹೇಳಿಕೊಂಡಿದ್ದಾರೆ. 

Advertisement

ಗಲಾಟೆ ಉಂಟಾದ ದಿನ ಕ್ಯಾಂಪಸ್‌ನಲ್ಲಿ ತಮ್ಮ ಬಳಿ ನಿಂತಿದ್ದ ವಿದ್ಯಾರ್ಥಿನಿ ಏಟು ತಗುಲಿ ಬಿದ್ದಿದ್ದರು. ಅವರನ್ನು ಕಾಪಾಡಲು ಹೋದ ವೇಳೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಗಲಭೆ ನಡೆಸುತ್ತಿದ್ದ ಗುಂಪು ಮತ್ತು ಪೊಲೀಸರು ತಾವಿದ್ದಲ್ಲಿಗೇ ಬಂತು. ಹೀಗಾಗಿ ಅಲ್ಲಿ ಸಿಕ್ಕಿ ಹಾಕುವಂತಾಯಿತು. ಪೊಲೀಸರನ್ನು ತಡೆದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದಿದ್ದಾರೆ ಅವರು.

ಸಮಾಜವಿರೋಧಿ ಶಕ್ತಿಗಳು: ಬನಾರಸ್‌ ಹಿಂದೂ ವಿವಿಯಲ್ಲಿ ಉಂಟಾಗಿದ್ದ ಗಲಭೆಯ ಹಿಂದೆ ಸಮಾಜ ವಿರೋಧಿ ಶಕ್ತಿಗಳ ಕೈವಾಡ ಇದೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ.  ಬುಧವಾರ ಗೋರಖ್‌ಪುರದಲ್ಲಿ ಮಾತನಾಡಿದ ಅವರು, ಮೇಲ್ನೋಟಕ್ಕೇ ಈ ಅಂಶ ಸಾಬೀತಾಗುತ್ತದೆ ಎಂದು ಅವರು ಹೇಳಿದ್ದಾರೆ. ಘಟನೆಗೆ ಕಾರಣವೇನು ಎಂಬುದನ್ನು ಕಂಡುಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಆದೇಶಿಸಲಾಗಿದೆ ಎಂದಿದ್ದಾರೆ.  ಈ ನಡುವೆ ವಿವಿ ಆವರಣದಲ್ಲಿ ಉಂಟಾದ ಘಟನೆಯ ಹೊಣೆ ಹೊತ್ತು ಮುಖ್ಯ ಪಾಲನಾ ಅಧಿಕಾರಿ ಪ್ರೊ.ಓ.ಎನ್‌.ಸಿಂಗ್‌ ಬುಧವಾರ ರಾಜೀನಾಮೆ ನೀಡಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next