ದಂತೆವಾಡ (ಚತ್ತೀಸ್ ಗಡ) : ಕೋವಿಡ್ ಸೋಂಕು ಪೊಲೀಸ್ ಅಧಿಕಾರಿಗಳಿಗೆ ಎಷ್ಟು ಕಷ್ಟ ಕೊಡುತ್ತಿದೆ ಎಂಬುದಕ್ಕೆ ಚತ್ತೀಸ್ ಗಡದ ಈ ಮಹಿಳಾ ಪೊಲೀಸ್ ಅಧಿಕಾರಿಯೇ ಸಾಕ್ಷಿ. 5 ತಿಂಗಳ ಗರ್ಭಿಣಿಯಾಗಿರುವ ಡಿಎಸ್ ಪಿ ಶಿಲ್ಪಾ ಸಾಹು ಎಂಬುವವರು ಲಾಟಿ ಹಿಡಿದು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚತ್ತೀಸ್ ಗಡದ ದಂತೆವಾಡ ಪ್ರದೇಶದಲ್ಲಿ ಇವರು ಕಾರ್ಯ ನಿರ್ವಹಿಸುತ್ತಿದ್ದು ಎಲ್ಲರಿಂದ ಮೆಚ್ಚುಗೆ ಪಡೆಯುತ್ತಿದ್ದಾರೆ.
5 ತಿಂಗಳ ಗರ್ಭಿಣಿಯಾಗಿದ್ದರೂ ಕೂಡ ಕೈಯಲ್ಲಿ ಲಾಟಿ ಹಿಡಿದು ಬೈಕ್ ಸವಾರರಿಗೆ ಮನೆಯಲ್ಲಿಯೇ ಇರಿ ಎಂದು ಎಚ್ಚರಿಕೆ ನೀಡುತ್ತ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ದಂತೆವಾಡ ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಣೆ ಮಾಡಲಾಗಿದ್ದು, ಲಾಕ್ ಡೌನ್ ಘೋಷಣೆ ಮಾಡಿದಾಗಿನಿಂದಲೂ ನಾನು ಪ್ರತಿನಿತ್ಯ ರೌಂಡ್ಸ್ ಹೋಗುತ್ತೇನೆ ಎಂದು ಅಧಿಕಾರಿ ಶಿಲ್ಪಾ ತಿಳಿಸಿದ್ದಾರೆ. ಇನ್ನು ಜನರ ಬಗ್ಗೆ ಮಾತನಾಡಿರುವ ಅವರು, ಸಾರ್ವಜನಿಕರಿಗೆ ಮೊದ ಮೊದಲು ಕೋವಿಡ್ ಬಗ್ಗೆ ಹೇಳಿದರೆ ಅರ್ಥ ಮಾಡಿಕೊಳ್ಳುತ್ತಾರೆ. ಆ ನಂತರ ಅವರೇ ಎಲ್ಲವನ್ನು ಅರಿತುಕೊಂಡು ಹೊರಗಡೆ ಸುತ್ತಾಡುವುದಿಲ್ಲ ಎಂದು ಪೊಲೀಸ್ ಅಧಿಕಾರಿ ಶಿಲ್ಪಾ ತಿಳಿಸಿದ್ದಾರೆ.
ಶಿಲ್ಪಾ ಅವರು ಮೊದಲು ನಕ್ಷಲ್ ವಿರೋಧಿ ಪಡೆಯಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದ್ದು, ನಿಮಗೆ ಕೋವಿಡ್ ವಿರುದ್ಧದ ಹೋರಾಟ ಚಾಲೆಂಜ್ ಆಗಿದೆಯಾ ಅಥವಾ ವೈರೆಸ್ ವಿರುದ್ಧದ ಹೋರಾಟ ಚಾಲೆಂಜ್ ಆಗಿದ್ಯಾ ಎಂದು ಕೇಳಿದಾಗ, ಶಿಲ್ಪಾ ನಗುತ್ತಲೇ ಉತ್ತರಿಸಿದ್ದಾರೆ. ನಾನು ಸದ್ಯ ಕರ್ತವ್ಯದಲ್ಲಿದ್ದೇನೆ. ಆದ್ರೆ ನನ್ನ ಮಗು ಕಾರ್ಯ ಪಡೆಯಲ್ಲಿ ಇಲ್ಲ. ಅದನ್ನು ಗಮನದಲ್ಲಿಟ್ಟುಕೊಂಡು, ನಾನು ಮಾಸ್ಕ್ ಧರಿಸಿ ಇತರ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತೇನೆ. ಅಲ್ಲದೆ ದೂರದಿಂದ ಜನರಿಗೆ ಸೂಚನೆ ನೀಡುತ್ತೇನೆ ಎಂದಿದ್ದಾರೆ.
ದಂತೇವಾಡದ ಸಮೀಪ ಇರುವ ಕಿರಾಂಡುಲ್ ನಲ್ಲಿ ಎಸ್ ಡಿಒಪಿ ಆಗಿ ಶಿಲ್ಪಾ ಪತಿ ಕಾರ್ಯ ನಿರ್ಪಸಹಿಸುತ್ತಿದ್ದಾರೆ. ಇದೇ ಕಾರಣಕ್ಕೆ ತನ್ನ ಪೋಸ್ಟ್ ಅನ್ನು ದಂತೇವಾಡಕ್ಕೆ ಹಾಕಿಸಿಕೊಂಡಿದ್ದಾಗಿ ಸಾಹು ಹೇಳಿದ್ದಾರೆ.
ಗರ್ಭಿಣಿಯಾಗಿದ್ದಾಗಲೂ ಕರ್ತವ್ಯ ನಿರ್ವಹಿಸುತ್ತಿರುವ ಶಿಲ್ಪಾ ಅವರ ಸೇವೆಯನ್ನು ಮೇಲಾಧಿಕಾರಿಗಳು ಮೆಚ್ಚಿದ್ದಾರೆ. ಇಷ್ಟೇ ಅಲ್ಲದೆ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಕೂಡ ಅವರ ಕರ್ತವ್ಯದ ಬಗೆಗಿನ ಉತ್ಸಾಹವನ್ನು ಗಮನಿಸಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬರು ಶಿಲ್ಪಾ ಅವರ ಫೋಟೊವನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ ಮೇಲೆ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಮೆಚ್ಚುಗೆಗೆ ಕಾರಣಾಗುತ್ತಿದೆ.