ತುಮಕೂರು : ರಾಜ್ಯಸಭೆ ಚುನಾವಣೆ ಯಲ್ಲಿ ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ ಎಂದು ಗುಬ್ಬಿ ಕ್ಷೇತ್ರದ ಜೆಡಿಎಸ್ ಅತೃಪ್ತ ಶಾಸಕ ಎಸ್.ಆರ್.ಶ್ರೀನಿವಾಸ್ ಹೇಳಿಕೆ ನೀಡಿ ಬಂಡಾಯ ಮುಂದುವರೆಸಿದ್ದಾರೆ.
ಮಾಧ್ಯಮ ಗಳೊಂದಿಗೆ ಮಾತನಾಡಿದ ಅವರು, ಜೆಡಿಎಸ್ ಪಕ್ಷಕ್ಕೆ ಮತ ಹಾಕುವಂತೆ ನನಗೆ ಪಕ್ಷದಿಂದ ಕರೆ ಬಂದಿಲ್ಲ. ಕುಪೆಂದ್ರ ರೆಡ್ಡಿ ಮನೆಗೆ ಬಂದಿದ್ದರು. ಸಹಾಯ ಕೇಳಿದರು.ನಾನು ಮಾತಾಡುತ್ತೇನೆ ಅಂದಿದ್ದೇನೆ. ಕುಮಾರಸ್ವಾಮಿ ನನ್ನ ಬಳಿ ರಾಜ್ಯಸಭೆ ಚುನಾವಣೆ ಕುರಿತು ಮಾತಾಡಿಲ್ಲ. ಅದಕ್ಕಿಂತ ಮೊದಲು ಮಾತಾಡಿದ್ದರು. ಅವರು ಮತ ಹಾಕುವಂತೆ ಕೇಳುವುದಿಲ್ಲ ಅಂದುಕೊಂಡಿದ್ದೇನೆ. ನನ್ನ ಪರ್ಯಾಯ ನಾಯಕರನ್ನು ಈಗಾಗಲೇ ಅವರು ಹುಡುಕಿದ್ದಾರೆ. ಹಾಗಾಗಿ ಅವರಿಗೆ ನನ್ನ ಅವಶ್ಯಕತೆ ಇಲ್ಲ ಎಂದು ಆಕ್ರೋಶದ ನುಡಿಗಳನ್ನಾಡಿದ್ದಾರೆ.
ನಾನು ಜೆಡಿಎಸ್ ಗೇ ಮತ ಹಾಕಬೇಕು ಅಂದುಕೊಂಡಿದ್ದೇನೆ. ಆದರೆ 40ಗಂಟೆಗಳಲ್ಲಿ ಏನುಬೇಕಾದರೂ ಆಗಬಹುದು. ಸಿದ್ದರಾಮಯ್ಯ ಅವರು ವಿಶ್ಲೇಷಣೆ ಮಾಡಿದ ರೀತಿ ನನ್ನ ಆತ್ಮಸಾಕ್ಷಿ ಮತ ಇಲ್ಲ.ನಾನು ಕುಮಾರಸ್ವಾಮಿ ಹಾಗೂ ನಿಖಿಲ್ ಗೆ ಬೆನ್ನಿಗೆ ಚೂರಿ ಹಾಕಿದ್ದೇನಂತೆ. ನನ್ನ ಮತ ಯಾರಿಗೆ ಎಂದು ಇನ್ನೂ ನಿರ್ಣಯ ಆಗಿಲ್ಲ. ಡಿಸೆಂಬರ್ ವರೆಗೆ ಕಾದು ನೋಡುತ್ತೇನೆ ಎಂದರು.
ಇದನ್ನೂ ಓದಿ : ರಾಜ್ಯಸಭಾ ಚುನಾವಣೆ ಮತದಾನ: ಸ್ಪಷ್ಟನೆ ನೀಡಿದ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ
ರೇಸಾರ್ಟ್ ಗೆ ನಾನು ಹೋಗುವುದಿಲ್ಲ. ರೇಸಾರ್ಟ್ ಗೆ ಹೋಗಬೇಕಂತಿಲ್ಲ.ವಿಪ್ ಜಾರಿಯಾಗಿದೆ.ನಾಡಗೌಡರು ಜಾರಿ ಮಾಡಿದ್ದಾರೆ, ವಿಪ್ ಉಲ್ಲಂಘನೆ ಮಾಡಿದವರಿಗೆ ಶಿಕ್ಷೆ ಏನಾಗಿದೆ. ಮತ ಹಾಕಿದ್ದನ್ನು ತೋರಿಸಿಯೇ ಹಾಕಬೇಕಲ್ಲವಾ ಎಂದು ಪ್ರಶ್ನಿಸಿದರು.