Advertisement

ಹೆಚ್ಚು ಭಾರತೀಯರ ಬೆಂಬಲ ನನಗಿದೆ: ಅಧ್ಯಕ್ಷ ಡೊನಾಲ್ಡ್‌ ಟ್ರಂಪ್

12:43 AM Aug 16, 2020 | mahesh |

ವಾಷಿಂಗ್ಟನ್‌: “ಅಮೆರಿಕದ ಉಪಾ­ಧ್ಯಕ್ಷ ಸ್ಥಾನದ ಸ್ಪರ್ಧಿಯಾಗಿ­ರುವ ಕಮಲಾ ಹ್ಯಾರಿಸ್‌ಗಿಂತಲೂ ಹೆಚ್ಚು ಭಾರತೀಯರು ನನ್ನೊಂದಿಗಿ­ದ್ದಾರೆ’. ಹೀಗೆಂದು ಹೇಳಿರುವುದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌.

Advertisement

ಶನಿವಾರ ನ್ಯೂಯಾರ್ಕ್‌ ಪೊಲೀಸರ ಸಂಘದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದ ಟ್ರಂಪ್‌, ಭಾರತೀಯ ಮೂಲದ ಕಮಲಾ ವಿರುದ್ಧ ಕಿಡಿ ಕಾರಿದ್ದಾರೆ. ಡೆಮಾಕ್ರಾಟ್‌ ಅಧ್ಯಕ್ಷೀಯ ಆಕಾಂಕ್ಷಿ ಜೋ ಬೈಡೆನ್‌ ಮತ್ತು ಕಮಲಾ ಅವರು ಪೊಲೀಸರ ವಿರುದ್ಧದ ಎಡಪಂಥೀಯ ಸಮರದ ಕೇಂದ್ರ ಬಿಂದುವಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಜೋ ಬಿಡೆನ್‌ ಏನಾದರೂ ಅಧ್ಯಕ್ಷರಾಗಿ ಆಯ್ಕೆಯಾದರೆ, ಅಮೆರಿಕದ ಪ್ರತಿಯೊಂದು ಪೊಲೀಸ್‌ ಇಲಾಖೆಯನ್ನೂ ಹತ್ತಿಕ್ಕುವಂಥ ಕಾನೂನು ಜಾರಿ ಮಾಡುತ್ತಾರೆ. ಇನ್ನು, ಕಮಲಾ ಹ್ಯಾರಿಸ್‌ ಅವರು ಬೈಡೆನ್‌ಗಿಂತಲೂ ಅಪಾಯಕಾರಿ. ಅವರು ಭಾರತೀಯ ಮೂಲ­ದವರು. ಅವರಿಗಿಂತ ಹೆಚ್ಚಿನ ಭಾರತೀಯರು ನನ್ನ ಬೆಂಬಲಕ್ಕಿದ್ದಾರೆ ಎಂದು ಟ್ರಂಪ್‌ ಹೇಳಿದ್ದಾರೆ.

ಜತೆಗೆ, ಬಿಡೆನ್‌ ನಿಮ್ಮ ಘನತೆ ಮತ್ತು ಗೌರವ­ವನ್ನು ಕಸಿದುಕೊಳ್ಳಲಿ­ದ್ದಾರೆ. ಬಿಡೆನ್‌ನ ಅಮೆ­ರಿಕ­ದಲ್ಲಿ ಯಾರೂ ಸುರಕ್ಷಿತವಾಗಿ­ರುವುದಿಲ್ಲ ಎಂದಿದ್ದಾರೆ ಟ್ರಂಪ್‌.

Advertisement

Udayavani is now on Telegram. Click here to join our channel and stay updated with the latest news.

Next