Advertisement

ಪಕ್ಷದಲ್ಲಿ ನನ್ನನ್ನು ಮೂಲೆ ಗುಂಪು ಮಾಡಲಾಗಿಲ್ಲ

05:46 AM Oct 07, 2018 | |

ಹೊಸದಿಲ್ಲಿ: ಪಕ್ಷದಲ್ಲಿ ನನ್ನನ್ನು ಮೂಲೆಗುಂಪು ಮಾಡಿಲ್ಲ ಮತ್ತು ನನ್ನ ಸ್ಥಾನಮಾನದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥೆ ರಮ್ಯಾ ಹೇಳಿದ್ದಾರೆ.

Advertisement

ಇತ್ತೀಚೆಗೆ ಟ್ವಿಟರ್‌ನಲ್ಲಿ ಪ್ರಕಟಿಸಿದ ಸ್ವವಿವರದಲ್ಲಿ ಕಾಂಗ್ರೆಸ್‌ ಸಾಮಾಜಿಕ ಮಾಧ್ಯಮ ವಿಭಾ ಗ ಮುಖ್ಯಸ್ಥೆ ಎಂಬುದನ್ನು ಅಳಿಸಿದ್ದರಿಂದ, ಹುದ್ದೆಗೆ ರಮ್ಯಾ ರಾಜೀನಾಮೆ ನೀಡಿದ್ದಾರೆ ಎಂಬ ಊಹಾಪೋಹ ಎದ್ದಿತ್ತು. ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನನ್ನ ಮೇಲೆ ವಿಶ್ವಾಸವಿರಿಸಿ ಬೆಂಬಲ ನೀಡಿದ್ದಾರೆ. ಅವರ ವಿಶ್ವಾಸ ನನ್ನ ಮೇಲೆ ಇರುವವರೆಗೂ ನನಗೆ ಬೇರೆ ಯಾವ ವಿಷಯವೂ ಮುಖ್ಯವಲ್ಲ ಎಂದಿದ್ದಾರೆ. ಅಲ್ಲದೆ ರಾಹುಲ್‌ ಟ್ವಿಟರ್‌ ಖಾತೆಯನ್ನು ತಾನು ನಿರ್ವಹಿಸುತ್ತಿಲ್ಲ ಎಂದೂ ರಮ್ಯಾ ಹೇಳಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರು ರಮ್ಯಾ ಕಾರ್ಯನಿರ್ವಹಣೆ ಬಗ್ಗೆ ಆಕ್ಷೇಪ ಹೊಂದಿದ್ದಾರೆ ಎಂಬ ಊಹಾಪೋಹವನ್ನೂ ರಮ್ಯಾ ತಳ್ಳಿ ಹಾಕಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next