Advertisement
ನಗರ ದ ಎಂ.ಜಿ. ರಸ್ತೆಯ ಶ್ರೀಮತ್ ಕನ್ಯಕಾಪರಮೇಶ್ವರಿ ಅಮ್ಮನ ವರದೇವಾಲಯದಲ್ಲಿ ಶತನಾಮೋನೋತ್ಸವ, ಕುಂಭಾಭಿಷೇಕ ಕಾರ್ಯಕ್ರಮದ ಪ್ರಯುಕ್ತ ಮಿನಿ ರಥಕ್ಕೆ ಚಾಲನೆ ನೀಡಿ ಅವರು ಸುದ್ದಿ ಗಾರರೊಂದಿಗೆ ಮಾತನಾಡಿದರು. ಬೆಂಗಳೂರಿನಲ್ಲಿ ಐಎಂಎ (ಐಮನಿಟರಿ ಅಡೈಸರಿ) ಮಾಲೀಕ ಮನ್ಸೂರ್ ಆಲಿಖಾನ್ ಕೊಟ್ಟಿರುವ ಹೇಳಿಕೆ ಯೊಂದರಲ್ಲಿ ರೋಷನ್ ಬೇಗ್ ಮೂಲಕ ಎಚ್. ಡಿ. ಕುಮಾರಸ್ವಾ ಮಿಗೆ ಐದು ಕೋಟಿ ರೂ. ಸಲ್ಲಿಕೆಯಾಗಿದೆ ಎಂಬ ದೂರುಗಳು ಕೇಳಿ ಬರುತ್ತಿವೆ ಎಂಬ ಸುದ್ದಿಗಾರರ ಪ್ರಶ್ನೆಗೆ, ನನಗೂ ಐಎಂಎ ಹಗರಣಕ್ಕೂ ಯಾವುದೇ ಸಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
Related Articles
Advertisement
ತನಿಖೆ ಎಲ್ಲಿಗೆ ಹೋಗುತ್ತೆ ನೋಡೋಣ: ತಾವು ಮುಖ್ಯ ಮಂತ್ರಿ ಇದ್ದಾಗ, ಈ ಪ್ರಕರಣದಲ್ಲಿ ರಾಜ್ಯ ಸರ್ಕಾರದ ಅಧಿಕಾರಿಗಳು ಸರಿಯಾದ ತನಿಖೆ ನಡೆಸುತ್ತಿಲ್ಲ. ಸಾರ್ವಜನಿಕರ ಹಣ ದುರ್ಬ ಳಕೆ ಆಗುತ್ತಿದೆ ಎಂದು ತಿಳಿಯಿತು. ಆಗ, ಡಿಜಿಪಿಯವರ ಗಮನ ಸೆಳೆದ ನಂತರ ಗಂಭೀರವಾಗಿ ತನಿಖೆ ಆರಂಭವಾಗಿದೆ. ತನಿಖೆ ಆರಂಭವಾದ ಕೂಡಲೇ, ಆ ವ್ಯಕ್ತಿ (ಐಎಂಎ ಮಾಲೀಕ) ದುಬೈಗೆ ಹೋಗಿಬಿಟ್ಟ. ಆತ ಎಲ್ಲಿದ್ದ ಅಂತ ಟ್ರೇಸ್ ಮಾಡಿದ್ದು, ನನ್ನ ಸರ್ಕಾರದಲ್ಲೇ. ದುಬೈ ನಿಂದ ದೆಹ ಲಿಗೆ ಬಂದ ಆತ ನನ್ನು ಇಡಿ ಅಧಿಕಾ ರಿಗಳು ಅರೆಸ್ಟ್ ಮಾಡ್ತಾರೆ. ಅಲ್ಲಿಂದ ತನಿಖೆ ಆರಂಭವಾಗಿದೆ. ಎಲ್ಲಿಗೆ ಹೋಗಿ ನಿಲ್ಲುತ್ತೋ ನೋಡೋಣ ಎಂದರು.
ಆ ವ್ಯಕ್ತಿ ಯಾರು ಅಂತ ನನಗೆ ಗೊತ್ತಿಲ್ಲ :
ಐಎಂಎ ಮಾಲೀಕನೊಂದಿಗೆ ಭೋಜನ ಸವಿದ ವಿಚಾರ ಪ್ರಸ್ತಾಪಿ ಸಿದ ಎಚ್‌ಡಿಕೆ, ಮೈತ್ರಿ ಸರ್ಕಾ ರ ದಲ್ಲಿ ರೋಷನ್ ಬೇಗ್ ಶಾಸಕ ರಾಗಿದ್ದರು. ಒಂದು ದಿನ ಇಫ್ತಾರ್ ಕೂಟಕ್ಕೆ ಬರಲೇಬೇಕು ಎಂಬ ಹಠ ಮಾಡಿದ್ದರಿಂದ ಅಲ್ಲಿಗೆ ಹೋದೆ. ಅಲ್ಲಿ ಮುಸ್ಲಿಮರು ಇಬ್ಬರು ಕುಳಿತಿದ್ದರು. ಅವರಲ್ಲೊಬ್ಬರನ್ನು ಪರಿಚಯಿಸಿದ ರೋಷನ್ ಬೇಗ್, ಅವರು ಮಹಾದಾನಿಗ ಳಿದ್ದಾರೆ. ಅನೇಕ ಸಂಘ-ಸಂಸ್ಥೆ ಗಳಿಗೆ ಕೊಡುಗೆ ನೀಡಿದ್ದಾರೆ. ಅವರದ್ದು ಉತ್ತಮ
ಸಂಸ್ಥೆ. ಈ ಹಿಂದೆ ಸಿದ್ದ ರಾ ಮಯ್ಯ ಅವರು ಸಿಎಂ ಆಗಿದ್ದ ವೇಳೆ ಅನೇಕ ಶಿಕ್ಷಣ ಸಂಸ್ಥೆ ಗ ಳಿಗೆ ಕೊಡುಗೆ ನೀಡಿದ್ದಾರೆ ಅಂತ ಹೇಳಿದ್ದರು. ನಾನು ಅಲ್ಲಿ ಐದು ನಿಮಿಷ ಇದ್ದೆ.ಪೊಲೀಸರು ಸಹ ಇದ್ದರು. ಅಲ್ಲಿ ನಾನು ಏನನ್ನು ಮಾತನಾಡಲಿಲ್ಲ. ಆ ವ್ಯಕ್ತಿ ಯಾರು ಅಂತ ಕೂಡ ಗೊತ್ತಿಲ್ಲ. ನಾನೇ ತನಿಖೆಗೆ ಆದೇಶ ಕೊಟ್ಟು, ಕಠಿಣ ಕ್ರಮ ತೆಗೆದು ಕೊಳ್ಳಿ ಎಂದು ಹೇಳದ್ದೇನೆ. ಈ ಪ್ರಕರಣದಲ್ಲಿ ನನ್ನ ಪಾತ್ರವೇನಿದೆ ಎಂದು ಪ್ರಶ್ನಿಸಿದರು.