Advertisement

ನನ್ನದು ಮಾತು ಕಡಿಮೆ, ಕೆಲಸ ಹೆಚ್ಚು

03:46 PM Mar 05, 2018 | |

ಬಸವನಬಾಗೇವಾಡಿ: ನನ್ನ 20 ವರ್ಷ ಶಾಸಕರ ಕಾಲಾವಧಿಯಲ್ಲಿ ಮಾಡದಿರದಷ್ಟು ಅಭಿವೃದ್ಧಿ ಕಾರ್ಯಗಳು ಕಳೆದ 4 ವರ್ಷದ ಅವಧಿಯಲ್ಲಿ ಬಸವನಬಾಗೇವಾಡಿ ಮತಕ್ಷೇತ್ರಕ್ಕೆ ಮಾಡಿದ ನನಗಿದೆ ಎಂದು ಕರ್ನಾಟಕ ನಗರ ನೀರು ಸರಬುರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ, ಶಾಸಕ ಶಿವಾನಂದ ಪಾಟೀಲ ಹೇಳಿದರು.

Advertisement

ರವಿವಾರ ಪಟ್ಟಣದ ಹೃದಯ ಭಾಗದಲ್ಲಿ 3.07 ಎಕರೆ ಜಾಗೆಯಲ್ಲಿ 32.73 ಕೋಟಿ ವೆಚ್ಚದಲ್ಲಿ ನೂತನ ಮೆಗಾ ಮಾರುಕಟ್ಟೆ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ನಾನು ತಿಕೋಟಾ, ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 4 ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ನಾನು ಮಾಡಿರುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳು ಜನತೆಯ ಮನದಲ್ಲಿ ಶಾಶ್ವತವಾಗಿ ನೆಲೆಯೂರಿವೆ. ಅಭಿವೃದ್ಧಿ ವಿಷಯದಲ್ಲಿ ನಾನೆಂದು ರಾಜಕೀಯ ಮಾಡಿಲ್ಲ. ನಾನು ಮಾಡಿರುವ ಕೆಲಸಗಳೆ ನನಗೆ ಶ್ರೀರಕ್ಷೆ. ನಾನು ಮಾತನಾಡುವುದು ಕಮ್ಮಿ ಆದರೆ ಕೆಲಸ ಮಾಡುವುದು ಹೆಚ್ಚು. ಹೀಗಾಗಿ ಕ್ಷೇತ್ರ ಕೆಲವು ಸಾಮಾನ್ಯ ಜನರಿಗೆ ನಾನು ಸಿಗದೇ ಇರಬಹುದು. ಆದರೆ ಪ್ರತಿಯೊಬ್ಬ ಕ್ಷೇತ್ರ ಸಾಮಾನ್ಯ ವರ್ಗದ ಜನರಿಗೂ ಕೆಲಸದ ಮೂಲಕ ಅವರ ಋಣವನ್ನು ತೀರಿಸಿದ್ದೇನೆ ಎಂಬ ತೃಪ್ತಿ ನನಗಿದೆ ಎಂದರು.

ಕಳೆದ ನಾಲ್ಕುವರೆ ವರ್ಷದಲ್ಲಿ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ 2 ರಾಜ್ಯ ಹೆದ್ದಾರಿ 7 ಪ್ರಮುಖ ರಸ್ತೆಯನ್ನು ದ್ವಿಪಥ ಮಾಡುವುದರ ಜೊತೆಗೆ ಕ್ಷೇತ್ರದ ಪ್ರತಿಯೊಂದು ಹಳ್ಳಿಗೂ ಉತ್ತಮ ರಸ್ತೆ, ಸುಸಜ್ಜಿತ ಸರಕಾರಿ ಕಟ್ಟಡಗಳು, 3 ಪಟ್ಟಣ ಪಂಚಾಯತ್‌, 2 ಹೋಬಳಿ ಕೇಂದ್ರ, 2 ತಾಲೂಕು ಕೇಂದ್ರ ಸೇರಿದಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಿ ಜಿಲ್ಲೆಯಲ್ಲೇ ಮಾದರಿ ಕ್ಷೇತ್ರವಾಗಿ ಹೊರ ಹೊಮ್ಮಿದೆ ಎಂದರು. 

ಬಸವನಬಾಗೇವಾಡಿ ಪಟ್ಟಣಕ್ಕೆ 46 ಕೋಟಿ ವೇಚ್ಚದಲ್ಲಿ 24*7 ಕುಡಿಯುವ ನೀರು ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಇಂಗಳೇಶ್ವರ, ಕೊಲ್ಹಾರ, ಮನಗೂಳಿ ಸೇರಿದಂತೆ ಅನೇಕ ಹಳ್ಳಿಗಳಿಗೆ ಕೃಷ್ಣಾ ನದಿಯಿಂದ ಬಹುಹಳ್ಳಿ ಕುಡಿಯುವ ನೀರಿನ ಯೋಜನೆ ಜಾರಿಯಾಗಲಿದೆ ಎಂದು ಹೇಳಿದರು. 

Advertisement

ಪುರಸಭೆ ಅಧ್ಯಕ್ಷೆ ಪರಿಜಾನ ಚೌಧರಿ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮಹಾದೇವಿ ಗೋಕಾಕ, ಬ್ಲಾಕ್‌ ಅಧ್ಯಕ್ಷೆ ರುಕ್ಮಿàಣಿ ರಾಠೊಡ, ಬಸಣ್ಣ ದೇಸಾಯಿ, ವೈ.ಡಿ. ನಾಯ್ಕೋಡಿ, ಬಾಲಚಂದ್ರ ಮುಂಜಾನೆ, ಶಿವನಗೌಡ ಬಿರಾದಾರ, ಬಸಣ್ಣ ಹಾರಿವಾಳ, ಎಸ್‌.ಎಸ್‌. ಜಾಲಗೇರಿ, ಸದಾನಂದ ಯಳಮೇಲಿ, ಸಿದ್ದಣ್ಣ ಮೋದಿ, ಅಶೋಕ ಹಾರಿವಾಳ, ಅನಿಲ ಪವಾರ, ಅಬ್ಬು ಚೌಧರಿ, ಆರ್‌.ಬಿ. ದೇಶಬಾಂಡೆ, ಮೈಬೂ ಗಣಿ, ಗುರಲಿಂಗ ಹಡಪದ, ಮುತ್ತು
ಪತ್ತಾರ, ಮೇರಾಸಾಬ ಕೊರಬು, ಸುರೇಶ ಮಣ್ಣೂರ, ಬಸಗೊಂಡ ಹಾದಿಮನಿ, ಶ್ರೀದೇವಿ ಲಮಾಣಿ, ಮುತ್ತು ಉಕ್ಕಲಿ, ಸಂಗಮೇಶ ಓಲೇಕಾರ, ರವಿ ತಿಪ್ಪನಗೌಡ, ಲೋಕನಾಥ ಅಗರವಾಲ, ಮಹಾದೇವ ಮುರಗಿ, ರವಿ ರಾಠೊಡ ಇದ್ದರು.

ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ ಪ್ರಾಸ್ತಾವಿಕ ಮಾತನಾಡಿದರು. ಬಸವರಾಜ ತುಂಬಗಿ ಸ್ವಾಗತಿಸಿದರು. ಗಿರಿಜಾ ಪಾಟೀಲ, ಎಚ್‌.ಬಿ. ಬಾರಿಕಾಯಿ ನಿರೂಪಿಸಿದರು. ಶಂಕರಗೌಡ ಬಿರಾದಾರ ವಂದಿಸಿದರು 

Advertisement

Udayavani is now on Telegram. Click here to join our channel and stay updated with the latest news.

Next