Advertisement

ಸಚಿನ್‌ನಿಂದಲೂ ಬೈಗುಳ ಕೇಳಿಸಿಕೊಂಡಿದ್ದೆ : ಗ್ಲೆನ್‌ ಮೆಕ್‌ ಗ್ರಾಥ್‌

04:26 PM Jan 21, 2017 | Team Udayavani |

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ರಂಗದ ದಂತ ಕಥೆ ಎನಿಸಿಕೊಂಡಿರುವ “ಕ್ರಿಕೆಟ್‌ ದೇವರು’ ಸಚಿನ್‌ ತೆಂಡುಲ್ಕರ್‌ ಸೌಮ್ಯ ಸ್ವಭಾವಕ್ಕೆ, ಸಭ್ಯ ಕ್ರಿಕೆಟ್‌ ವರ್ತನೆಗೆ ವಿಶ್ವದಲ್ಲೇ ಹೆಸರಾದವರು. ಆದರೂ ಆತನಿಂದ ನಾನು ಕ್ರಿಕೆಟ್‌ ಅಂಗಣದಲ್ಲಿ  ವ್ಯಂಗ್ಯದ, ಅವಹೇಳನಕಾರಿ ಬೈಗುಳಗಳನ್ನು, ಚಾಟೂಕ್ತಿಗಳನ್ನು ಕೇಳಿಸಿಕೊಂಡಿದ್ದೆ ಎಂದು ಆಸ್ಟ್ರೇಲಿಯನ್‌ ಕ್ರಿಕೆಟ್‌ನ ದಂತ ಕಥೆ ಎನಿಸಿರುವ ವೇಗದ ಎಸೆಗಾರ ಗ್ಲೆನ್‌ ಮೆಕ್‌ ಗ್ರಾಥ್‌ ಹೇಳಿದ್ದಾರೆ.

Advertisement

ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮೆಕ್‌ ಗ್ರಾಥ್‌ ಹೇಳಿದ್ದು ಹೀಗೆ : 

1990 ಮತ್ತು 2000 ದಶಕದ ಆಸ್ಟ್ರೇಲಿಯ ಕ್ರಿಕೆಟ್‌ ತಂಡಗಳು ಆಟದ ಮೈದಾನದಲ್ಲಿ ಎದುರಾಳಿಗಳ ಧೈರ್ಯ ಸ್ಥೈರ್ಯವನ್ನು ಕುಗ್ಗಿಸಲು ಬೈಗುಳ ಸುರಿಮಳೆ ಗೈಯುವ ತಂತ್ರ ನಡೆಸುತ್ತಿದ್ದರು. ಹಾಗೆ ನೋಡಿದರೆ ವಿಶ್ವದ ಎಲ್ಲ ಕ್ರಿಕೆಟ್‌ ತಂಡಗಳು ಈ ತಂತ್ರವನ್ನು ಅನುಸರಿಸುತ್ತವೆ; ಆದರೆ ಆಸ್ಟ್ರೇಲಿಯನ್‌ ಕ್ರಿಕೆಟಿಗರು ಇದನ್ನು ಮಾಡಿದಾಗ ಭಾರೀ ದೊಡ್ಡ ವಿವಾದಕ್ಕೆ ಕಾರಣವಾಗುತ್ತಾರೆ. ನಿಜಕ್ಕಾದರೆ ಇತರ ತಂಡದವರು ಬೈಗುಳ ನಡೆಸಿದಾಗ ಆಸೀಸ್‌ ಆಟಗಾರರು ಸುಮ್ಮಗಿರುತ್ತಾರೆ.

ಕ್ರಿಕೆಟ್‌ ಆಟಗಾರರು ನಡೆಸುವ ಈ ಸ್ಲೆಜ್ಜಿಂಗ್‌ ದಾಳಿಗೆ ಆಗಿನ  ಕ್ರಿಕೆಟ್‌ ಕಪ್ತಾನ ಸ್ಟೀವ್‌ ವೋ ಅವರು “ಗೇಮ್ಸ್‌ಮ್ಯಾನ್‌ಶಿಪ್‌’ ಎಂಬ ಸಭ್ಯ ನಾಮಕಕರಣ ಮಾಡಿದರು.

ಆಸೀಸ್‌ ಕ್ರಿಕೆಟಿಗರಲ್ಲಿ ಅತ್ಯಂತ ನಿಷ್ಠುರ ಸ್ಲೆಜ್ಜರ್‌ ಎಂದರೆ ಮ್ಯಾಥ್ಯೂ ಹೇಡನ್‌. ಗಿಲ್‌ ಕ್ರಿಸ್ಟ್‌ ಜತೆಗೆ ಆರಂಭಿಕ ದಾಂಡಿಗನಾಗಿ ಬರುತ್ತಿದ್ದ ಈ ಕ್ರಿಕೆಟ್‌ ಸೈಂಧವ ಅನಗತ್ಯ ಸ್ಲೆಜ್ಜಿಂಗ್‌ ವಿವಾದ ಸೃಷ್ಟಿಸುವುದನ್ನು ತಪ್ಪಿಸಲು ಆತನನ್ನು ಗಲೀ ಕ್ಷೇತ್ರದಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸುತ್ತಿದ್ದರು.

Advertisement

ಆಸ್ಟ್ರೇಲಿಯ ಕಂಡಿರುವ ಶ್ರೇಷ್ಠ ನಾಯಕ ಶೇನ್‌ ವಾರ್ನ್. ಆತನ ಮನೋ ತಂತ್ರಗಾರಿಕೆ ಸರ್ವಶ್ರೇಷ್ಠ. ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಆತ ಒಬ್ಬ ಶೋ ಮ್ಯಾನ್‌ ಕೂಡ ಆಗಿದ್ದ ಮತ್ತು ಮಹೋನ್ನತ  ಕ್ಷಣಗಳನ್ನು ತುಂಬಾ ಪ್ರೀತಿಸುತ್ತಿದ್ದ ಎಂದು ಮೆಕ್‌ ಗ್ರಾಥ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next