Advertisement
ಮೈಸೂರು ಲೋಕಾಯುಕ್ತ ಕಚೇರಿಯಲ್ಲಿ ಬುಧವಾರ (ನ6)ವಿಚಾರಣೆಗೆ ಹಾಜರಾಗಿ ಹೊರಬಂದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
Related Articles
Advertisement
‘ಸೈಟ್ ವಿಚಾರ ಎಲ್ಲಾವೂ ಕಾನೂನು ಪ್ರಕಾರವೇ ನಡೆದಿದೆ. ಬಿಜೆಪಿ- ಜೆಡಿಎಸ್ ನವರು ಸುಳ್ಳು ಆರೋಪ ಮಾಡಿದ್ದಾರೆ. ನಾವು ಸೈಟ್ ವಾಪಸ್ ನೀಡಿರೋದು ತಪ್ಪು ಮಾಡಿದ್ದೇವೆ ಎಂದಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದರು ಎಂದು ನನ್ನ ಹೆಂಡತಿ ತೀರ್ಮಾನ ತಗೊಂಡಿರುವುದು. ಈ ಕೇಸ್ಗಳನ್ನು ನಮ್ಮ ಬಳಿ ಇರುವ ಲಾಯರ್ಗಳು ಎದುರಿಸುತ್ತಾರೆ. ಸುಳ್ಳು ಆರೋಪಗಳು ಬಂದಾಗ ವಿಚಾರಣೆಗೆ ಹಾಜರಾಗಬೇಕಾಗಿದೆ. ನನ್ನ ಬಳಿ ಯಾವುದೇ ದಾಖಲೆ ಇಲ್ಲ.ಇದು ನನಗೆ ಸಂಬಂಧವೇ ಇಲ್ಲ. ಕೋರ್ಟ್ನಲ್ಲಿ ತೀರ್ಮಾನ ಆಗುವವರೆಗೆ ಅದು ಆರೋಪವಷ್ಟೇ. ಇದು ನನಗೆ ಕಪ್ಪು ಮಸಿ ಅಲ್ಲ’ ಎಂದರು.
ಸಿಎಂ ಸಿದ್ದರಾಮಯ್ಯ ಅವರನ್ನು ಸುಮಾರು ಎರಡು ಗಂಟೆಗಳ ಕಾಲ ಲೋಕಾಯುಕ್ತ ಎಸ್ ಪಿ ಉದೇಶ್ ಅವರ ನೇತೃತ್ವದಲ್ಲಿ ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸಿದ್ದಾರೆ. ಬೆಳಗ್ಗೆ 10.10 ರಿಂದ ಮಧ್ಯಾಹ್ನ 12.05 ರ ವರೆಗೆ ವಿಚಾರಣೆ ನಡೆಸಿದ್ದಾರೆ.
ಸೈಟ್ ಹಂಚಿಕೆ ಸಂಬಂಧ ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿ ಎ2 ಆಗಿರುವ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ, ಭೂ ಮಾಲೀಕ ದೇವರಾಜು ಅವರನ್ನು ಲೋಕಾಯುಕ್ತ ವಿಚಾರಣೆ ನಡೆಸಿತ್ತು. ಎ1 ಆಗಿರುವ ಸಿದ್ದರಾಮಯ್ಯ ಅವರನ್ನೂ ವಿಚಾರಣೆ ನಡೆಸಿ ಹಲವು ಪ್ರಶ್ನೆಗಳನ್ನು ಕೇಳಲಾಗಿದೆ.
ಸಾಮಾನ್ಯನಂತೆ ಬಂದ ಸಿಎಂ
ವಿಚಾರಣೆಗೆ ಬರುವ ವೇಳೆ ಸಿಎಂ ಸಿದ್ದರಾಮಯ್ಯ ಅವರು ಸರಕಾರಿ ಕಾರು ಬಳಸದೆ ಖಾಸಗಿ ಕಾರಿನಲ್ಲಿ ಸಾಮಾನ್ಯನಂತೆ ಬಂದಿದ್ದರು. ಸರಕಾರಿ ಸಿಬಂದಿಯೂ ಅವರೊಂದಿಗೆ ಬಂದಿರಲಿಲ್ಲ. ಸ್ಥಳದಲ್ಲಿ ಪೊಲೀಸರು ಭದ್ರತೆ ಬಿಗಿಗೊಳಿಸಿದ್ದರು. ವಿಚಾರಣೆಗೆ ಹಾಜರಾಗುವ ಮುನ್ನ ಸಿಎಂ ಕಾನೂನು ಸಲಹೆಗಾರ ಜತೆ ಸಭೆ ನಡಸಿದ್ದರು. ಅವರ ಸಲಹೆ ಮೇರೆಗೆ ಸರಕಾರಿ ವಾಹನ ಬಳಸಲಿಲ್ಲ ಎಂದು ತಿಳಿದು ಬಂದಿದೆ. ಇದೆ ಮೊದಲ ಬಾರಿಗೆ ಸಿಎಂ ಸಿದ್ದರಾಮಯ್ಯ ಅವರು ಹಗರಣವೊಂದರ ಆರೋಪದಲ್ಲಿ ತನಿಖೆ ಎದುರಿಸಿದ್ದಾರೆ.