Advertisement

ನಾನು ಯಶಸ್ವಿ ಉದ್ಯಮಿಯಾಗಿ ಬೆಳೆದೆ

11:52 PM Sep 07, 2019 | Lakshmi GovindaRaju |

ಬೆಂಗಳೂರು: “ನಾನು ಉದ್ಯಮ ಕ್ಷೇತ್ರದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದೆ. ಆದರೆ, ರಾಜಕೀಯ ಕ್ಷೇತ್ರದಲ್ಲಿ ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಾಗಲಿಲ್ಲ’ ಎಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತು ಶನಿವಾರ ಹಮ್ಮಿಕೊಂಡಿದ್ದ “ ಸಾಧಕರೊಂದಿಗೆ ಸಂವಾದ’ ಕಾರ್ಯಕ್ರಮದಲ್ಲಿ ತಿಂಗಳ ಅತಿಥಿಯಾಗಿ ಆಗಮಿಸಿ ತಾವು ಸಾಗಿ ಬಂದ ಹಾದಿಯ ಮೆಲಕು ಹಾಕಿದರು.

Advertisement

ಎಸ್‌ಎಸ್‌ಎಲ್‌ಸಿಯಲ್ಲಿರುವಾಗಲೇ ಅಪ್ಪ ಗಿಫ್ಟ್ ಆಗಿ ನೀಡಿದ್ದ ಪ್ರಿಂಟಿಂಗ್‌ ಪ್ರಸ್‌ ನಡೆಸಲು ಆರಂಭಿಸಿದೆ. ಆ ವೇಳೆಗೆ, ಪ್ರಿಂಟಿಂಗ್‌ ಪ್ರಸ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಸಾಲ ಮನ್ನಾ ಮಾಡಿ ಅಪ್ಪನಿಂದ ಬೈಯಿಸಿ ಕೊಂಡಿದ್ದೆ. ಆದರೆ, ಸಾಲ ನೀಡಿದರೆ ದುಂದುವೆಚ್ಚ ಮಾಡುತ್ತಾರೆ ಎಂಬ ಕಾರಣದಿಂದಾಗಿ ಈಗ ನಮ್ಮ ಸಂಸ್ಥೆ ಕಾರ್ಮಿಕರಿಗೆ ಸಾಲ ನೀಡುತಿಲ್ಲ ಎಂದರು.

ಎಸ್‌ಎಸ್‌ಎಲ್‌ಸಿಯಲ್ಲಿ ಅನುತ್ತೀರ್ಣನಾದ ಮೇಲೆ ಪದಕೋಶ, ಕ್ಯಾಲೆಂಡರ್‌ ಪ್ರಿಂಟ್‌ ಮಾಡಿ ಮಾರಾಟ ಮಾಡತೊಡಗಿದೆ. ನಂತರದ ದಿನಗಳಲ್ಲಿ ಬಿಕಾಂ ಪದವಿ ಪೂರೈಸಿ, ಗದಗ್‌ನಲ್ಲಿರುವಾಗ ಒಂದು ಲಾರಿ ಖರೀದಿಸಿದೆ. ಅಲ್ಲಿಂದ ಆರಂಭವಾದ ಟ್ರಾನ್ಸ್‌ಪೊರ್ಟ್‌ ಉದ್ಯಮ ಇದೀಗ 5 ಸಾವಿರ ಲಾರಿಗೆ ಬಂದು ನಿಂತಿದೆ. ಸುಮಾರು 4ನೂರು ಬಸ್‌ಗಳನ್ನು ವಿಆರ್‌ಎಲ್‌ ಸಂಸ್ಥೆ ಹೊಂದಿದೆ ಎಂದು ನುಡಿದರು.

ನಷ್ಟದಲ್ಲಿದ್ದ ಉದ್ಯಮದ ಆರಂಭ ಯಶಸ್ಸಿನ ಗುಟ್ಟು: ಲಾರಿ ಖರೀದಿಸಿದ ದಿನಗಳಲ್ಲಿ ಹುಬ್ಬಳ್ಳಿ-ಧಾರವಾಡದಲ್ಲಿ ಲಾರಿ ಮಾಲೀಕರು 1 ಮೂಟೆ ಸಾಗಿಸಲು 4 ರೂ.ನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ನಾನು ಪೈಪೋಟಿಗಿಳಿದು 1 ಮೂಟೆ ಸಾಗಿಸಲು 1ರೂ. ತೆಗೆದುಕೊಂಡು ಸಾಗಾಣಿಕೆ ಮಾಡಿದೆ. ಹೀಗಾಗಿ, ಆ ವೇಳೆ ಹಲವು ಲಾರಿ ಮಾಲೀಕರು ನನ್ನ ಕಾರ್ಯವೈಖರಿಯನ್ನು ಪ್ರಶ್ನಿಸಿದರು. ಆದರೂ ಪೈಪೋಟಿಗಿಳಿದು ಯಶಸ್ಸು ಸಾಧಿಸಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next