Advertisement

ಗೋಪಾಲಕೃಷ್ಣ ಯಾಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ: ಎಸ್.ಆರ್.ವಿಶ್ವನಾಥ್

05:31 PM Dec 01, 2021 | Team Udayavani |

ಬೆಂಗಳೂರು : ಗೋಪಾಲಕೃಷ್ಣ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಮೂರನೆ ಸ್ಥಾನಕ್ಕೆ ತಳ್ಳಲ್ಪಟ್ಟವರು, ಅವರು ಯಾಕೆ ನನ್ನ ಕೊಲೆಗೆ ಸಂಚು ಹೂಡಿದರೋ ಗೊತ್ತಿಲ್ಲ ಎಂದು ಬುಧವಾರ ಯಲಹಂಕ ಬಿಜೆಪಿ ಶಾಸಕ ಎಸ್.ಆರ್. ವಿಶ್ವನಾಥ್ ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದಾರೆ.

Advertisement

ಈ ಬಗ್ಗೆ ಗೃಹ ಸಚಿವರಿಗೆ ದೂರು ನೀಡಿದ್ದೇನೆ. ಸಿಎಂಗೂ ಮಾಹಿತಿ ನೀಡಿದ್ದೇನೆ. ಇವರೇನು ನನ್ನ ಎದುರಾಳಿಯೇ ಅಲ್ಲ. ನಾನು ಯಾವತ್ತೂ ದ್ವೇಷದ ರಾಜಕಾರಣ ಮಾಡಿಲ್ಲ. ಬೆಳಿಗ್ಗೆಯಿಂದ ಕಾಂಗ್ರೆಸ್, ಬಿಜೆಪಿ ಜೆಡಿಎಸ್ ಶಾಸಕರು ಕರೆ ಮಾಡಿ ಧೈರ್ಯ ತುಂಬಿದ್ದಾರೆ. ನಮ್ಮ ರಾಜ್ಯಕ್ಕೆ ಈ ರೀತಿಯ ದ್ವೇಷದ ರಾಜಕಾರಣ ಒಳ್ಳೆಯದಲ್ಲ ಎಂದರು.

ಕೆಲವು ಕಾಂಗ್ರೆಸ್ ನಾಯಕರು ಇದನ್ನು ಸಮರ್ಥನೆ ಮಾಡಿಕೊಳ್ಳುವುದು ಬೇಡ. ಇದು ಒಳ್ಳೆಯ ಬೆಳವಣಿಗೆಯಲ್ಲ. ನೀವು ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಆಗ್ರಹಿಸಿ, ಮುಂದೆ ಈ ರೀತಿಯ ಬೆಳವಣಿಗೆ ರಾಜ್ಯದಲ್ಲಿ ನಡೆಯಬಾರದು ಎಂದರು.

ಕುಳ್ಳ ದೇವರಾಜ್ ನನಗೆ ಪರಿಚಯ ಆದರೆ ನಮ್ಮ ಪಕ್ಷದ ಕಾರ್ಯಕರ್ತ ಅಲ್ಲ. 32 ಎಕರೆ ಜಮೀನು ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲು ಪ್ರಯತ್ನ ನಡೆಸುತ್ತಿದ್ದಾರೆ. ನಾನು ಜಮೀನ್ದಾರ. ನನ್ನ ಜಮೀನಿನಲ್ಲಿ ಬೆಳೆ ಬೆಳೆಯಲು ಆಗುತ್ತಿಲ್ಲ. ಅಕ್ರಮ ಜಮೀನು ಪಡೆಯುವ ಅಗತ್ಯ ನನಗೆ ಇಲ್ಲ ಎಂದರು.

ಕುಳ್ಳ ದೇವರಾಜ್ ಜೈಲಿನಲ್ಲಿದ್ದು ಕ್ಷಮಾಪನ ಪತ್ರ ಕಳಿಸಿದ್ದಾರೆ. ನನ್ನ ಮೇಲೆ ಹಲ್ಲೆ ನಡೆಯುವ ಬಗ್ಗೆ ಗೃಹ ಸಚಿವರಿಗೆ ಸೂಕ್ಷ್ಮವಾಗಿ ತಿಳಿಸಿದ್ದೆ. ಕುಳ್ಳ ದೇವರಾಜ್, ಗೋಪಾಲಕೃಷ್ಣನ ಪರಮ ಶಿಷ್ಯ. ಅವನು ತಾನು ಮಾಡಿಸಿರುವ ಬಗ್ಗೆ ಯಾರಿಗೂ ಗೊತ್ತಾಗಬಾರದು ಅಂತ ಹೇಳಿದ್ದಾನೆ. ಸುಮಾರು 3 ವರೆ ಗಂಟೆ ಆಡಿಯೋ ಇದೆ. ನಾನು ಎಷ್ಟೊತ್ತಿಗೆ ಎಲ್ಲಿ ಹೋಗುತ್ತೇನೆ. ಎಷ್ಟೊತ್ತಿಗೆ ಹೊಡೆಯಬೇಕು ಅಂಥ ಮೇಲಿಂದ ಮೇಲೆ ಹೇಳುತ್ತಾನೆ. ಇದುವರೆಗೆ ಕೊಲೆಗೆ ಪ್ರಯತ್ನ ನಡೆದಿಲ್ಲ. ಆದರೆ ,ಷಡ್ಯಂತ್ರ ನಡೆದಿದೆ ಎಂದರು.

Advertisement

ನನಗೆ ಯಾವುದೇ ರಕ್ಷಣೆ ಬೇಕಿಲ್ಲ. ನನ್ನ ಶಕ್ತಿ ಮೇಲೆ ನನಗೆ ನಂಬಿಕೆ ಇದೆ. ಯಾವುದೇ ಸೆಕ್ಯುರಿಟಿ ಬೇಕಿಲ್ಲ.ಬೆಂಗಳೂರಿನ ರೌಡಿಗಳೆಲ್ಲಾ ವಿಶ್ವನಾಥ ಬಳಿ ಇದಾರೆ ಅಂತ ಹೇಳುತ್ತಿದ್ದಾರೆ.. ಅವರು ನನ್ನ ಸ್ನೇಹಿತರೇ, ಅವರೇನು ಸಾಧು ಸಂತರ ಜೊತೆ ಇದ್ದಾರಾ? ಒಳ್ಳೆ ಸ್ಥಾನದಲ್ಲಿ ಇದ್ದಾರೆ, ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದಾರೆ. ಅವರು ಅಖಂಡ ಶ್ರೀನಿವಾಸ ಅವರನ್ನೇ ರಕ್ಷಿಸಲಿಲ್ಲ. ಇನ್ನು ನನ್ನನ್ನೇನು ರಕ್ಷಣೆ ಮಾಡುತ್ತಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಂತವರಿದ್ದರೇನೆ ಬಿಜೆಪಿಗೆ ಬೆಲೆ ಬರುತ್ತದೆ ಎಂದರು.

ಗೋಪಾಲಕೃಷ್ಣ ಅವರನ್ನು ಬಂಧಿಸದಂತೆ ಹಿರಿಯ ನಾಯಕರೊಬ್ಬರು ಸಿಸಿಬಿ ಪೋಲೀಸರಿಗೆ ಧಮ್ಕಿ ಹಾಕಿದ್ದಾರೆ ಎಂಬ ಮಾಹಿತಿ ಇದೆ. ಗೋಪಾಲಕೃಷ್ಣ ಜೊತೆ ಯಾವುದೇ ರೀತಿಯ ಸಂಬಂಧ ಇಲ್ಲ. ನಮ್ಮ ಪಕ್ಷ, ಸರ್ಕಾರ ನನ್ನ ಜೊತೆ ಇದೆ. ಅವರು ವೀರಪ್ಪ ಮೊಯಿಲಿ ಶಿಷ್ಯನೇ ಅವನು. ಅವರು ವಿಚಾರವಂತರಿದ್ದಾರೆ. ಈ ಬಗ್ಗೆ ತನಿಖೆ ಯಿಂದ ಎಲ್ಲ ಹೊರಬರಲಿ. ನಮ್ಮ ಪೋಲೀಸರ ಮೇಲೆ ನನಗೆ ನಂಬಿಕೆ ಇದೆ ಎಂದರು.

ಕಡಬಗೆರೆ ಸೀನನಿಂದ ಈಗ ಯಾವುದೇ ರೀತಿಯ ತೊಂದರೆ ಇಲ್ಲ, ಅವರು ಈಗ ಅವರ ಪಾಡಿಗೆ ಇದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next