ಬೆಂಗಳೂರು: ಪಿಎಸ್ ಐ ನೇಮಕ ಹಗರಣದ ಬಗ್ಗೆ ಸಚಿವ ಪ್ರಭು ಚೌಹಾಣ್, ಪರಿಷತ್ ಸದಸ್ಯ ಸಂಕನೂರು ಮೊದಲೇ ಪತ್ರ ಬರೆದಿದ್ದರು. ಹಾಗಾದರೆ ಅವರಿಗೆ ಯಾಕೆ ನೋಟಿಸ್ ಕೊಟ್ಟಿಲ್ಲ? ಉದ್ದೇಶಪೂರ್ವಕವಾಗಿ ನನಗೆ ಮಾತ್ರ ನೋಟಿಸ್ ಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ ಖರ್ಗೆ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಯಾವ ನಿಯಮದಡಿ ಸಿಐಡಿ ಮುಂದೆ ಹಾಜರಾಗಬೇಕೆಂದು ಹೇಳಿಲ್ಲ. ಇಂದು ಇಲ್ಲವೇ ನಾಳೆ ನೋಟಿಸ್ ಗೆ ಲಿಖಿತ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.
ಪಿಎಸ್ಐ ಅಕ್ರಮ ಪ್ರಕರಣದಲ್ಲಿ ನಾನು ಆರೋಪಿಯೇ ಅಲ್ಲ. ಯಾವ ರೂಲ್ ಅಡಿಯಲ್ಲಿ ನೋಟಿಸ್ ಕೊಟ್ಟಿದ್ದಾರೆಂದು ಅವರಿಗೂ ಗೊತ್ತಿಲ್ಲ. ನಾನು ಲಿಖಿತ ರೂಪದಲ್ಲಿ ಪ್ರತಿಕ್ರಿಯೆ ಕೊಡುತ್ತೇನೆ. ಮಾಧ್ಯಮಗಳಿಗೆ ಹೇಳಿಕೆ ನೀಡಿದ ಕಾರಣ ನನಗೆ ನೋಟಿಸ್ ಬರುತ್ತದೆ. ಆದರೆ ಸಚಿವ ಪ್ರಭುಚೌಹಾಣ್ ಅಕ್ರಮದ ಬಗ್ಗೆ ಮೊದಲೆ ಪತ್ರ ಬರೆದಿದ್ದಾರೆ. ಅವರನ್ನು ಯಾಕೆ ವಿಚಾರಣೆಗೆ ಕರೆದಿಲ್ಲ. ಪ್ರಮುಖವಾಗಿ ಯಾಕೆ ದಿವ್ಯ ಹಾಗರಗಿ ಬಂಧನವಾಗಿಲ್ಲ ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ಕುಮಾರಸ್ವಾಮಿಗೆ ಮೈಸೂರು ಬಗ್ಗೆ ಹೆಚ್ಚು ಒಲವು, ಪ್ರೀತಿ: ಜಿ.ಟಿ ದೇವೇಗೌಡ ವ್ಯಂಗ್ಯ
ಗೃಹ ಸಚಿವರಷ್ಟೇ ಅಲ್ಲಾ ಇಡೀ ಸರ್ಕಾರವೇ ದಿವ್ಯಾ ಹಾಗರಗಿಗೆ ರಕ್ಷಣೆ ನೀಡುತ್ತಿದೆ. ನಾನು ಮಾಧ್ಯಮದ ಮುಂದೆ ಆಡಿಯೋ ಬಿಡುಗಡೆ ನಂತರ ನನ್ನ ಟ್ವಿಟರ್ ಅಕೌಂಟ್ ಹ್ಯಾಕ್ ಆಗಿದೆ. ನನಗೆ ಹಿಂದಿ ಭಾಷೆಯಲ್ಲಿ ಬೆದರಿಕೆ ಕರೆ ಬಂದಿದೆ. ಇದೆಲ್ಲಾ ನೋಡಿದರೆ ವ್ಯವಸ್ಥಿತವಾಗಿ ಹೆದರಿಸುವ ಕೆಲಸ ಮಾಡಲಾಗುತ್ತಿದೆ. ತಮ್ಮ ವೈಫಲ್ಯಗಳನ್ನ ಮುಚ್ಚಿಕೊಳ್ಳಲು ಬಿಜೆಪಿಯವರು ಹೀಗೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.