Advertisement

ಬಣ್ಣದ ರಾಜಕೀಯ ನನಗೆ ಗೊತ್ತಿಲ್ಲ: ಗೌರಿಶಂಕರ್‌

07:01 AM Jun 15, 2020 | Lakshmi GovindaRaj |

ತುಮಕೂರು: ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ. ಜಾತಿ ರಾಜಕಾರಣ ಮಾಡುವ ಕಲೆಯೂ ನನಗೆ ಗೊತ್ತಿಲ್ಲ, ನಾನೇನಿದ್ದರೂ ನೇರ, ದಿಟ್ಟ, ನಿರಂತರ ರಾಜಕಾರಣಿ ಎಂದು ಶಾಸಕ ಡಿ.ಸಿ. ಗೌರಿಶಂಕರ್‌  ಸ್ಪಷ್ಟಪಡಿಸಿದರು. ಗ್ರಾಮಾಂತರದ ಬೆಳ್ಳಾವಿಯಲ್ಲಿ ಬಡ ಜನರಿಗೆ ಎರಡನೇ  ಬಾರಿಗೆ ಆಹಾರದ ಕಿಟ್‌ ವಿತರಿಸಿ ಮಾತನಾಡಿ, ಒಳಗೊಂದು, ಹೊರಗೊಂದು ಬಣ್ಣದ ರಾಜಕೀಯ ಮಾಡುವ ವಿದ್ಯೆ ನನಗೆ ಗೊತ್ತಿಲ್ಲ.

Advertisement

ನಾನು ನೇರ, ದಿಟ್ಟ,  ನಿರಂತರ ಇದ್ದಂತೆ. ನಾನು ಎಂದೂ ಡಬಲ್‌ ಗೇಮ್‌ ಮಾಡುವ ರಾಜಕಾರಣಿಯಲ್ಲ, ಜಾತಿ ರಾಜಕೀಯ ಮಾಡುವ ಕಲೆಯೂ ನನಗೆ ಗೊತ್ತಿಲ್ಲ ಎಂದರು. ಗ್ರಾಮಾಂತರದಲ್ಲಿ ಈಗಾಗಲೇ ಮೊದಲನೇ ಹಂತದಲ್ಲಿ 65 ಸಾವಿರ ಆಹಾರ ಕಿಟ್‌  ವಿತರಿಸಲಾಗಿದ್ದು, ಮತ್ತೆ ಎರಡನೇ ಹಂತದಲ್ಲಿ ಎಲ್ಲಾ 65 ಸಾವಿರ ಕುಟುಂಬಗಳಿಗೂ ಆಹಾರ ಕಿಟ್‌ ವಿತರಿಸಲು ಮುಂದಾಗಿದ್ದು,

ಈಗಾಗಲೇ ಕೆಸರಮಡು ಮತ್ತು ಬುಗುಡನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಆಹಾರದ ಕಿಟ್‌ ವಿತರಿಸಲಾಗಿದೆ.  ಪ್ರಸ್ತುತ ಬೆಳ್ಳಾವಿ ಪಂಚಾಯ್ತಿ ವ್ಯಾಪ್ತಿಯಲ್ಲಿ 2000 ಆಹಾರ ಕಿಟ್‌ ವಿತರಿಸಲಾಗುತ್ತಿದೆ. ಲಾಕ್‌ಡೌನ್‌ ಹೊರತು ಪಡಿಸಿ ಯಾರು ಹಸಿವಿನಿಂದ ಇದ್ದಾರೋ ಅಂತಹವರು ಆಹಾರ ಕಿಟ್‌ ಬೇಕೆಂದು ನಮ್ಮ ಗಮನಕ್ಕೆ ತಂದರೆ ಅವರಿಗೆ ಆಹಾರ ಕಿಟ್‌ ವಿತರಿಸಲು ನಾನು  ಸಿದನಿದ್ದೇನೆ ಎಂದು ಅವರು ತಿಳಿಸಿದರು.

ಜಾತಿ-ಪಕ್ಷ ರಹಿತ ಆಹಾರ ವಿತರಣೆ: ಗ್ರಾಮಾಂತರದಲ್ಲಿ ಜಾತಿ ರಹಿತವಾಗಿ, ಪಕ್ಷಾತೀತವಾಗಿ ಸ್ವಂತ ವೆಚ್ಚದಲ್ಲಿ ನಾನು ಆಹಾರ ಕಿಟ್‌ ವಿತರಿಸುತ್ತಿದ್ದೇನೆ. ನಾನು ಯಾರಿಂದಲೂ ಚಂದಾ ವಸೂಲಿ  ಮಾಡಿ ಆಹಾರದ ಕಿಟ್‌ ವಿತರಿಸುತ್ತಿಲ್ಲ. ನಾನು ನನ್ನ ಕುಟುಂಬ ಸೇರಿ ನನ್ನ ಕಾರ್ಯಕರ್ತರೊಂದಿಗೆ ತೆರಳಿ ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸುತ್ತಿದ್ದೇನೆ ಎಂದು ಹೇಳಿದರು.

ದೇವೇಗೌಡರ ಆಯ್ಕೆಯಿಂದ ಕಳಂಕ ಕಳಚಿದಂತಾಗಿದೆ: ಕಳೆದ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡರನ್ನು ಸೋಲಿಸಿ ತುಮಕೂರಿಗೆ ಅಂಟಿದ್ದ ಕಳಂಕವನ್ನು ಈಗ ರಾಜ್ಯಸಭೆಗೆ ಆಯ್ಕೆಯಾಗುವ ಮೂಲಕ ಕಳಂಕ ಕಳಚಿದಂತಾಗಿದೆ. ದೇವೇಗೌಡರ ಸಲಹೆ ಕೇಂದ್ರ ಸರ್ಕಾರಕ್ಕೆ ಅಗತ್ಯವಿದ್ದು, ರಾಜ್ಯದ ಪರ ರಾಜ್ಯಸಭೆಯಲ್ಲಿ ದೇವೇಗೌಡರು ಧ್ವನಿಯೆತ್ತಲಿದ್ದಾರೆ ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next