Advertisement

Test series defeat; ನಾನು ಯಾರ ಸಾಮರ್ಥ್ಯವನ್ನೂ ಅನುಮಾನಿಸುವುದಿಲ್ಲ: ರೋಹಿತ್ ಶರ್ಮ

07:23 PM Oct 26, 2024 | Team Udayavani |

ಪುಣೆ: ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಸೋಲಿನ ಬಳಿಕ ನಾಯಕ ರೋಹಿತ್ ಶರ್ಮ  ಬ್ಯಾಟರ್ಸ್ ಗಳನ್ನು ಹೊಣೆಗಾರರನ್ನಾಗಿಸದಿರಲು ನಿರ್ಧರಿಸಿದ್ದಾರೆ. ಕಠಿನ ಎದುರಾಳಿಗಳ ವಿರುದ್ಧ ಯಶಸ್ವಿಯಾಗಲು ಬ್ಯಾಟರ್ಸ್ ಗಳು ತಮ್ಮ ಯೋಜನೆಗಳನ್ನು ನಂಬಬೇಕು ಎಂದು ಸೂಚನೆ ನೀಡಿದ್ದಾರೆ.

Advertisement

ಪಂದ್ಯದ ನಂತರದ ಪತ್ರಿಕಾಗೋಷ್ಠಿಯಲ್ಲಿ ರೋಹಿತ್ “ಯಾರ ಸಾಮರ್ಥ್ಯದ ಬಗ್ಗೆಯೂ ನನಗೆ ಸಂಶಯವಿಲ್ಲ. ನಾನು ಈ ಬಗ್ಗೆ ಹೆಚ್ಚಿನ ಪೋಸ್ಟ್‌ಮಾರ್ಟಮ್ ಮಾಡುವುದಿಲ್ಲ, ಆದರೆ ಬ್ಯಾಟರ್‌ಗಳು ತಮ್ಮ ಯೋಜನೆಗಳೊಂದಿಗೆ ಬರಬೇಕು ಮತ್ತು ನ್ಯೂಜಿಲ್ಯಾಂಡ್ ಬ್ಯಾಟರ್‌ಗಳು ತೋರಿಸಿದ ಯೋಜನೆಗಳ ಮೇಲೆ ನಂಬಿಕೆ ಇಡಬೇಕು ”ಎಂದು  ಹೇಳಿಕೆ ನೀಡಿದ್ದಾರೆ.

“ಇದು ನಿರಾಶಾದಾಯಕವಾಗಿದೆ. ಇದನ್ನು ನಾವು ನಿರೀಕ್ಷಿಸಿದ್ದಲ್ಲ. ಅವರು ನಮಗಿಂತ ಉತ್ತಮವಾಗಿ ಆಡಿದ್ದರಿಂದ ನಾವು ಅವರಿಗೆ ಕ್ರೆಡಿಟ್ ನೀಡಬೇಕಾಗಿದೆ. ಆ ಸವಾಲುಗಳಿಗೆ ಸ್ಪಂದಿಸುವಲ್ಲಿ ನಾವು ವಿಫಲರಾಗಿದ್ದೇವೆ. ನಾವು ಬೋರ್ಡ್‌ನಲ್ಲಿ ರನ್ ಗಳಿಸುವಷ್ಟು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೇವೆ ಎಂದು ನಾನು ಭಾವಿಸುವುದಿಲ್ಲ. ಗೆಲ್ಲಲು ನೀವು 20 ವಿಕೆಟ್‌ಗಳನ್ನು ಕೀಳಬೇಕಾಗಿದ್ದು, ಬ್ಯಾಟರ್ಸ್ ರನ್ ಗಳನ್ನೂ ಗಳಿಸಬೇಕಾಗಿದೆ” ಎಂದರು.

“ಅವರನ್ನು 250ಕ್ಕೆ (ಮೊದಲ ಇನ್ನಿಂಗ್ಸ್‌ನಲ್ಲಿ) ನಿರ್ಬಂಧಿಸಿದ್ದು ಉತ್ತಮ ಹೋರಾಟ. ಆದರೆ, ಇದು ಸವಾಲಿನದು ಎಂದು ನಮಗೆ ತಿಳಿದಿತ್ತು. ಇದು ಬಹಳಷ್ಟು ಸುಲಭವಾದ ಪಿಚ್ ಆಗಿರಲಿಲ್ಲ. ಮೊದಲ ಇನ್ನಿಂಗ್ಸ್‌ನಲ್ಲಿ ನಾವು ಸ್ವಲ್ಪ ಹತ್ತಿರವಾಗುತ್ತಿದ್ದರೆ ವಿಷಯಗಳು ಸ್ವಲ್ಪ ವಿಭಿನ್ನವಾಗಿರುತ್ತಿದ್ದವು” ಎಂದು ರೋಹಿತ್ ಹೇಳಿದರು.

Advertisement

ಸರಣಿ ಸೋತರೂ, ಕೆಲವೇ ದಿನಗಳಲ್ಲಿ ಮುಂಬೈನಲ್ಲಿ ನಡೆದ ಮೂರನೇ ಟೆಸ್ಟ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ಭರವಸೆ ನೀಡಿದ ಕಪ್ತಾನ ”ನಾವು ವಾಂಖೆಡೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತೇವೆ. ಇದು ಸಾಮೂಹಿಕ ವೈಫಲ್ಯ. ನಾನು ಕೇವಲ ಬ್ಯಾಟರ್ಸ್ ಅಥವಾ ಬೌಲರ್‌ಗಳನ್ನು ದೂಷಿಸುವ ವ್ಯಕ್ತಿ ಅಲ್ಲ. ನಾವು ವಾಂಖೆಡೆಯಲ್ಲಿ ಉತ್ತಮ ಉದ್ದೇಶ, ಉತ್ತಮ ಆಲೋಚನೆಗಳು ಮತ್ತು ಉತ್ತಮ ವಿಧಾನಗಳೊಂದಿಗೆ ಆಡಲಿಳಿಯುತ್ತೇವೆ” ಎಂದು ವಿಶ್ವಾಸದ ನುಡಿಗಳನ್ನಾಡಿದರು.

ಎರಡನೇ ಟೆಸ್ಟ್‌ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತವನ್ನು 113 ರನ್‌ಗಳಿಂದ ಸೋಲಿಸಿ ಮೂರು ಪಂದ್ಯಗಳ  ಸರಣಿಯಲ್ಲಿ 2-0 ಅಂತರದಿಂದ ಸರಣಿ ಗೆದ್ದಿದೆ.

Advertisement

Udayavani is now on Telegram. Click here to join our channel and stay updated with the latest news.

Next