Advertisement

ಐ ಡೋಂಟ್‌ ಶೇರ್‌!

06:30 AM Feb 21, 2018 | Team Udayavani |

ಪ್ರೀತಿಯನ್ನು ಹಂಚಿಕೊಳ್ಳುವುದರಿಂದ ಎರಡರಷ್ಟಾಗುತ್ತೆ, ದುಃಖವನ್ನು ಹಂಚಿಕೊಳ್ಳುವುದರಿಂದ ಭಾರ ಕಡಿಮೆಯಾಗುತ್ತೆ ಎಂದು ಹೇಳಿದ್ದಾರೆ ತಿಳಿದವರು. ಅಭಿಪ್ರಾಯಗಳನ್ನು ಹಂಚಿಕೊಳ್ಳುವುದರಿಂದ ಮನಸ್ತಾಪಗಳೂ ಕೊನೆಗೊಳ್ಳುತ್ತವೆ, ಸುಖ ಶಾಂತಿ ಮನೆ ಮಾಡುತ್ತದೆ ಎಂದೂ ಹೇಳುತ್ತಾರೆ.

Advertisement

ಒಟ್ಟಿನಲ್ಲಿ ಹಂಚಿಕೊಳ್ಳುವುದರಿಂದ ಯಾವತ್ತೂ ಲಾಭವಿದೆ ಎನ್ನುವ ನಂಬಿಕೆ ನಮ್ಮಲ್ಲಿದೆ. ಆದರೆ ಹಂಚಿಕೊಳ್ಳಬಾರದ ವಸ್ತುಗಳ ಪಟ್ಟಿಯನ್ನು ನಾವಿಂದು ನಿಮ್ಮ ಮುಂದಿಡುತ್ತಿದ್ದೇವೆ. ಎಷ್ಟೇ ಪ್ರೀತಿ ಪಾತ್ರರಿರಲಿ ಇಲ್ಲಿ ನೀಡಲಾಗಿರುವ ವಸ್ತುಗಳನ್ನು ಅವರೊಂದಿಗೆ ಹಂಚಿಕೊಳ್ಳುವುದು ನಿಷಿದ್ಧ!

1. ಲಿಪ್‌ಸ್ಟಿಕ್‌
ಕಾಲೇಜಿಗೋ, ಕಚೇರಿಗೋ ಇಲ್ಲಾ ಔಟಿಂಗಿಗೋ ಹೊರಡುವ ಭರದಲ್ಲಿ ಕೈಗೆ ಸಿಕ್ಕ ಲಿಪ್‌ಸ್ಟಿಕ್‌ ಯಾರದೆಂದೂ ನೋಡದೆ ಹಚ್ಚಿಕೊಂಡು ಓಡುವುದು ನಡೆಯುತ್ತೆ. ಈ ಮಂದಿಗೆ ಒಂದು ವಿಚಾರ ತಿಳಿದಿಲ್ಲ. ಆ ಲಿಪ್‌ಸ್ಟಿಕ್‌ ನಿಮ್ಮದಲ್ಲದಿದ್ದರೆ ಬ್ಯಾಕ್ಟೀರಿಯಾಗಳು ನಿಮ್ಮ ತುಟಿಯ ಮೂಲಕ ಬಾಯಿಯನ್ನು ಪ್ರವೇಶಿಸುತ್ತೆ. ಆ ಮೂಲಕ ರಕ್ತವನ್ನು ಸೇರಿ ಅನಾರೋಗ್ಯ ತರುವ ಸಾಧ್ಯತೆ ಇರುತ್ತೆ.

2. ಟ್ರಿಮ್ಮರ್‌
ಈ ವಸ್ತುವನ್ನು ಹೆಚ್ಚಾಗಿ ಪುರುಷರೇ ಬಳಸುವುದರಿಂದ ಮಹಿಳೆಯರು ಚಿಂತಿಸಬೇಕಿಲ್ಲ. ಆದರೆ ಕೆಲ ಸಂದರ್ಭಗಳಲ್ಲಿ ಹೆಂಗಸರೂ ಬಳಸುವುದರಿಂದ ಇನ್ನೊಬ್ಬರ ಟ್ರಿಮ್ಮರ್‌ ಏಕೆ ಬಳಸಬಾರದು ಎನ್ನುವುದನು ತಿಲಿದುಕೊಳ್ಳಬೇಕಾದ್ದು ಅವಶ್ಯಕ. ಮುಖದ ಮೇಲೆ ತುರಿಕೆಯುಂಟಾಗಿ ಗುಳ್ಳೆಗಳು, ಮೊಡವೆಗಳು ಉಂಟಾಗಬಹುದು. 

3. ಟವೆಲ್‌
ಒಂದೇ ಮನೆಯಲ್ಲಿದ್ದಾಗ ಇತರೆ ಸದಸ್ಯರ ಟವೆಲ್ಲುಗಳನ್ನು ಬಳಸುವುದು ಸಾಮಾನ್ಯವಾಗಿ ನಡೆಯುತ್ತೆ. ಆದರೆ ಹೀಗೆ ಮಾಡುವುದರಿಂದ ಫ‌ಂಗಸ್‌ ಇನ್‌ಫೆಕ್ಷನ್‌ ಹರಡುತ್ತೆ. ಮತ್ತು ಇತರರಿಗೆ ಚರ್ಮ ಖಾಯಿಲೆಗಳಿದ್ದಲ್ಲಿ ಅದೂ ಹರಡುವ ಸಾಧ್ಯತೆ ಇರುತ್ತೆ.

Advertisement

4. ಇಯರ್‌ಫೋನ್‌ 
ಇಯರ್‌ಪೋನನ್ನು ಮನೆಯಲ್ಲಿಯೇ ಮರೆತುಬಂದ ಸಂದರ್ಭದಲ್ಲಿ ಗೆಳೆಯ ಗೆಳತಿಯರ ಬಳಿ ಕೇಳಿ ಪಡೆದು ಮೊಬೈಲಿನಲ್ಲಿ ಹಾಡು ಕೇಳುವುದು ವಾಡಿಕೆ. ಆದರೆ ಇನ್ನೊಬ್ಬರ ಇಯರ್‌ಫೋನ್‌ ಬಳಸುವುದರಿಂದ  ಕಿವಿಯ ಸಮಸ್ಯೆಗಳು ತಲೆದೋರಬಹುದು. ಏಕೆಂದರೆ ಇಯರ್‌ಪೋನನ್ನು ಕಿವಿಯ ಒಳಗೆ ತೂರಿಸುವುದರಿಂದ ಈ ಸಮಸ್ಯೆ ಬರುತ್ತೆ. ಅದರಲ್ಲೂ ಹೊಸ ಬಗೆಯ ಪ್ಲಗ್‌ ಶೈಲಿಯ ಇಯರ್‌ಫೋನುಗಳಲ್ಲಿ ಈ ಅಪಾಯ ಹೆಚ್ಚು.

5. ರೇಜರ್‌, ಬ್ಲೇಡು
ಈ ಸಂಗತಿ ಬಹುತೇಕ ಎಲ್ಲರಿಗೂ ತಿಳಿದಿರುತ್ತೆ. ಒಮ್ಮೆ ಬಳಸಿದ ರೇಜರ್‌, ಬ್ಲೇಡುಗಳನ್ನು ಇನ್ನೊಮ್ಮೆ ಬಳಸುವುದರಿಂದ ಗಂಭೀರ ಖಾಯಿಲೆಗಳು ಹರಡುತ್ತವೆ. ಪುರುಷರಿಗೆ ಹೋಲಿಸಿದರೆ ಮಹಿಳೆಯರು ಇದನ್ನು ಬಳಸುವುದು ಕಡಿಮೆಯಾದರೂ ತಿಳಿದುಕೊಂಡಿರಬೇಕಾದ್ದು ಕಡ್ಡಾಯ.

6. ಸೋಪು
ಕೊಳೆಯನ್ನು ಹೋಗಲಾಡಿಸುವುದರಿಂದ ಸೋಪು ಹೈಜೀನಿಕ್‌ ಎಂಬ ಭಾವ ನಮ್ಮಲ್ಲಿದೆ. ಇದೇ ಕಾರಣಕ್ಕೆ ಇನ್ನೊಬ್ಬರು ಬಳಸಿದ್ದರೂ “ಸೋಪು ತಾನೇ, ಪರವಾಗಿಲ್ಲ’ ಎಂದು ನಿರ್ಲಕ್ಷ್ಯ ತೋರಿ ಬಳಸಿಬಿಡುತ್ತೇವೆ. ಇದು ತಪ್ಪು. ಇದರಿಂದ ಚರ್ಮ ಖಾಯಿಲೆಗಳಲ್ಲದೆ, ಹೊಟ್ಟೆ ನೋವು ಕೂಡಾ ಬಾಧಿಸಬಹುದು.

7. ಟೂತ್‌ ಬ್ರಶ್‌
ಮೇಲೆ ಲಿಪ್‌ಸ್ಟಿಕ್‌ ವಿಚಾರದಲ್ಲಿ ಹೇಳಿದಂತೆಯೇ ಇಲ್ಲೂ ಕೂಡ ಬ್ಯಾಕ್ಟೀರಿಯಾ ನೇರವಾಗಿ ಬಾಯಿ ಒಳಗೆ ಪ್ರವೇಶ ಪಡೆಯುತ್ತವೆ. ಈ ಕಾರಣಕ್ಕೇ ಇನ್ನೊಬ್ಬರ ಬ್ರಶ್‌ ಅನ್ನು ನಾವು ಬಳಸುವುದು ಸರಿಯಲ್ಲ. ಒಂದು ಪಕ್ಷ ಒಂದೇ ಟೂತ್‌ಪೇಸ್ಟ್‌ ಅನ್ನು ಹಂಚಿಕೊಳ್ಳಬಹುದು ಆದರೆ ಟೂತ್‌ಬ್ರಶ್‌ ಮಾತ್ರ ಬೇಡ.

8. ಕಿವಿಯೋಲೆ
ಹುಡುಗಿಯರು ತಮ್ಮ ತಮ್ಮ ಆಭರಣಗಳನ್ನು ಎಕ್ಸ್‌ಚೇಂಜ್‌ ಮಾಡಿಕೊಂಡು ಧರಿಸುತ್ತಾರೆ. ಅದರಲ್ಲೂ ಕಿವಿಯೋಲೆಗಳನ್ನು ತುಂಬಾ ಕಾಮನ್‌ ಎಂಬಂತೆ ಅದಲುಬದಲು ಮಾಡಿಕೊಂಡು ಧರಿಸುತ್ತಾರೆ. ಹೀಗೆ ಮಾಡುವುದರಿಂದ ರಕ್ತಸಂಬಂಧಿ ಖಾಯಿಲೆಗಳು ಹರಡಬಹುದು.

9. ಮೈಯುಜ್ಜುವ ಬ್ರಶ್‌ 
ಮೈಯುಜ್ಜುವ ಬ್ರಶ್‌ ಅನ್ನು ಕೂಡಾ ಮುಲಾಜೇ ಇಲ್ಲದೇ ಒಂದೇ ಮನೆಯವರು ಹಂಚಿಕೊಳ್ಳುವ ಪರಿಪಾಠವಿದೆ ಕೆಲ ಮನೆಗಳಲ್ಲಿ. ಅದರಲ್ಲಿ ಹಳೆ ಕೊಳೆ ನಿಲ್ಲುವುದರಿಂದ ಒಬ್ಬರಿಂದ ಮತ್ತೂಬ್ಬರಿಗೆ ಹರಡುತ್ತಾ, ಉಗುರಿನ ಇನ್‌ಪೆಕ್ಷನ್‌ ಮತ್ತು ಚರ್ಮ ಖಾಲಿಯೆಗಳಿಗೆ ಕಾರಣವಾಗಬಹುದು. 

Advertisement

Udayavani is now on Telegram. Click here to join our channel and stay updated with the latest news.

Next