Advertisement
ನಗರದ ಅಂಬೇಡ್ಕರ್ ಭವನದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಚಿತ್ರೋದ್ಯಮ ಶುಕ್ರವಾರ ಆಯೋಜಿಸಿದ್ದ “ಅಂಬಿ ನಮನ’ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಯಾವುದೇ ಕೆಲಸ ಮಾಡಬೇಕಾದರೆ ಯೋಚನೆ ಮಾಡಬೇಕು. ಹಾಗೆಯೇ, ಪದಬಳಕೆಯೂ ಮುಖ್ಯವಾಗುತ್ತೆ. ನಾವು ಯಾರಿಗೂ ನೋವು ಕೊಡುವುದಿಲ್ಲ. ಯಾರನ್ನೂ ಅವಮಾನಿಸುವ ಉದ್ದೇಶವೂ ಇಲ್ಲ’ ಎಂದು ಅಭಿಪ್ರಾಯಪಟ್ಟರು.
“ಅಂಬರೀಶ್ ನನಗೆ ಅಣ್ಣನ ರೀತಿ ಇದ್ದರು. ನನ್ನ ವೈಯಕ್ತಿಕ ಜೀವನದಲ್ಲಿ ಬಡವರ ಮತ್ತು ತಾಯಂದಿರ ಬಗ್ಗೆ ಅಪಾರ ಪ್ರೀತಿ, ಕಾಳಜಿಯನ್ನು ಅಳವಡಿಸಿಕೊಳ್ಳಲು ಪ್ರೇರಣೆಯಾಗಿದ್ದು, ನನ್ನ ತಂದೆ, ತಾಯಿ ಬಿಟ್ಟರೆ, ಡಾ.ರಾಜಕುಮಾರ್ ಅವರ ಚಿತ್ರಗಳು. ಇನ್ನು, ಸ್ನೇಹ ಅಂದರೆ ಏನೆಂಬುದನ್ನು ಕಲಿತದ್ದು ಅಂಬರೀಶ್ ಅವರ ಜೊತೆಗಿನ ಒಡನಾಟದಿಂದ. ರಾಜ್ ಮತ್ತು ಅಂಬರೀಶ್ ಅವರು ನಾನು ಸಿಎಂ ಆಗಿದ್ದಾಗ ಅಗಲಿದ್ದು, ಲಕ್ಷಾಂತರ ಅಭಿಮಾನಿಗಳ ಜೊತೆಗೂಡಿ ಅವರ ಅಂತ್ಯಕ್ರಿಯೆ ನೆರವೇರಿಸುವಂತಹ ಕೆಲಸ ಸರ್ಕಾರಕ್ಕೆ ಸಿಕ್ಕಿದ್ದು, ಅದೃಷ್ಟವೋ, ದುರಾದೃಷ್ಟವೋ ಗೊತ್ತಿಲ್ಲ. 12 ವರ್ಷಗಳ ಹಿಂದೆ ಡಾ.ರಾಜ್ ನಿಧನರಾದಾಗ, ನಾನು ಸಿಎಂ ಆಗಿದ್ದೆ. ಆಗ ಒಂದಷ್ಟು ಗೊಂದಲವಾಗಿತ್ತು. ಆ ನೋವು ಈಗಲೂ ನನ್ನ ಮನಸ್ಸಲ್ಲಿದೆ. ಕಾರಣ, ಸರಿಯಾದ ಸಿದ್ಧತೆ ಮಾಡಿಕೊಳ್ಳಲು ಆಗಲಿಲ್ಲ. ಅದಕ್ಕೆ ಮೂಲ ಕಾರಣ ನಾನಲ್ಲ’ ಎಂದು ಹೇಳಿದರು.
Related Articles
Advertisement
ಅಂಬಿ ಸ್ನೇಹಜೀವಿ:ಮಾಜಿ ಸಿಎಂ ಸಿದ್ಧರಾಮಯ್ಯ ಮಾತನಾಡಿ,”ಅಂಬರೀಶ್ 1973ರಿಂದ ಪರಿಚಿತರು. ಆಗ ನಾನು ವಕೀಲನಾಗಿದ್ದೆ. ಇಬ್ಬರ ಪರಿಚಯ ಆಗಿದ್ದು ಒಂದು ಹೋಟೆಲ್‌ನಲ್ಲಿ. ಅವರ ಮಾತು ಒರಟು. ಆದರೆ, ಅವರೊಂದಿಗೆ ಸ್ವಲ್ಪ ಸಮಯ ಕಳೆದರೆ, ಅವರ ಹೃದಯ ಎಂಥದ್ದು ಎಂಬುದು ಗೊತ್ತಾಗುತ್ತಿತ್ತು. ಅವರೊಬ್ಬ ಸ್ನೇಹ ಜೀವಿ. ದೊಡ್ಡವರಿರಲಿ, ಚಿಕ್ಕವರಿರಲಿ, ಶ್ರೀಮಂತರಾಗಲಿ, ಬಡವರಾಗಲಿ ತಾರತಮ್ಯ ಇಲ್ಲದೆ, ಸ್ನೇಹ ಸಂಪಾದಿಸುತ್ತಿದ್ದರು. ಸಿನಿಮಾ, ರಾಜಕೀಯ ಎರಡು ಕ್ಷೇತ್ರದಲ್ಲೂ ಎತ್ತರಕ್ಕೆ ಬೆಳೆದವರು. ಬಹುಶ: ಅವರಿಗೆ ವೈರಿಗಳೇ ಇರಲಿಲ್ಲ. ಚಿತ್ರರಂಗದಲ್ಲಿ ಯಾವುದೇ ಸಮಸ್ಯೆ ಬಂದರೂ, ಅದನ್ನು ಬಗೆಹರಿಸುವ ಮುಂದಾಳತ್ವ ವಹಿಸಿ, ಅಲ್ಲಿ ಸಮಸ್ಯೆಯನ್ನು ಇತ್ಯರ್ಥಪಡಿಸುತ್ತಿದ್ದರು ಎಂದು ನೆನಪಿಸಿಕೊಂಡರು. ಅವರಿಗೆ ಕಲಾವಿದರ ಸಂಘದ ಕಟ್ಟಡ ನಿರ್ಮಿಸುವ ಆಸೆ ಬಹಳ ಇತ್ತು. ಒಮ್ಮೆ, ನನ್ನ ಬಳಿ ಬಂದು, “ಬಾಸ್ ನಾನು ನಿಮಗೊಂದು ಲೆಟರ್ ಕೊಡ್ತೀನಿ. ಆದರೆ, ದುಡ್ಡು ಕೊಡ್ತೀನಿ ಅಂದ್ರೆ ಮಾತ್ರ’ ಅಂದ್ರು. ಆಗ, ನಾನು ಸರಿ ಹೇಳಪ್ಪ, ಏನು, ಅಂದಾಗ, ಕಟ್ಟಡಕ್ಕೆ 5 ಕೋಟಿ ರೂ.ಅನುದಾನ ಕೊಡಿ ಅಂದ್ರು, ನಾನು ತಕ್ಷಣ 2 ಕೋಟಿ ರೂ.ಕೊಟ್ಟು, ಉಳಿದ ಹಣ ಆಮೇಲೆ ಬಿಡುಗಡೆ ಮಾಡ್ತೀನಿ ಅಂದೆ. ಅವರಿಗೆ ಸಂಘದ ಕಟ್ಟಡ ಕಟ್ಟಿಸಿ, ಅದನ್ನು ನನ್ನ ಕೈಯಿಂದಲೇ ಉದ್ಘಾಟನೆ ಮಾಡಿಸಬೇಕೆಂಬ ಆಸೆ ಇತ್ತು. ಕೊನೆಗೆ, ನನ್ನ ಕೈಯಿಂದಲೇ ಉದ್ಘಾಟನೆ ಮಾಡಿಸಿದರು ಎಂದು ಅಂಬಿ ಜೊತೆಗಿನ ನೆನಪನ್ನು ಮೆಲುಕು ಹಾಕಿದರು. ನಿರ್ಮಲಾನಂದ ಶ್ರೀ, ಸುಮಲತಾ ಅಂಬರೀಶ್, ನಟರಾದ ಜಗ್ಗೇಶ್, ಶಿವರಾಜಕುಮಾರ್, ಹಿರಿಯ ನಟಿಯರಾದ ಸರೋಜಾದೇವಿ, ಜಯಂತಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಸ್.ಎ.ಚಿನ್ನೇಗೌಡ ಅಂಬರೀಶ್ ಅವರ ನೆನಪನ್ನು ಮೆಲುಕು ಹಾಕಿದರು. ಚಿತ್ರರಂಗದ ಕಲಾವಿದರು, ಉದ್ಯಮಿಗಳು, ನಿರ್ಮಾಪಕ, ನಿರ್ದೇಶಕರು ಹಾಜರಿದ್ದರು. ಕರ್ನಾಟಕ ಸರ್ಕಾರ ಕಲಾವಿದರಿಗೆ ಗೌರವ ನೀಡಿದಷ್ಟು ಬೇರೆ ಯಾವ ರಾಜ್ಯ ಸರ್ಕಾರವೂ ನೀಡಿಲ್ಲ. ಇದು ಸರ್ಕಾರ ಕಲೆಗೆ, ಕಲಾವಿದರಿಗೆ ನೀಡುತ್ತಿರುವ ಪ್ರೋತ್ಸಾಹ.
– ಮುನಿರತ್ನ, ಶಾಸಕ, ನಿರ್ಮಾಪಕರ ಸಂಘದ ಅಧ್ಯಕ್ಷ.