ರಾಂಚಿ: ಝಾರ್ಖಂಡ್‌ನ ದೇವಗಢದಲ್ಲಿ ರವಿವಾರ ಸಂಜೆ ನಡೆದ ಕೇಬಲ್ ಕಾರ್ ಅಪಘಾತದಿಂದಾಗಿ ರೋಪ್‌ವೇನಲ್ಲಿ ಸಿಲುಕಿಕೊಂಡಿದ್ದ ಎಲ್ಲ 60 ಮಂದಿಯನ್ನು ರಕ್ಷಣ ಪಡೆ ಸಿಬಂದಿ ರಕ್ಷಿಸಿದ್ದಾರೆ.
ಮಂಗಳವಾರ ರಕ್ಷಣ ಕಾರ್ಯಾ ಚರಣೆ ವೇಳೆ ಹಗ್ಗ ತುಂಡಾಗಿ ಮಹಿಳೆಯೊಬ್ಬರು ಕೆಳಗೆ ಬಿದ್ದಿದ್ದು, ಮೃತರ ಸಂಖ್ಯೆ 3ಕ್ಕೆ ಏರಿದೆ. ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ರಕ್ಷಣೆ ಕಾರ್ಯಾಚರಣೆ ಮುಕ್ತಾಯವಾಗಿದೆ.
“ಕುಡಿಯುವುದಕ್ಕೆ ನೀರೂ ಸಿಗುವುದಿಲ್ಲವೇನೋ ಎನ್ನುವ ಭಯವಾಗಿತ್ತು. ಅದಕ್ಕಾಗಿ ನಾವು ಬಾಟಲಿಯಲ್ಲೇ ಮೂತ್ರ ಮಾಡಿ, ಕುಡಿಯು ವುದಕ್ಕೆಂದು ಸಂಗ್ರಹಿಸಿಟ್ಟುಕೊಂಡಿದ್ದೆವು’ ಎಂದು ಕೇಬಲ್ ಕಾರ್‌ನಲ್ಲೇ 46 ಗಂಟೆಗಳ ಕಾಲ ಸಿಲುಕಿದ್ದ ವಿನಯ್ ಕುಮಾರ್ ದಾಸ್ ಹೇಳಿದ್ದಾರೆ.
ಇನ್ನೊಂದತ್ತ ಒಂದು ಕೇಬಲ್ ಕಾರ್‌ನಲ್ಲಿ ಇಬ್ಬರು ಮಕ್ಕಳು ಮಾತ್ರವೇ ಸಿಲುಕಿದ್ದು, ಸೋಮವಾರ ರಾತ್ರಿಯಿಡೀ ಅವರಿಬ್ಬರೇ ಅಲ್ಲಿ ಉಳಿಯ ಬೇಕಾಗುತ್ತದೆ ಎಂಬ ಕಾರಣಕ್ಕೆ, ಗರುಡ ಕಮಾಂಡೋ ವೊಬ್ಬರು ಕೇಬಲ್ ಕಾರ್‌ನಲ್ಲೇ ಇದ್ದು, ಮಕ್ಕಳಿಗೆ ಸಾಂತ್ವನ ಹೇಳುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.