ಪೋರ್ಟ್ ಆಫ್ ಸ್ಪೇನ್: ಕುಂಬ್ಳೆ ಜತೆಗಿನ ವಿವಾದ ಕುರಿತಂತೆ ಪ್ರತಿಕ್ರಿಯಿಸಲು ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಡ್ರೆಸ್ಸಿಂಗ್ ರೂಮ್‌ನ ವಿಷಯಗಳನ್ನು ಬಹಿರಂಗಪಡಿಸಲ್ಲ. ಅಲ್ಲಿನ ವಿಷಯಗಳಲ್ಲಿ ಗೌಪ್ಯತೆ ಹಾಗೂ ಪಾವಿತ್ರ್ಯತೆ ಕಾಪಾಡಿಕೊಳ್ಳಲು ಇಷ್ಟಪಡುತ್ತೇನೆ ಎಂದು ಕೊಹ್ಲಿ ತಿಳಿಸಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧ ಮೊದಲ ಏಕದಿನ ಪಂದ್ಯಕ್ಕೂ ಮೊದಲು ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಇದು ಕುಂಬ್ಳೆ ಜತೆಗಿನ ವಿವಾದಕ್ಕೆ ಸಂಬಂಧಪಟ್ಟಂತೆ ಮೊದಲ ಬಾರಿಗೆ ನಾಯಕನ ಬಹಿರಂಗ ಹೇಳಿಕೆಯಾಗಿದೆ ಎನ್ನುವುದು ವಿಶೇಷ.
ಒಬ್ಬ ಆಟಗಾರನಾಗಿ ಅನಿಲ್ ಬಾಯ್ (ಸಹೋದರ) ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅದು ಅವರ ವೈಯಕ್ತಿಕ ನಿರ್ಧಾರ.
ದೇಶಕ್ಕಾಗಿ ಅವರು ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಈ ಬಗ್ಗೆ ನನಗೆ ಗೌರವವಿದೆ. ಚಾಂಪಿಯನ್ಸ್ ಟ್ರೋಫಿ
ವೇಳೆ 11 ಪತ್ರಿಕಾಗೋಷ್ಠಿ ಆಗಿದೆ. ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೇ ನಡೆದಿರಬಹುದು. ಆದರೆ ಕಳೆದ 3-4 ವರ್ಷಗಳಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಏನೋ ನಡೆದಿದೆಯೋ ಈ ಬಗ್ಗೆ ಈ ಬಗ್ಗೆ ಪಾವಿತ್ರ್ಯತೆ ಕಾಪಾಡಿ ಕೊಂಡು ಬರುವ ಅವಶ್ಯಕತೆ ಇದೆ.