Advertisement

ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ: ಶಾಸಕ ಸುರೇಶ್ ಸ್ಪಷ್ಟೀಕರಣ

12:17 PM May 27, 2021 | Team Udayavani |

ಚಿಕ್ಕಮಗಳೂರು: ಅಪಘಾತವಾಗಿ ಅರೋಗ್ಯಾಧಿಕಾರಿ ರಸ್ತೆ ಪಕ್ಕ ಬಿದ್ದು ನರಳಾಡಿ ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದು, ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿಂದ ಕೆಳಗೆ ಇಳಿಯಲಿಲ್ಲ ಎಂದು ತಿಳಿಸಿದ್ದಾರೆ.

Advertisement

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಕ್ರಾಸ್ ಬಳಿ ನಡೆದ ಅಪಘಾತವೊಂದರಲ್ಲಿ, ಲಕ್ಕವಳ್ಳಿ ಪ್ರಾರ್ಥಮಿಕ ಆರೋಗ್ಯ ಕೇಂದ್ರದ ಆರೋಗ್ಯಾಧಿಕಾರಿ ರಮೇಶ್, ರಕ್ತದ ಮಡುವಿನಲ್ಲಿ ರಸ್ತೆಯಲ್ಲಿ ಸುಮಾರು ಅರ್ಧ ಗಂಟೆ ಒದ್ದಾಡಿದ್ದರು. ಆದರೆ ಅಲ್ಲೇ ಇದ್ದ ತರೀಕೆರೆ ಶಾಸಕ ಸುರೇಶ್ ಅವರು ಕಾರಿನಿಂದ ಇಳಿಯಲೇ ಇಲ್ಲ. ಶಾಸಕರ ಗನ್ ಮ್ಯಾನ್ ಕಾರಿನಿಂದ ಇಳಿದು ಬಂದರೂ ಶಾಸಕರು ಮಾತ್ರ ಕಾರಿನಿಂದ ಇಳಿದು ಸಹಾಯ ಮಾಡುವ ಮನಸು ಮಾಡಲೇ ಇಲ್ಲ!

ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿದ್ದರಿಂದ ಘಟನೆ ಕುರಿತು ಶಾಸಕ ಡಿ.ಎಸ್ ಸುರೇಶ್ ಸ್ಪಷ್ಟೀಕರಣ ನೀಡಿದ್ದಾರೆ. ನನಗೆ ಕಣ್ಣು ನೋವು ಇದ್ದಿದ್ದರಿಂದ ಕಾರಿನಿಂದ ಕೆಳಗೆ ಇಳಿಯಲಿಲ್ಲ. ನಾನು ನಿದ್ರೆಗೆ ಜಾರಿದ್ದು, ನನ್ನ ಕಾರಿನ ಡ್ರೈವರ್ ಹೋಗಿ ನೋಡಿದ್ದಾರೆ. ಮಾತ್ರವಲ್ಲದೆ ಕೆಲವೇ ನಿಮಿಷಗಳಲ್ಲಿ ಗಾಯಾಳು ಆರೋಗ್ಯಾಧಿಕಾರಿಯನ್ನು ಆಂಬುಲೆನ್ಸ್ ನಲ್ಲಿ ಕಳಿಸಿದ್ದಾರೆಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ:  ನನ್ನ ಬಂಧಿಸುವ ಧೈರ್ಯ ಯಾರಿಗೂ ಇಲ್ಲ: ಐಎಂಎಗೆ ಸೆಡ್ಡುಹೊಡೆದ ಬಾಬಾ ರಾಮ್ ದೇವ್

Advertisement

ಘಟನೆ  ವೇಳೆ ಕೆಲ ಕಿಡಿಗೇಡಿಗಳು ವಿಡಿಯೋ ಮಾಡಿದ್ದಾರೆ. ಅದರ ಜೊತೆಗೆ ವಿಡಿಯೋದಲ್ಲಿ ನಾನು ಸಹಾಯಕ್ಕೆ ಧಾವಿಸುತ್ತಿಲ್ಲ ಅಂತಾ ಆರೋಪಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸುವಂತೆ ಪೊಲೀಸರಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ:   ಯೂಟ್ಯೂಬ್ ಚಾನೆಲ್ ಗಾಗಿ ಹೈಡ್ರೋಜನ್ ಬಲೂನ್ ಕಟ್ಟಿ ನಾಯಿಯನ್ನು ಹಾರಿಸಿದ ವ್ಯಕ್ತಿ ಬಂಧನ!

Advertisement

Udayavani is now on Telegram. Click here to join our channel and stay updated with the latest news.

Next