Advertisement
ಸಮೀಪದ ಮಂಚಿಕೊಪ್ಪದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನ್ನ ಜೀವನದಲ್ಲಿ ಸಾಕಷ್ಟು ಘಟನೆಗಳು ನಡೆದಿವೆ. ನನಗಾದ ನೋವನ್ನು ರಾಜ್ಯದ ಜನರ ಬಳಿ ತೋಡಿಕೊಂಡಿದ್ದೇನೆ. ಆ ಸಂದರ್ಭದಲ್ಲಿ ನನ್ನ ಜತೆ ಇದ್ದ ಬಸವರಾಜ ಹೊರಟ್ಟಿ ಹಾಗೂ ಪುಟ್ಟರಾಜು ಅವರಿಗೆ ಮಾತ್ರ ನನಗೆ ಏನಾಗಿತ್ತು ಎಂಬುದು ಗೊತ್ತು’ ಎಂದರು. “ನಾನು ರಾಜ್ಯದ ರೈತರ ಸಾಲಮನ್ನಾ ಮಾಡುವುದಿಲ್ಲಎಂದು ಎಲ್ಲಿಯೂ ಹೇಳಿಲ್ಲ. ಈಗಾಗಲೇ ಸಹಕಾರ ಬ್ಯಾಂಕಿನಲ್ಲಿರುವ ರಾಜ್ಯದ ರೈತರ ಸಾಲವನ್ನು ಮನ್ನಾ ಮಾಡಿದ್ದೇನೆ. ರಾಷ್ಟ್ರೀಕೃತ ಬ್ಯಾಂಕ್‌ಗಳ ಸಾಲ ಕೂಡ ಮನ್ನಾ ಮಾಡಲಾಗಿದೆ. ನ.1ರಂದು ರಾಜ್ಯದ ರೈತರಿಗೆ ಋಣಮುಕ್ತ ಪತ್ರವನ್ನು ಕಳುಹಿಸಲಾಗುತ್ತಿದೆ. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ಸಾಲಮನ್ನಾ ವಿಚಾರದಲ್ಲಿ ಬಿಜೆಪಿಯವರು ಸುಳ್ಳು ಹೇಳುತ್ತಿದ್ದಾರೆ.
● ಎಚ್.ಡಿ.ಕುಮಾರಸ್ವಾಮಿ, ಸಿಎಂ.
Related Articles
ಶಿವಮೊಗ್ಗ: “ಸಿಎಂ ಕುಮಾರಸ್ವಾಮಿ ಅವರ ಮೇಲೆ ನನಗೆ ವಿಶ್ವಾಸವಿದೆ. ಅವರು ಇನ್ನಷ್ಟು ಹೆಚ್ಚು ಕಾಲ ಬದುಕಲಿ. ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಲಿ’ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಸಲಹೆ ನೀಡಿದ್ದಾರೆ. ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುಮಾರಸ್ವಾಮಿಗೆ ಬರೆದ ಪತ್ರ ಬಿಡುಗಡೆ ಮಾಡಿದರು. “ಇಸ್ರೇಲ್‌ನಿಂದ ಬರುವಾಗ ಸಾಯುತ್ತಿದ್ದೆ ಎಂದು ಕುಮಾರಸ್ವಾಮಿ ಅವರು ಹೇಳಿರುವುದು ನನಗೆ ನೋವು ತಂದಿದೆ. ಅವರು ಈ ರೀತಿ ಹೇಳಿಕೆ ಕೊಡಬಾರದು. ರೈತರಿಗೆ,
ಸಾರ್ವಜನಿಕರಿಗೆ ಆತ್ಮಸ್ಥೈರ್ಯ ತುಂಬಬೇಕು. ಸಾಲ ಮನ್ನಾ ಮಾಡಲಿ. ಆಗ ಜನರೇ ನಿಮಗೆ ಆಶೀರ್ವಾದ ಮಾಡುತ್ತಾರೆ. ಇನ್ನು 20, 30 ವರ್ಷಗಳ ಕಾಲ ಬಾಳಿ ಬದುಕಲಿ’ ಎಂದರು.
Advertisement
ಕುಮಾರಸ್ವಾಮಿ ಶಿವಮೊಗ್ಗಕ್ಕೆ ಬರುತ್ತಿರುವುದು ಸಂತೋಷದ ವಿಷಯ. ಅವರು ಇಲ್ಲಿಂದ ಹೊರಡುವಷ್ಟರಲ್ಲಿ ನನ್ನ ಬಹಿರಂಗ ಪತ್ರಕ್ಕೆ ಸಾಧ್ಯವಾದರೆ ಉತ್ತರ ಕೊಟ್ಟರೆ ಸಂತೋಷ. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದು ಎರಡು ತಿಂಗಳಾಗಿದೆ. ಈವರೆಗೂ ಮೇಯರ್,ಉಪಮೇಯರ್, ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆ ಆಗಿಲ್ಲ. ತಕ್ಷಣ ಚುನಾವಣೆ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದರು.
ಕಣ್ಣೀರು ಹಾಕೋ ಮುಖ್ಯಮಂತ್ರಿ ಬೇಡಶಿರಾಳಕೊಪ್ಪ: ರಾಜ್ಯಕ್ಕೆ ಬಡವರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಬೇಕೇ ವಿನಃ ಕಣ್ಣೀರು ಸುರಿಸುವ ಮುಖ್ಯಮಂತ್ರಿ ಬೇಡ ಎಂದು ಮಾಜಿ ಸಚಿವ, ಶಿಗ್ಗಾವಿ ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು. ಪಟ್ಟಣದ ಛತ್ರದಹಳ್ಳಿಯ ಸಮುದಾಯ ಭವನದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಕುಮಾರಸ್ವಾಮಿ ಹೋದ ಕಡೆಯಲ್ಲೆಲ್ಲಾ ಕಣ್ಣೀರು ಹಾಕುತ್ತಾರೆ. ಆದರೆ, ರಾಜ್ಯಕ್ಕೆ ಬಡವರ ಕಣ್ಣೀರು ಒರೆಸುವ ಮುಖ್ಯಮಂತ್ರಿ ಬೇಕೇ ವಿನಃ ಕಣ್ಣೀರು ಸುರಿಸುವ ಮುಖ್ಯಮಂತ್ರಿಯಲ್ಲ ಎಂದರು. ರೈತರ ಸಾಲಮನ್ನಾ ಮಾಡಿದ್ದೇವೆ ಎಂದು ಸರ್ಕಾರ ಸುಳ್ಳು ಪ್ರಚಾರ ಮಾಡುತ್ತಿದೆ. ಇದುವರೆಗೂ ಯಾವುದೇ ಸಾಲಮನ್ನಾ ಆಗಿಲ್ಲ. ರೈತರಿಗೆ ಕುಮಾರಸ್ವಾಮಿ ಸರ್ಕಾರ ಮಕ್ಮಲ್ ಟೋಪಿ ಹಾಕುವ ಕೆಲಸ ಮಾಡುತ್ತಿದೆ. ಲೋಕಸಭೆ ಉಪ ಚುನಾವಣೆ ಮುಗಿದು ಒಂದು ತಿಂಗಳಿನಲ್ಲಿ ಬಿ.ಎಸ್.ಯಡಿಯೂರಪ್ಪ ರಾಜ್ಯದ ಸಿಎಂ ಆಗಲಿದ್ದಾರೆ ಎಂದು ಭವಿಷ್ಯ ನುಡಿದರು.