ತೀರ್ಥಹಳ್ಳಿ : ರಾಜ್ಯ ರಾಜಕಾರಣದಲ್ಲಿಯೇ ಸಂಚಲನ ಸೃಷ್ಟಿಸಿದ್ದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್‌ಎಂ ಮಂಜುನಾಥ ಗೌಡ ಮತ್ತು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ರವರ ವೈಮನಸ್ಸು ಇದ್ದಾಗಲೂ ಇಬ್ಬರ ನಡುವೆ ಭಿನ್ನಾಭಿಪ್ರಾಯವಿದ್ದಾಗಲೂ ಕೂಡ ಆರ್ ಎಂಎಂ ಬೆನ್ನಿಗೆ ಚೂರಿ ಹಾಕಿಲ್ಲ ಎಂದು ನೇರವಾಗಿ ಹೇಳಿಕೆ ನೀಡಿದ್ದಾರೆ.
ಅವರು ಇಂದು ತೀರ್ಥಹಳ್ಳಿಯಲ್ಲಿ ಸಹಕಾರಿ ವೇದಿಕೆ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಡಾ.ಆರ್.ಎಂ ಮಂಜುನಾಥ್ ಗೌಡರಿಗೆ ಹೃದಯ ಸ್ಪರ್ಶಿ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪಕ್ಷದ ಸೂಚನೆಯಂತೆ ಹೊಂದಾಣಿಕೆ ಮಾಡಿಕೊಂಡು ಆರ್‌ಎಂ ಎಂ ಜೊತೆ ಹೆಜ್ಜೆ ಹಾಕುತ್ತಾ ಬಂದಿದ್ದೇನೆ.
ಆರ್ ಎಂ ಎಂ ರನ್ನ ವಿರೋಧಿಸುವ ವೇಳೆ ನೇರವಾಗಿ ವಿರೋಧಿಸಿರುವೆ. ಆದರೆ ಅವರ ಕಷ್ಟದ ಕಾಲದಲ್ಲಿ ಬೆನ್ನಿಗೆ ಚೂರಿ ಹಾಕುವ ಕೆಲಸ ನಾನು ಎಂದೂ ಮಾಡಿಲ್ಲ. ನಾನು ಹೆಚ್ಚಾಗಿ ವಿರೋಧಿಸಿರುವುದು ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರರನ್ನ ಎಂದು ಸ್ಪಷ್ಟಪಡಿಸಿದರು.
ಆರಗ ಜ್ಞಾನೇಂದ್ರರ ವಿರುದ್ಧದ ವಿರೋಧಗಳು ಸಹ ವ್ಯಕ್ತಿಗತವಾಗಿದ್ದಲ್ಲ, ಅವರ ವಿರುದ್ಧ ತಾತ್ವಿಕ ವಿರೋಧಗಳು ಮಾತ್ರ. ನನ್ನ ರಾಜಕೀಯ ವಿರೋಧಿ ಆರಗ ಜ್ಞಾನೇಂದ್ರ ಅಷ್ಟೇ. ನಾನು ಆರ್ ಎಂ ಎಂ ವಿರುದ್ಧ ಮಾತನಾಡೇ ಇಲ್ಲ. ಇನ್ನೂ ನಾನು ಅವರ ವಿರುದ್ಧ ಇದ್ದೇನೆ ಎಂಬ ಅನುಮಾನ ಕೆಲವರ ತಲೆಯಲ್ಲಿ ಇದ್ದರೆ ಅದಕ್ಕೆ ನಾನು ಜವಬ್ದಾರಿಯಲ್ಲ ಎಂದು ವೇದಿಕೆಯಲ್ಲಿ ತಿಳಿಸಿದರು.
ಸಾಗರ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಮಾತನಾಡಿ ತನಿಖೆಗಳನ್ನ ಎದುರಿಸಿ ವೇದಿಕೆ ಮೇಲೆ ರಾಜರಂತೆ ಆಸೀನರಾಗಿರುವ ಮಂಜುನಾಥ್ ಗೌಡರ ಭವಿಷ್ಯ ಮುಂದಿನ ದಿನಗಳಲ್ಲಿ ಉಜ್ವಲವಾಗಲಿದೆ.
ರಾಜಕೀಯದಲ್ಲಿ ನನ್ನನ್ನೂ ತುಳಿದಿದ್ದರು. ಆದರೆ ಈಗ ಜನ ಆಶೀರ್ವಾದ ಮಾಡಿದ್ದಾರೆ.
ಸಾಗರ ಕ್ಷೇತ್ರದಲ್ಲಿ ಟಿಕೇಟ್ ನನಗೆ ಕೊಡಿಸಲು ಮಂಜುನಾಥ್ ಗೌಡರು ಬೆಂಬಲಿಸಿದ್ದರು. ರಾಜಕೀಯ ಎಂಬುದು ನಿಂತ ನೀರಲ್ಲ. ಅವರಿಗೆ ಇನ್ನು ಅವಕಾಶವಿದೆ. ರಾಜಕೀಯ ವಿಷಯದಲ್ಲಿ ನಾನು ನಿಮ್ಮ ಜೊತೆ ಸದಾ ಇರುತ್ತೇನೆ. ಎಂದರು.