Advertisement

ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ : ಪ್ರತಾಪ್ ಸಿಂಹ

04:13 PM Oct 12, 2022 | Team Udayavani |

ಮೈಸೂರು: ನಾನು ಉದ್ದೇಶ ಪೂರ್ವಕವಾಗಿಯೇ ಟಿಪ್ಪು ಹೆಸರು ಬದಲಾಯಿಸಿದ್ದೇನೆ.ಮಹಾರಾಜರು ಮೈಸೂರಿಗೆ ಕೊಟ್ಟ ನೂರು ಕೊಡುಗೆಗಳನ್ನ ನಾನು ಹೇಳುತ್ತೇನೆ. ಟಿಪ್ಪು ಬೆಂಬಲಿಸುವವರು ಟಿಪ್ಪು ಕೊಟ್ಟ ಮೂರು ಕೊಡುಗೆಗಳನ್ನ ಹೇಳಲಿ ಸಾಕು ಎಂದು ಸಂಸದ ಪ್ರತಾಪ ಸಿಂಹ ಬುಧವಾರ ಹೇಳಿಕೆ ನೀಡಿದ್ದಾರೆ.

Advertisement

‘ಟಿಪ್ಪುಗೆ ಮೈಸೂರಿಗೆ ಏನು ಸಂಬಂಧ? ಟಿಪ್ಪು ವೇಣು ಮೈಸೂರಿನವನೇ? ಅವನು ಶ್ರೀರಂಗಪಟ್ಟಣದವನು. ಮೈಸೂರಿನಲ್ಲಿ ನಡೆದಿರುವ ಅಭಿವೃದ್ಧಿಯಲ್ಲಿ ರಾಜರ ಕೊಡುಗೆ ಇದೆ. ಒಂದು ಟ್ರೈನ್ ಗೆ ಇಟ್ಟ ಹೆಸರನ್ನ ಬದಲಾಯಿಸಿದ ಉದಾಹರಣೆಗಳೇ ಇಲ್ಲ.ಆದರೆ ಇದನ್ನ ಉದ್ದೇಶ ಪೂರ್ವಕವಾಗಿಯೇ ಪ್ರಯತ್ನ ಪಟ್ಟು ಬದಲಾಯಿಸಿದ್ದೇನೆ’ ಎಂದರು.

‘ಮೈಸೂರು ಮಹಾರಾಜರ ಬಗ್ಗೆ ಕೇವಲವಾಗಿ ಮಾತನಾಡುವ ಸಿದ್ದರಾಮಯ್ಯನವರಿಂದ ನಾವು ಪಾಠ ಕಲಿಯುವ ಅಗತ್ಯ ಇಲ್ಲ. ಟಿಪ್ಪು ಹೆಸರನ್ನ ಜನರ ಮನಸ್ಸಿನಿಂದ ತೆಗೆಯಲು ಆಗಲ್ಲ ಎನ್ನುವವರ ಹೆಸರನೇ ಜನ ಮರೆಯುತ್ತಿದ್ದಾರೆ. ಅದಕ್ಕೆ ಉದಾಹರಣೆ ಕೂಡ ಇದೆ. ನಾನು ಮೈಸೂರಿಗೆ 10 ಟ್ರೈನ್ ತಂದಿದ್ದೇನೆ. ಈ ದೇಶದ ಯಾವುದೇ ಸಂಸದ 10 ವರ್ಷದಲ್ಲಿ ಮಾಡದ ಸಾಧನೆಯನ್ನ ನಾನು ಮಾಡಿದ್ದೇನೆ’ ಎಂದರು.

‘ಟಿಪ್ಪು ಒಬ್ಬ ಕನ್ನಡ ವಿರೋಧಿ. ಟಿಪ್ಪು ಪರ್ಶಿಯನ್ ಭಾಷೆಯನ್ನ ಹೇರಿದ್ದಾನೆ. ದಿವಾನ್ ಪದ ಪರ್ಶಿಯನ್ ಪದ.ಕಂದಾಯ ಇಲಾಖೆಯಲ್ಲಿರುವ ಪ್ರತಿಯೊಂದು ಪದಗಳು ಪರ್ಶಿಯನ್ ಭಾಷೆಗೆ ಸೇರಿದ್ದು. ಸಿದ್ದರಾಮಯ್ಯ ಓದಿದ ವಿಶ್ವವಿದ್ಯಾನಿಲಯ ಕೂಡ ಮೈಸೂರು ಮಹಾರಾಜರು ಕಟ್ಟಿಸಿದ್ದು, ಆದರೆ ಸಿದ್ದರಾಮಯ್ಯ ಮಹರಾಜರ ಬಗ್ಗೆ ಉಡಾಫೆಯಿಂದ ಮಾತನಾಡುತ್ತಾರೆ‌’ ಎಂದು ಕಿಡಿ ಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next