Advertisement

BJP ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ, ದಾರಿ ತಪ್ಪಿಸಬೇಡಿ: ಜಮೀರ್‌

09:17 PM Nov 01, 2024 | Team Udayavani |

ಹೊಸಪೇಟೆ:ಮುಖ್ಯಮಂತ್ರಿ ಸಿದ್ದರಾಮಯ್ಯನವರು ರೈತರ ಜಮೀನುಗಳಿಗೆ ನೋಟಿಸ್‌ ಕೊಟ್ಟರೆ, ವಾಪಸ್‌ ಪಡೆಯಲು ಸೂಚಿಸಿದ್ದಾರೆ. ವಕ್ಫ್‌ನಿಂದ ರೈತರಿಗೆ ನೋಟಿಸ್‌ ಕೊಟ್ಟಿದ್ದರೆ, ವಾಪಸ್‌ ಪಡೆಯುತ್ತೇವೆ. ರೈತರು ಭಯಪಡುವ ಪ್ರಶ್ನೆಯೇ ಇಲ್ಲ ಎಂದು ವಕ್ಫ್‌ ಮತ್ತು ವಸತಿ ಸಚಿವ ಜಮೀರ್‌ ಅಹ್ಮದ್‌ ಖಾನ್‌ ಹೇಳಿದರು.

Advertisement

ನಗರದಲ್ಲಿ ಶುಕ್ರವಾರ (ನ1ರಂದು) ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯವರು ಎಲ್ಲರನ್ನೂ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ಸುಮ್ಮನೆ ಗೊಂದಲ ಸೃಷ್ಟಿಸುತ್ತಿದ್ದಾರೆ. ಬಿಜೆಪಿ ಸರ್ಕಾರದಲ್ಲೂ ವಕ್ಫ್ ಆಸ್ತಿ ತೆಗೆದುಕೊಂಡವರಿಗೆ ನೂರಾರು ನೋಟಿಸ್ ಕೊಟ್ಟಿದ್ದಾರೆ. ರೈತರಿಗೆ ನೋಟಿಸ್‌ ಕೊಟ್ಟಿದರೆ ವಾಪಸ್‌ ಪಡೆಯಲಾಗುತ್ತದೆ. ರೈತರು ಭಯಪಡುವ ಪ್ರಶ್ನೆಯೇ ಇಲ್ಲ. ನವೆಂಬರ್‌ 5 ಇಲ್ಲವೇ 6ರಂದು ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ಕರೆದು ಈ ಬಗ್ಗೆ ಮಾತನಾಡುವೆ ಎಂದು ಸ್ಪಷ್ಟಪಡಿಸಿದರು.

ಲವ್ ಜಿಹಾದ್ ರೀತಿ ಲ್ಯಾಂಡ್ ಜಿಹಾದ್ ನಡೀತಿದೆ ಎಂಬ ಸಿಟಿ ರವಿ ಆರೋಪದ ಕುರಿತು ಪ್ರತಿಕ್ರಿಯಿಸಿ,ಸಿಟಿ ರವಿ ರಾಜಕಾರಣ ಮಾಡಲು ಹೇಳಿಕೆ ಕೊಡುತ್ತಿದ್ದಾರೆ. ಸಿಟಿ ರವಿ ಅವರೇ ಸಚಿವರಾಗಿದ್ದಾಗ ನೋಟಿಸ್‌ ಕೊಡಲಾಗಿದೆ. ಬಿಜೆಪಿ ಸರ್ಕಾರದಲ್ಲೇ ರೈತರಿಗೆ ಸಾವಿರಾರು ನೋಟಿಸ್‌ ಕೊಡಲಾಗಿದೆ. ವಕ್ಫ್ ಆಸ್ತಿಯನ್ನ ಖಬರಸ್ಥಾನನಕ್ಕೆ, ಶ್ಮಶಾಸನಕ್ಕೆ ಕೊಡೋದಕ್ಕೆ ಅಭ್ಯಂತರ ಇಲ್ಲ ಎಂದರು.

ಹಾವೇರಿಯ ಸವಣೂರಿನ ಕಡಕೋಳದಲ್ಲಿ ಘಟನೆ ನಡೆದಿದೆ. ಇದರಿಂದ ನಮಗೂ ಬೇಸರ ಇದೆ. ಆ ಗ್ರಾಮದ ಜನರು ಎಲ್ಲರೂ ಅಣ್ಣ-ತಮ್ಮಂದಿರಂತೇ ಇದ್ದಾರೆ. ಒದೆ ತಿಂದವರೇ ದೂರು ಕೊಡಲು ಮುಂದೆ ಬರುತ್ತಿಲ್ಲ. ಸರ್ಕಾರ ಪರಿಸ್ಥಿತಿ ನಿಭಾಯಿಸಲಿದೆ ಎಂದರು.

ರೈತರ ಜಮೀನು ಯಾರು ತೆಗೆದುಕೊಳ್ಳಲು ಸಾಧ್ಯ ಇಲ್ಲ. ಸಚಿವರು ಹೇಳಿದಾರೆ ಅಂತ ಅಧಿಕಾರಿಗಳು ಯಾರದೋ‌ ಆಸ್ತಿಯನ್ನು ವಕ್ಫ್ ಗೆ ತೆಗೆದುಕೊಳ್ಳಲು ಸಾಧ್ಯನಾ? ವಿಜಯಪುರದ ಹಳ್ಳಿಯೊಂದರಲ್ಲಿ 1200 ಎಕರೆ ರೈತರ ಜಮೀನು ವಕ್ಫ್ ಆಸ್ತಿ ಮಾಡಿಕೊಳ್ತಿದ್ದಾರೆ ಎಂದು ಬಿಜೆಪಿಯವರು ಆರೋಪಿಸಿದರು. ಅಲ್ಲಿ ವಕ್ಫ್ ಆಸ್ತಿ ಇರೋದೆ 11 ಎಕರೆ, ಸುಖಾಸುಮ್ಮನೆ 1200 ಎಕರೆ ಅಂತಾ ಆರೋಪ ಮಾಡಿದ್ದಾರೆ. ಬಿಜೆಪಿಯವರು ಎಲ್ಲಾ ಕಡೆ ಜನರನ್ನು ಎತ್ತಿ ಕಟ್ಟೊ ಕೆಲಸ‌ ಮಾಡ್ತಿದ್ದಾರೆ.

Advertisement

ಬಿಜೆಪಿ ಸ್ನೇಹಿತರಿಗೆ ಕೈ ಜೋಡಿಸಿ ಮನವಿ ಮಾಡಿಕೊಳ್ಳುವೆ. ರಾಜಕೀಯ ಮಾಡುವಾಗ ರಾಜಕೀಯ ಮಾಡಿ, ಜನಗಳಿಗೆ ದಾರಿ ತಪ್ಪಿಸುವ ಕೆಲಸ ಮಾಡಬೇಡಿ. ರೈತರು ಯಾವ ಕಾರಣಕ್ಕೂ ಭಯ ಬೀಳಬಾರದು.ಹಾಗೇನಾದ್ರೂ ನೋಟಿಸ್ ಕೊಟ್ಟಿದ್ರೆ ವಾಪಸ್ ಪಡಿತೀವಿ ಎಂದರು.

ರಾಜ್ಯದಲ್ಲಿ ಶಕ್ತಿ ಯೋಜನೆ ಸ್ಥಗಿತಗೊಳಿಸಲಾಗುವುದಿಲ್ಲ. ಐದು ಗ್ಯಾರಂಟಿಗಳನ್ನು ಮುಂದುವರಿಸಲಾಗುವುದು. ಸಂಡೂರು ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ. ಸಚಿವ ಸಂತೋಷ್‌ ಲಾಡ್‌ ಹಾಗೂ ಸಂಸದ ತುಕಾರಾಂ ಅವರು ಉತ್ತಮ ಕೆಲಸ ಮಾಡಿದ್ದಾರೆ. ಮಾಜಿ ಸಚಿವ ಜನಾರ್ದನ ರೆಡ್ಡಿಅವರ ಬಗ್ಗೆ ಜನರಿಗೆ ಗೊತ್ತಿದೆ. ನಾನೇನು ಅವರ ಹೇಳಿಕೆ ಕುರಿತು ಹೆಚ್ಚಿಗೆ ಹೇಳ್ಬೇಕಿಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next