ಹೊಸದಿಲ್ಲಿ: ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಧ್ಯಕ್ಷ ನಾನೇ” ಎಂದು ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯ ನಂತರ ಶರದ್ ಪವಾರ್ ಇಂದು ಹೇಳಿದರು.
ಸೋದರಳಿಯ ಅಜಿತ್ ಪವಾರ್ ಅವರು ಪಕ್ಷದ ನಾಯಕ ಎಂದು ಪ್ರತಿಪಾದಿಸಿದ ದಿನಗಳ ನಂತರ ಶರದ್ ಪವಾರ್ ಈ ರೀತಿ ಹೇಳಿದ್ದಾರೆ.
ಅಜಿತ್ ಪವಾರ್ ಅವರು ಬುಧವಾರ ತನ್ನ ಚಿಕ್ಕಪ್ಪ ಶರದ್ ಪವಾರ್ ಈ ವಯಸ್ಸಿನಲ್ಲಿ ಪಕ್ಷದಲ್ಲಿ ಪ್ರಮುಖ ರಾಜಕೀಯ ಪಾತ್ರ ವಹಿಸಿದ್ದನ್ನು ಪ್ರಶ್ನಿಸಿದ್ದರು. ಅದಕ್ಕೆ ಇಂದು ಪ್ರತಿಕ್ರಿಯೆ ನೀಡಿದ ಶರದ್, ‘ವಯಸ್ಸು ಮುಖ್ಯವಲ್ಲ, ಅದು 82 ಆಗಿರಲಿ ಅಥವಾ 92’ ಎಂದು ಹೇಳಿದರು.
ಇದನ್ನೂ ಓದಿ:Alamgir Tareen: ಆತ್ಮಹತ್ಯೆಗೆ ಶರಣಾದ ಮುಲ್ತಾನ್ ಸುಲ್ತಾನ್ಸ್ ಫ್ರಾಂಚೈಸಿ ಮಾಲೀಕ
”ಬೇರೆ ಪಕ್ಷಗಳಲ್ಲಿ ನಾಯಕರು ವಯಸ್ಸಾದ ನಂತರ ನಿವೃತ್ತಿಯಾಗುತ್ತಾರೆ, ಬಿಜೆಪಿಯಲ್ಲಿ ನಾಯಕರು 75ಕ್ಕೆ ನಿವೃತ್ತರಾಗುತ್ತಾರೆ, ನೀವು ಯಾವಾಗ ನಿಲ್ಲುಸುತ್ತೀರಿ? ನೀವು ಹೊಸ ಜನರಿಗೆ ಅವಕಾಶ ನೀಡಬೇಕು. ನಾವು ತಪ್ಪು ಮಾಡಿದರೆ ನಮಗೆ ತಿಳಿಸಿ, ನಿಮ್ಮ ವಯಸ್ಸು 83, ನೀವು ರಾಜಕೀಯ ನಿಲ್ಲಿಸುತ್ತೀರಾ ಇಲ್ಲವೇ?” 63 ವರ್ಷದ ಅಜಿತ್ ಪವಾರ್ ಹೇಳಿದ್ದರು.
ಕೆಲ ದಿನಗಳ ಹಿಂದೆ ಅಜಿತ್ ಪವಾರ್ ಅವರು ಎಂಟು ಮಂದಿ ಎನ್ ಸಿಪಿ ಶಾಸಕರೊಂದಿಗೆ ಶಿಂಧೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಸೂಚಿಸಿದ್ದರು. ಅಜಿತ್ ಪವಾರ್ ಅವರನ್ನು ಮಹಾರಾಷ್ಟ್ರದ ಡಿಸಿಎಂ ಮಾಡಲಾಗಿದೆ.