Advertisement
ದೇಶದ ಸಂಸ್ಕೃತಿ ಮತ್ತು ಪರಂಪರೆಯ ಜತೆಗೆ ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಬೇಕಿದೆ. ಅದಮ್ಯ ಚೇತನ ಸಂಸ್ಥೆ ಈ ವರ್ಷ ಪ್ರಕೃತಿ ಮತ್ತು ಸಂಸ್ಕೃತಿ ವಿಷಯದ ಮೇಲೆ ಉತ್ಸವ ಆಚರಣೆ ಮಾಡುತ್ತಿರುವುದು ಸಂತಸದ ಸಂಗತಿ ಎಂದರು.
Related Articles
Advertisement
ಸತ್ಯಾಗ್ರಹ-ಸಚ್ಚಾಗ್ರಹ-ಸಸ್ಯಾಗ್ರಹ: ಕೇಂದ್ರ ರಾಸಾಯನಿಕ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ಮಾತನಾಡಿ, 1917ರಲ್ಲಿ ಮಹಾತ್ಮಾ ಗಾಂಧೀಜಿಯವರು ಬಿಹಾರದ ಚಂಪಾರಣ್ಯದಲ್ಲಿ “ಸತ್ಯಾಗ್ರಹ’ ಆರಂಭಿಸಿದ್ದರು. ಅವರಿಂದ ಪ್ರೇರಿತರಾದ ಪ್ರಧಾನಿ ನರೇಂದ್ರ ಮೋದಿ “ಸಚ್ಚಾಗ್ರಹ’ ಆರಂಭಿಸಿದ್ದಾರೆ. ಅದೇ ರೀತಿ ಅದಮ್ಯ ಚೇತನ ಸಂಸ್ಥೆ “ಸಸ್ಯಾಗ್ರಹ’ ಯೋಜನೆ ಆರಂಭಿಸಿದೆ.
ಈ ಮೂಲಕ ರಾಜ್ಯದಲ್ಲಿ 1.5 ಕೋಟಿ ಸಸಿನೆಡುವ ಯೋಜನೆ ಆರಂಭಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಗುಜರಾತ್‌ನ ಅಹಮದಾಬಾದ್‌ನಲ್ಲಿ ಪ್ರತಿ ಭಾನುವಾರ ಸೈಕಲ್ ಡೇ ಆರಂಭಿಸಿರುವ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಭಾನುವಾರ “ಹಸಿರು ಸೈಕಲ್ ದಿನ’ ಆರಂಭಿಸಲಾಗುವುದು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರಿಗೆ ಭಗವದ್ಗೀತೆ ಪುಸ್ತಕ ಮತ್ತು ಅನ್ನಪೂರ್ಣೇಶ್ವರಿ ವಿಗ್ರಹ ನೀಡಿ ಸನ್ಮಾನಿಸಲಾಯಿತು. ರಾಜ್ಯಪಾಲ ವಜುಬಾಯಿ ವಾಲಾ, ಅದಮ್ಯ ಚೇತನದ ವ್ಯವಸ್ಥಾಪಕ ಟ್ರಸ್ಟಿ ತೇಜಸ್ವಿನಿ ಅನಂತಕುಮಾರ್ ಹಾಗೂ ನ್ಯಾಷನಲ್ ಕಾಲೇಜು ಅಧ್ಯಕ್ಷ ಡಾ. ಎ.ಎಚ್. ರಾಮ್‌ರಾವ್ ಉಪಸ್ಥಿತರಿದ್ದರು. ಮೂರು ದಿನ ನಡೆಯುವ ಸೇವಾ ಉತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಮಕ್ಕಳ ಪ್ರಕೃತಿ-ಸಂಸ್ಕೃತಿ ಆವಿಷ್ಕಾರ: ಅಲ್ಲಿ ಮಕ್ಕಳು ಭವಿಷ್ಯದ ಬಗ್ಗೆ ಕಾಳಜಿ ತೋರುತ್ತಿದ್ದರು. ಸಂಸ್ಕೃತಿ, ಪರಿಸರ ಉಳಿಸುವುದು ಹಾಗೂ ಆ ನಿಟ್ಟಿನಲ್ಲಿ ನೈಸರ್ಗಿಕ ಸಂಪತ್ತಿನ ಪುನರ್‌ಬಳಕೆ ಕುರಿತು ಮಕ್ಕಳೇ ಸಂಶೋಧನೆ ನಡೆಸಿ, ಹಿರಿಯರಿಗೂ ಕಿರಿಯರಿಗೂ ಪಾಠ ಹೇಳುತ್ತಿದ್ದರು.
ನಗರದ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಅದಮ್ಯ ಚೇತನ ಸೇವಾ ಉತ್ಸವದಲ್ಲಿ ಆಯೋಜಿಸಿರುವ ಪ್ರಕೃತಿ-ಸಂಸ್ಕೃತಿ ಹೆಸರಿನ ಪರಿಸರ ರಕ್ಷಣೆ ಹಾಗೂ ಪುನಶ್ಚೇತನ ಕುರಿತ ಪ್ರದರ್ಶನದಲ್ಲಿ ನಗರದ ಸುಮಾರು 17 ಶಾಲೆಗಳ ಮಕ್ಕಳು ಹೊಸ ಮಾದರಿಯ ಸಂಶೋಧನೆ ನಡೆಸಿ ತಮ್ಮ ಜಾಣ್ಮೆ ಪ್ರದರ್ಶನ ಮಾಡುತ್ತಿದ್ದಾರೆ.
ನೇಚರ್ ಸೈನ್ಸ್ ಇಂಟರ್ನ್ಶಿಪ್ ಪ್ರೋಗಾಂ ಅಡಿಯಲ್ಲಿ ಅದಮ್ಯ ಚೇತನ ಸಂಸ್ಥೆ ಹಾಗೂ ಐಐಎಸ್ಸಿ ಬೆಂಗಳೂರು ಜಂಟಿಯಾಗಿ ನಗರದ ಸುಮಾರು 72 ಶಾಲೆಯ ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜತೆಗೆ ವಿಜ್ಞಾನದ ಬೆಳವಣಿಗೆ ಕುರಿತು ಎರಡು ತಿಂಗಳು ತರಬೇತಿ ನೀಡಿ, ಮಕ್ಕಳಿಂದಲೇ ಹೊಸ ಆವಿಷ್ಕಾರ ನಡೆಸುವ ಪ್ರಯೋಗ ಮಾಡಿದ್ದಾರೆ.
ಇದರಲ್ಲಿ ಪರಿಸರ ಸಂರಕ್ಷಣೆ, ನವೀಕರಣ ಇಂಧನ ಬಳಕೆ, ಹೆಚ್ಚಿನ ಖರ್ಚಿಲ್ಲದೇ ಮನೆಯ ಅಕ್ಕಪಕ್ಕದ ಖಾಲಿ ಜಾಗದಲ್ಲೇ ಪವನ ವಿದ್ಯುತ್ ಉತ್ಪಾದನೆ, ಅಂತರ್ಜಲ ಮರುಪೂರಣ ಮಾಡುವ ಸರಳ ವಿಧಾನ, ನಗರ ಪ್ರದೇಶದ ತಾರಸಿ ಮೇಲೆ ಕಡಿಮೆ ನೀರು ಬಳಸಿ ತರಕಾರಿ ಬೆಳೆಯುವ ಪದ್ಧತಿ ಕುರಿತು
ತಮ್ಮದೇ ರೀತಿಯಲ್ಲಿ ಸಂಶೋಧನೆ ನಡೆಸಿ ಪ್ರಾತ್ಯಕ್ಷಿಗಗಳನ್ನು ಪ್ರದರ್ಶನ ನಡೆಸಿದ್ದಾರೆ. ಇದಲ್ಲದೇ ರಕ್ಷಣಾ ಇಲಾಖೆಯ ಯುದ್ಧ ವಿಮಾನಗಳ ಪ್ರದರ್ಶನ, ಎಚ್.ಎ.ಎಲ್ ವಿಮಾನ ತೈಯಾರಿಕಾ ಮಾದರಿ, ಅದಮ್ಯ ಚೇತನ ಮಧ್ಯಾಹ್ನದ ಬಿಸಿಯೂಟ ಸಿದ್ಧತೆ ಕುರಿತ ಪ್ರಾತ್ಯಕ್ಷಿಕೆ ಕೂಡ ಉತ್ಸವದಲ್ಲಿದೆ.